ಅಂಗನವಾಡಿ ಮಕ್ಕಳಿಗೂ ಸಿಗುತ್ತೆ ಸಮವಸ್ತ್ರ, ಶೂ, ಕೊಡೆ!
Recommended Video

ಬೆಂಗಳೂರು, ಸೆ.26: ಅರೆರೇ.. ಅಂಗನವಾಡಿ ಮಕ್ಕಳು ಎಷ್ಟು ಚೆಂದ ಕಾಣ್ತಿವೆ, ನಂದೇ ದೃಷ್ಟಿ ತಾಕುತ್ತೆ, ಹೊಸ ಬೂಟು, ಹೊಸ ಅಂಗಿ, ಹೊಸ ಕೊಡೆ ಹೀಗೆ ಬಾಯ್ಮೇಲೆ ಬೆರಳಿಟ್ಟು ಮನಸಲ್ಲೇ ಅಂದುಕೊಳ್ಳುವ ಸಮಯ ದೂರವಿಲ್ಲ.
ಸರ್ಕಾರಿ ಅಂಗನವಾಡಿ ಮಕ್ಕಳು ಇನ್ನು ಮುಂದೆ ಕಾನ್ವೆಂಟ್ ಮಕ್ಕಳ ಹಾಗೆ ಮಿಂಚಲಿವೆ, ಯೂನಿಫಾರ್ಮ್ ತೊಟ್ಟು, ಬೂಟು ಹಾಕಿ ಪುಟ್ಟಪುಟ್ಟ ಹೆಜ್ಜೆ ಹಾಕುತ್ತಾ ಹೋಗುತ್ತಾರೆ.

ಶಾಲಾ ಮಕ್ಕಳಿಗೆ ನೀಡುವಂತೆ ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ಭಾಗ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುವುದರ ಜತೆಗೆ ಶೂಸ್, ಕೊಡೆಯನ್ನು ಕೂಡ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾನ ಇಲಾಖೆ ಚಿಂತನೆ ನಡೆಸಿದೆ.
ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ ತಕ್ಷಣವೇ ಯೋಜನೆ ಜಾರಿಗೆ ಬರಲಿದೆ. ಇನ್ನು ಮಲೆನಾಡು-ಕರಾವಳಿ ಭಾಗದ ಶಾಲಾ ಮಕ್ಕಳಿಗೆ ರೇನ್ ಕೋಟ್, ಸ್ವೆಟರ್, ಛತ್ರಿ ವಿತರಣೆ ಮಾಡುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮುಖ್ಯಮಂತ್ರಿಗಳ ಒಪ್ಪಿಗೆಗಾಗಿ ಕಾಯುತ್ತಿದೆ. ಒಪ್ಪಿಗೆ ಬಳಿಕ ಎಲ್ಲವನ್ನೂ ವಿವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಟಾಣಿಗಳು ಸಮವಸ್ತ್ರ ತೊಟ್ಟು ಅಂಗನವಾಡಿಗೆ ಹೋಗುವ ಸಮಯ ಸನಿಹದಲ್ಲಿದೆ ಎನ್ನಬಹುದು.












Click it and Unblock the Notifications