School Summer Holidays: ರಾಜ್ಯದಲ್ಲಿ ಅವಧಿಗೂ ಮುನ್ನ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಸಾಧ್ಯತೆ: ಕಾರಣ ಇಲ್ಲಿದೆ
School Summer Holidays: ರಾಜ್ಯದಲ್ಲಿ ಇನ್ನೇನು ಶಾಲಾ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗಲಿವೆ. ಮತ್ತೊಂದೆಡೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರೀಕ್ಷೆಗಳನ್ನು ಬೇಗ ಮುಗಿಸಿ ಶಾಲೆಗಳಿಗೆ ಅವಧಿಗೂ ಮುನ್ನ ಬೇಸಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಹವಾಮಾನ ಇಲಾಖೆ ಕೂಡ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗುತ್ತಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ಬೇಸಿಗೆ ರಜೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ರಾಜ್ಯದಲ್ಲಿ ಏಪ್ರಿಲ್‌ನಿಂದ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ನೀಡಲಾಗುತ್ತದೆ. ಆದರೆ ಈ ಬಾರಿ ರಾಜ್ಯಾದ್ಯಂತ ಬೇಸಿಗೆಗೂ ಮುನ್ನ ತಾಪಮಾನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಆದ್ದರಿಂದ ಈ ಬಾರಿ ಅವಧಿಗೂ ಮುನ್ನ ಬೇಸಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ. ಮಾರ್ಚ್‌ನಲ್ಲಿಯೇ ಶಾಲಾ ಮಕ್ಕಳಿಗೆ ಬೇಗ ಪರೀಕ್ಷೆಗಳನ್ನು ಮುಗಿಸಿ ಬಳಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇಗ ಅಂದ್ರೆ ಏಪ್ರಿಲ್‌ಗೂ ಮುನ್ನ ರಜೆ ಘೋಷಿಸುವ ಸಾಧ್ಯತೆಯಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಅಂದ್ರೆ, 2025ರಲ್ಲಿ ಬೇಸಿಗೆಗೂ ಮುನ್ನ ರಣಭೀಕರ ಬಿಸಿಲು ಮುಂದುವರೆದಿದೆ. ಪರಿಣಾಮ ಜನರು ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪೋಷಕರು ಗಮನ ಹರಿಸಿ ಬೇಸಿಗೆ ರಜೆ ಅವವಧಿಗೂ ಮುನ್ನ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ
* 2025ರ ಜನವರಿ 14ರ: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* 2025ರ ಫೆಬ್ರವರಿ 26 ಬುಧವಾರ - ಮಹಾ ಶಿವರಾತ್ರಿ
* 2025ರ ಮಾರ್ಚ್ 31 ಸೋಮವಾರ: ಖುತುಬ್ ಎ ರಂಜಾನ್
* 2025ರ ಏಪ್ರಿಲ್ 10 ಗುರುವಾರ: ಮಹಾವೀರ ಜಯಂತಿ
* 2025ರ ಏಪ್ರಿಲ್ 14 ಸೋಮವಾರ: ಡಾ.ಬಿಆರ್ ಅಂಬೇಡ್ಕರ್ ಜಯಂತಿ
* 2025ರ ಏಪ್ರಿಲ್ 18 ಶುಕ್ರವಾರ: ಗುಡ್ ಫ್ರೈಡೆ
* 2025ರ ಏಪ್ರಿಲ್ 30 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
* 2025ರ ಮೇ 01 ಗುರುವಾರ: ಕಾರ್ಮಿಕ ದಿನಾಚರಣೆ
* 2025ರ ಜೂನ್ 07 ಶನಿವಾರ: ಬಕ್ರೀದ್
* 2025ರ ಆಗಸ್ಟ್ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* 2025ರ ಆಗಸ್ಟ್ 27 ಬುಧವಾರ: ಗಣೇಶ ಚತುರ್ಥಿ
* 2025ರ ಸೆಪ್ಟೆಂಬರ್ 05 ಶುಕ್ರವಾರ: ಈದ್ ಮಿಲಾದ್
* 2025ರ ಅಕ್ಟೋಬರ್ 1 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2025ರ ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ
* 2025ರ ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* 2025ರ ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
* 2025ರ ಅಕ್ಟೋಬರ್ 22 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
* 2025ರ ನವೆಂಬರ್ 01 ಶನಿವಾರ -ಕನ್ನಡ ರಾಜ್ಯೋತ್ಸವ
* 2025ರ ಡಿಸೆಂಬರ್ 25 ಗುರುವಾರ: ಕ್ರಿಸ್ ಮಸ್
ಪರಿಮಿತ ರಜಾ ದಿನಗಳ ಪಟ್ಟಿ
* ದಿನಾಂಕ 14-01-2025 ಮಂಗಳವಾರ: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 2025ರ ಜನವರಿ 26: ಗಣರಾಜ್ಯೋತ್ಸವ
* ದಿನಾಂಕ 26-02-2025 ಬುಧವಾರ: ಮಹಾಶಿವರಾತ್ರಿ
* ದಿನಾಂಕ 31-03-2025 ಸೋಮವಾರ: ಖುತುಬ್ ಎ ರಂಜಾನ್
* ದಿನಾಂಕ 10-04-2025 ಗುರುವಾರ: ಮಹಾವೀರ ಜಯಂತಿ
* ದಿನಾಂಕ 14-04-2025 ಸೋಮವಾರ: ಡಾ.ಬಿಆರ್ ಅಂಬೇಡ್ಕರ್ ಜಯಂತಿ
* ದಿನಾಂಕ 18-04-2025 ಶುಕ್ರವಾರ: ಗುಡ್ ಪ್ರೈಡೆ
* ದಿನಾಂಕ 30-04-2025 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
* ದಿನಾಂಕ 01-05-2025 ಗುರುವಾರ: ಕಾರ್ಮಿಕ ದಿನಾಚರಣೆ
* ದಿನಾಂಕ 07-06-2025 ಶನಿವಾರ: ಬಕ್ರೀದ್
* ದಿನಾಂಕ 15-08-2025 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* ದಿನಾಂಕ 27-08-2025 ಬುಧವಾರ: ಗಣೇಶ ಚತುರ್ಥಿ
* ದಿನಾಂಕ 05-09-2025 ಶುಕ್ರವಾರ: ಈದ್ ಮಿಲಾದ್
* ದಿನಾಂಕ 01-10-2025 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
* ದಿನಾಂಕ 02-10-2025 ಗುರುವಾರ: ಗಾಂಧಿ ಜಯಂತಿ
* ದಿನಾಂಕ 07-10-2025 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* ದಿನಾಂಕ 20-10-2025 ಸೋಮವಾರ: ನರಕ ಚತುರ್ದಶಿ
* ದಿನಾಂಕ 22-10-2025 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
* ದಿನಾಂಕ 01-11-2025 ಶನಿವಾರ: ಕನ್ನಡ ರಾಜ್ಯೋತ್ಸವ
* ದಿನಾಂಕ 25-12-2025 ಗುರುವಾರ: ಕ್ರಿಸ್ ಮಸ್












Click it and Unblock the Notifications