ಸಾಮಾನ್ಯ ಬೋಗಿ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ನೈಋತ್ಯ ರೈಲ್ವೆ

ಬೆಂಗಳೂರು, ಜುಲೈ 06: ಪ್ರಯಾಣಿಕರಿಗೆ ಸಹಾಯಕವಾಗಲು ನೈಋತ್ಯ ರೈಲ್ವೆ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದೆ. ಈ ಮೂಲಕ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಜನರ ಬಹುದಿನದ ಬೇಡಿಕೆಗೆ ರೈಲ್ವೆ ಇಲಾಖೆ ಮನ್ನಣೆ ನೀಡಿದೆ.

ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯ 19 ರೈಲುಗಳಿಗೆ ಹೆಚ್ಚುವರಿ ಬೋಗಿಯನ್ನು ಅಳವಡಿಕೆ ಮಾಡಿದೆ. ಎಲ್ಲಾ ರೈಲುಗಳಿಗೆ ಅಳವಡಿಕೆ ಮಾಡಿರುವ ಬೋಗಿಯು ಸಾಮಾನ್ಯ ಬೋಗಿಯಾಗಿದ್ದು, ಪ್ರತಿದಿನ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

SWR Decided To Add Additional Coaches For General Passengers Train List

ಪ್ರಯಾಣಿಕರ ಬೇಡಿಕೆಯಂತೆ ವಿವಿಧ ರೈಲುಗಳಲ್ಲಿ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗುವಂತೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ಹೇಳಿದ್ದು, ಯಾವ-ಯಾವ ರೈಲುಗಳು ಎಂದು ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ರೈಲುಗಳ ಪಟ್ಟಿ ಹೀಗಿದೆ ನೋಡಿ

* ರೈಲು ನಂಬರ್ 17319/ 20. ಎಸ್ಎಸ್ಎಸ್ ಹುಬ್ಬಳ್ಳಿ-ಹೈದರಾಬಾದ್-ಎಸ್ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್. ಎರಡೂ ಬದಿ 1/7/2024 ರಿಂದ. ರೈಲು ನಂಬರ್ 17317/ 18 ಎಸ್ಎಸ್‌ಎಸ್‌ ಹುಬ್ಬಳ್ಳಿ-ದಾದರ್-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್. 3/7/2024ರಿಂದ ಎರಡೂ ಬದಿ ಹೆಚ್ಚುವರಿ ಬೋಗಿ ಸೇರ್ಪಡೆ.

* ರೈಲು ನಂಬರ್ 16207/ 16208 ಯಶವಂತಪುರ-ಮೈಸೂರು-ಯಶವಂತಪುರ ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 4ರಿಂದ ಮೈಸೂರು ಕಡೆಯಿಂದ. ಜುಲೈ 5ರಿಂದ ಯಶವಂತಪುರ ಕಡೆಯಿಂದ. ರೈಲು ನಂಬರ್ 16211/ 16212 ಯಶವಂತಪುರ-ಸೇಲಂ-ಯಶವಂತಪುರ ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 4ರಿಂದ ಯಶವಂತಪುರ, ಜುಲೈ 5ರಿಂದ ಸೇಲಂನಿಂದ ಹೆಚ್ಚುವರಿ ಬೋಗಿ.

* ರೈಲು ನಂಬರ್ 07327/ 07328. ಮೈಸೂರು-ಚಾಮರಾಜನಗರ-ಮೈಸೂರು ಪ್ರತಿದಿನದ ಪ್ಯಾಸೆಂಜರ್ ರೈಲು. ಜುಲೈ 2ರಿಂದ ಮೈಸೂರು, ಜುಲೈ 3ರಿಂದ ಚಾಮರಾಜನಗರ. ರೈಲು ನಂಬರ್ 16567/ 16568 ತುಮಕೂರು-ಶಿವಮೊಗ್ಗ ಟೌನ್-ತುಮಕೂರು ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 2ರಿಂದ ತುಮಕೂರು ಮತ್ತು ಜುಲೈ 3ರಿಂದ ಶಿವಮೊಗ್ಗ ಟೌನ್‌ನಿಂದ ಹೆಚ್ಚುವರಿ ಬೋಗಿ ಸೇರ್ಪಡೆ.

* ರೈಲು ನಂಬರ್ 07345/ 07346 ಚಾಮರಾಜನಗರ-ತುಮಕೂರು-ಚಾಮರಾಜನಗರ ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲು. ಜುಲೈ 2ರಿಂದ ಚಾಮರಾಜನಗರ, ಜುಲೈ 3ರಿಂದ ತುಮಕೂರು. ರೈಲು ನಂಬರ್ 16221/ 16222 ತಾಳಗುಪ್ಪ-ಮೈಸೂರು-ತಾಳಗುಪ್ಪ ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 2ರಿಂದ ಮೈಸೂರು, ಜುಲೈ 3ರಿಂದ ತಾಳಗುಪ್ಪ.

