ಉದ್ಯೋಗಿಗಳಿಗೆ ಕಾರು, ಅವರ ಹೆಂಡತಿಯರಿಗೆ ಚಿನ್ನಾಭರಣ, ಪೋಷಕರಿಗೆ ತೀರ್ಥಯಾತ್ರೆ: ಇದು ಸೂರತ್ ಉದ್ಯಮಿಯ ದೀಪಾವಳಿ ಬಂಪರ್ ಗಿಫ್ಟ್!
ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಮತ್ತು ಹಬ್ಬದ ಸಂದರ್ಭಗಳಲ್ಲಿ ಸಣ್ಣಪುಟ್ಟ ಬೋನಸ್‌ಗಳನ್ನ ನೀಡುವುದು ವಾಡಿಕೆ. ಆದರೆ, ಸೂರತ್ ಮೂಲದ ಖ್ಯಾತ ವಜ್ರದ ಕಂಪನಿಯಾದ ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಸಂಸ್ಥಾಪಕ ಸಾವ್ಜಿ ಧೋಲಾಕಿಯಾ ಅವರು ಈ ವಿಚಾರದಲ್ಲಿ ಸ್ವಲ್ಪ ವಿಭಿನ್ನವಾಗಿದ್ದಾರೆ.
ಉದ್ಯೋಗಿಗಳಿಗೆ ಕೇವಲ ಕಾರು, ಮನೆ ನೀಡುವುದಷ್ಟೇ ಅಲ್ಲದೆ, ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮುಖದಲ್ಲೂ ಖುಷಿ ನೋಡುವ ಸಲುವಾಗಿ ಕಾರ್ಪೊರೇಟ್ ಜಗತ್ತಿಗೆ ಹೊಸ ಮಾದರಿಯಾಗಿದ್ದಾರೆ.

ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್‌ನ ವಿನೂತನ ಕಾರ್ಪೊರೇಟ್ ಉಡುಗೊರೆ
ಕಳೆದ ಹಲವು ವರ್ಷಗಳಿಂದ ಸಾವ್ಜಿ ಧೋಲಾಕಿಯಾ ಅವರು ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಫ್ಲಾಟ್, ಕಾರು ಮತ್ತು ಫಿಕ್ಸೆಡ್ ಡೆಪಾಸಿಟ್‌ಗಳನ್ನ ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಆದರೆ, ಅವರ ಈ ಉಡುಗೊರೆ ಕೇವಲ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಉದ್ಯೋಗಿಗಳ ಪತ್ನಿಯರಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನ ಉಡುಗೊರೆಯಾಗಿ ನೀಡುವ ಪದ್ಧತಿಯನ್ನು ಅವರು ಬೆಳೆಸಿಕೊಂಡು ಬಂದಿದ್ದಾರೆ. ಈ ಮೂಲಕ ಉದ್ಯೋಗಿಯ ಯಶಸ್ಸಿನಲ್ಲಿ ಆತನ ಕುಟುಂಬದ ಪಾತ್ರವೂ ಇದೆ ಎಂಬುದನ್ನ ಅವರು ಸಾಬೀತುಪಡಿಸಿದ್ದಾರೆ.
ಉದ್ಯೋಗಿಗಳ ಪೋಷಕರಿಗೆ ತೀರ್ಥಯಾತ್ರೆ
ಕಂಪನಿಯು ಕೇವಲ ಯುವ ಉದ್ಯೋಗಿಗಳು ಹಾಗೂ ಅವರ ಪತ್ನಿಯರನ್ನ ಮಾತ್ರವಲ್ಲ, ಅವರ ಪೋಷಕರನ್ನೂ ಗೌರವಿಸುತ್ತದೆ. ವಯಸ್ಸಾದ ಪೋಷಕರಿಗೆ ಪ್ರತಿ ವರ್ಷ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ವಿಶೇಷ ತೀರ್ಥಯಾತ್ರೆಗಳನ್ನ ಆಯೋಜಿಸುತ್ತದೆ.
