South Western Railway: ಹಲವು ರೈಲುಗಳ ನಂಬರ್ ಬದಲಾವಣೆ, ಪಟ್ಟಿ ನೋಡಿ

ಬೆಂಗಳೂರು, ಜನವರಿ 24: ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದಿದೆ. ನೈಋತ್ಯ ರೈಲ್ವೆಯು ಹಲವು ರೈಲುಗಳ ಸಂಖ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮಾರ್ಚ್ 2025ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ. ರೈಲು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಗುವ ಗೊಂದಲ ತಪ್ಪಿಸಲು ಮುಂಚಿತವಾಗಿಯೇ ಈ ಕುರಿತು ಪ್ರಕಟಣೆ ಮೂಲಕ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳ ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ರೈಲುಗಳ ಸಂಖ್ಯೆಯನ್ನು ಮಾತ್ರ ಮಾರ್ಚ್‌ನಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದೆ.

SWR Announced Change The Train Numbers From March 1

ಸಂಖ್ಯೆ ಬದಲಾಗಲಿರುವ ರೈಲುಗಳ ಪಟ್ಟಿ

* ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ದೈನಂದಿನ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 12609 ರಿಂದ 16551ಕ್ಕೆ ಬದಲಾಗುತ್ತದೆ. ಇದು ಮಾರ್ಚ್ 1, 2025ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

* ಮೈಸೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 12610 ರಿಂದ 16552ಕ್ಕೆ ಬದಲಾಗುತ್ತದೆ. ಇದು ಮಾರ್ಚ್ 2, 2025ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುತ್ತದೆ.

* ಯಶವಂತಪುರ-ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 22677 ರಿಂದ 16561ಕ್ಕೆ ಬದಲಾಗುತ್ತದೆ. ಇದು ಮಾರ್ಚ್ 6, 2025ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

* ತಿರುವನಂತಪುರಂ ನಾರ್ತ್‌-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 22678 ರಿಂದ 16562ಕ್ಕೆ ಬದಲಾಗುತ್ತದೆ. ಇದು ಮಾರ್ಚ್ 7, 2025ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುತ್ತದೆ.

* ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 17311 ರಿಂದ 20679ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 7, 2025ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

* ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌. ರೈಲು ಸಂಖ್ಯೆ 17312 ರಿಂದ 20680ಕ್ಕೆ ಬದಲಾಗುತ್ತದೆ. ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

ರೈಲು ರದ್ದು ಮಾಹಿತಿ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ಮೆಮು ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಚಲಿಸುವ ಮೆಮು ವಿಶೇಷ ರೈಲನ್ನು ಜನವರಿ 20 ರಿಂದ ಮುಂದಿನ ಆದೇಶದ ತನಕ ರದ್ದುಗೊಳಿಸಲಾಗಿದೆ.

* ರೈಲು ಸಂಖ್ಯೆ 06535/ 06536 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ -ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು ಜನವರಿ 20ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ.

* ರೈಲು ಸಂಖ್ಯೆ 06537/ 06538 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು ಜನವರಿ 20ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+