* ರೈಲು ನಂಬರ್ 06543/ 06544. ಮೈಸೂರು-ಚಾಮರಾಜನಗರ-ಮೈಸೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲು. ಜುಲೈ 3 ರಿಂದ ಮೈಸೂರು, ಚಾಮರಾಜನಗರ ಕಡೆಯಿಂದ ಬೋಗಿ ಸೇರ್ಪಡೆ. ರೈಲು ನಂಬರ್ 06213/ 06214 ಅರಸೀಕರೆ-ಮೈಸೂರು-ಅರಸೀಕೆರೆ ಪ್ರತಿದಿನದ ವಿಶೇಷ ರೈಲು. ಜುಲೈ 2ರಿಂದ ಅರಸೀಕೆರೆ, ಜುಲೈ 4ರಿಂದ ಮೈಸೂರು.

* ರೈಲು ನಂಬರ್ 16225/ 16226 ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಟೌನ್ ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 2ರಿಂದ ಮೈಸೂರು, ಜುಲೈ 4ರಿಂದ ಶಿವಮೊಗ್ಗ. ರೈಲು ನಂಬರ್ 07365/ 07366 ಶಿವಮೊಗ್ಗ ಟೌನ್-ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 2ರಿಂದ ಶಿವಮೊಗ್ಗ, ಜುಲೈ 4ರಿಂದ ಚಿಕ್ಕಮಗಳೂರು.

* ರೈಲು ನಂಬರ್ 06581/ 06582 ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ. ಜುಲೈ 5ರಿಂದ ಬೆಂಗಳೂರು, ಚನ್ನಪಟ್ಟಣ ಕಡೆಯಿಂದ. ರೈಲು ನಂಬರ್ 06273/ 06274 ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ. ಜುಲೈ 5ರಿಂದ ಬೆಂಗಳೂರು, ಅರಸೀಕೆರೆ ಎರಡು ಕಡೆಯಿಂದ.

* ರೈಲು ನಂಬರ್ 16239/ 16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಪ್ರತಿದಿನದ ಎಕ್ಸ್‌ಪ್ರೆಸ್. ಜುಲೈ 3ರಿಂದ ಯಶವಂತಪುರ, ಚಿಕ್ಕಮಗಳೂರು ಕಡೆಯಿಂದ ಬೋಗಿ ಸೇರ್ಪಡೆ. ರೈಲು ನಂಬರ್ 06267/ 06268 ಅರಸೀಕೆರೆ-ಮೈಸೂರು-ಅರಸೀಕೆರೆ ಪ್ರತಿದಿನದ ವಿಶೇಷ. ಜುಲೈ 5ರಿಂದ ಅರಸೀಕೆರೆ, ಜುಲೈ 8ರಿಂದ ಮೈಸೂರು ಕಡೆಯಿಂದ ಬೋಗಿ ಸೇರ್ಪಡೆ.

* ರೈಲು ನಂಬರ್ 06269/ 06270 ಮೈಸೂರು-ಎಸ್‌ಎಂವಿಟಿ ಬೆಂಗಳೂರು-ಮೈಸೂರು ಪ್ರತಿದಿನದ ಪ್ಯಾಸೆಂಜರ್ ವಿಶೇಷ. ಜುಲೈ 5ರಿಂದ ಮೈಸೂರು, ಜುಲೈ 7ರಿಂದ ಎಸ್‌ಎಂವಿಟಿ ಬೆಂಗಳೂರು. ರೈಲು ನಂಬರ್ 16529/ 16530 ಎಸ್‌ಎಂವಿಟಿ ಬೆಂಗಳೂರು-ಕಾರೈಕಲ್-ಎಸ್‌ಎಂವಿಟಿ ಬೆಂಗಳೂರು ಜುಲೈ 6ರಿಂದ ಎಸ್‌ಎಂವಿಟಿ ಬೆಂಗಳೂರು, ಜುಲೈ 7ರಿಂದ ಕಾರೈಕಲ್ ಕಡೆಯಿಂದ.

* ರೈಲು ನಂಬರ್ 12295/ 12296 ಎಸ್ಎಂವಿಟಿ ಬೆಂಗಳೂರು-ದಾನಾಪುರ-ಎಸ್‌ಎಂವಿಟಿ ಬೆಂಗಳೂರು ಸಂಗಮಮಿತ್ರ ಪ್ರತಿದಿನದ ವಿಶೇಷ ರೈಲು. ಜುಲೈ 8ರಿಂದ ಎಸ್‌ಎಂವಿಟಿ ಬೆಂಗಳೂರು, ಜುಲೈ 10ರಿಂದ ದಾನಾಪುರದಿಂದ ಬೋಗಿ ಸೇರ್ಪಡೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+