ಕೆಲಸದ ಸ್ಥಳದ ಆಚೆಗೂ ಉದ್ಯೋಗಿಗಳ ಕಲ್ಯಾಣಕ್ಕಾಗಿ ಶ್ರಮಿಸುವ ಧೋಲಾಕಿಯಾ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪೋಷಕರಿಗೆ ಉತ್ತಮ ಆರೈಕೆ ಹಾಗೂ ಗೌರವ ಸಿಕ್ಕಾಗ ಉದ್ಯೋಗಿಗಳು ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತಾರೆ ಎಂಬುದು ಧೋಲಾಕಿಯಾ ಅವರ ನಂಬಿಕೆಯಾಗಿದೆ.
ಉದ್ಯೋಗಿ ನಿಷ್ಠೆ ಹೆಚ್ಚಿಸಲು ಇದೇ ಸೂತ್ರ
ಸಾವ್ಜಿ ಧೋಲಾಕಿಯಾ ಅವರ ಪ್ರಕಾರ, ಉದ್ಯೋಗಿಗೆ ಕೆಲಸದ ಮೇಲೆ ನಿಷ್ಠೆ ಕೇವಲ ಸಂಬಳ ಅಥವಾ ವಾರ್ಷಿಕ ಬೋನಸ್‌ಗಳಿಂದ ಬರುವುದಿಲ್ಲ. "ನೀವು ಉದ್ಯೋಗಿಯ ಇಡೀ ಕುಟುಂಬವನ್ನು ಸಬಲೀಕರಣಗೊಳಿಸಿದರೆ, ಆತ ತನ್ನ ಇಡೀ ಜೀವನವನ್ನ ನಿಮ್ಮ ಕಂಪನಿಗಾಗಿ ಮುಡಿಪಾಗಿಡುತ್ತಾನೆ" ಎನ್ನುತ್ತಾರೆ ಧೋಲಾಕಿಯಾ.
1,260 Cars & 400 Flats as a Diwali Bonus! India’s Most Generous Boss!When Surat diamond tycoon Savji Dholakia made market headlines for gifting thousands of cars and houses to his employees, many called it "extreme corporate generosity."He didn’t inherit wealth, He dropped out of school at age 13, left his village with barely anything, and started learning diamond polishing from scratch.When he co-founded Hari Krishna Exports, he realized a fundamental business truth:"Products don't build empires--people do."His said that--if the company grows every helpful hand standard of living must grow with it, because Loyalty is a Two-Way Street.
— Kungfu Pande 🇮🇳 (Parody) (@pb3060) October 30, 2026
ಕಂಪನಿಯು ತನ್ನ ಉದ್ಯೋಗಿಯ ಇಡೀ ಕುಟುಂಬವನ್ನ ಬೆಂಬಲಿಸಿದಾಗ, ಉದ್ಯೋಗಿ ಮತ್ತು ಕಂಪನಿಯ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ ಎಂಬುದು ಅವರ ದೃಢವಾದ ನಂಬಿಕೆ.
ಸೂರತ್ ಉದ್ಯಮಿ ಸಾವ್‌ಜಿ ಧೋಲಾಕಿಯಾ ಅವರ ಕಾಳಜಿ
ಯಾವಾಗ ಉದ್ಯೋಗಿಗಳ ಕುಟುಂಬವು ಆರ್ಥಿಕವಾಗಿ ಭದ್ರವಾಗಿದೆ ಮತ್ತು ಕಂಪನಿಯು ತಮ್ಮ ಬೆಂಬಲಕ್ಕಿದೆ ಎಂದು ಭಾವಿಸುತ್ತದೆಯೋ, ಆಗ ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ಬದ್ಧತೆಯನ್ನ ಬೆಳೆಸಿಕೊಳ್ಳುತ್ತಾರೆ. ತಮ್ಮ ಕೆಲಸದ ಮೂಲಕ ಕಂಪನಿಗೆ ದುಪ್ಪಟ್ಟು ಲಾಭ ತಂದುಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ.
ಧೋಲಾಕಿಯಾ ಅವರ ಈ ವಿನೂತನ ಶೈಲಿಯು, ಕಾರ್ಪೊರೇಟ್ ಜಗತ್ತು ಉದ್ಯೋಗಿಗಳನ್ನ ಕೇವಲ ಕೆಲಸಗಾರರನ್ನಾಗಿ ನೋಡದೆ ಕುಟುಂಬದ ಸದಸ್ಯರಂತೆ ನೋಡಬೇಕು ಎಂಬ ಪಾಠವನ್ನ ಕಲಿಸುತ್ತದೆ.


Click it and Unblock the Notifications
