ಶಿರಾ ಬಳಿ ಭೀಕರ ಅಪಘಾತ ಬೈಕಿನಲ್ಲಿದ್ದ ಮೂವರು ಸಾವು
ಬೆಂಗಳೂರು, ಡಿ.5: ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಟೆಂಪೋ ಟ್ರಾವೆಲ್ಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟು ಮೂವರಿಗೆ ತೀವ್ರ ಗಾಯಗಳಾಗಿದೆ.
ಮೃತಪಟ್ಟವರನ್ನು ಸೈಯದ್, ಮುಬಾರಕ್, ಇರ್ಫಾನ್ ಶಂಷುದ್ದೀನ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಮೂವರು ಟೆಂಪೋ ಟ್ರಾವೆಲರ್ ಪ್ರಯಾಣಿಕರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪಟ್ಟನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಟೆಂಪೋ ಟ್ರಾವೆಲರ್ ಚಾಲಕನನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ತುಮಕೂರು, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಚಿಂತಾಮಣಿ
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೇತನಾಯಕನಹಳ್ಳಿಯ ತೋಟವೊಂದರಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಗ್ರಾಮದ ನಿವಾಸಿ ಕೆಂಚಣ್ಣ (52)ಎಂದು ಗುರುತಿಸಲಾಗಿದೆ. ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆಯನ್ನು ನಡೆಸಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಂಡ್ಯ
ಅಪರಿಚಿತ ವ್ಯಕ್ತಿಯೊಬ್ಬ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದ ಬಳಿ ನಡೆದಿದೆ.ಈತ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಮೃತನಿಗೆ ಅಂದಾಜು 60 ವರ್ಷ, ಬಿಳಿನೀಲಿ ಬಣ್ಣದ ಪ್ಯಾಂಟ್, ಹಸಿರು ಬಿಳಿ ಚೆಕ್ಸ್ ಷರ್ಟ್ ತೊಟ್ಟಿದ್ದು, ಷರ್ಟ್ ಕಾಲರ್ ನಲ್ಲಿ ಬೆಂಗಳೂರಿನ ಶೇಷಾದ್ರಿಪುರಂನ ಕಲ್ಪನಾ ಟೈಲರ್ ಎಂಬ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶ್ರೀರಂಗಪಟ್ಟಣ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

ಕಲುಷಿತ ನೀರು ಸೇವನೆ ಓರ್ವ ಸಾವು
ಬೆಂಗಳೂರು : ಕಲುಷಿತ ನೀರು ಸೇವನೆಯಿಂದ 15 ಮಂದಿ ಅಸ್ವಸ್ಥರಾಗಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಉತ್ತರ ತಾಲೂಕಿನ ಮಲ್ಲಸಂದ್ರದಲ್ಲಿ ನಡೆದಿದೆ. ನಾಗರಾಜಯ್ಯ(55) ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ದುರ್ದೈವಿ.
ಕಳೆದ ಮೂರು ದಿನಗಳಿಂದ ಮಲ್ಲಸಂದ್ರ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನೀರು ಸೇವನೆಯಿಂದ 15 ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಸೊಡೆಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರ ಆಕ್ರೋಶ: ಕುಡಿಯುವ ನೀರಿನ ಪೈಪ್‌ನಲ್ಲಿ ಕಲುಷಿತ ನೀರು ಮಿಶ್ರಣವಾಗಿ ಬರುತ್ತಿದ್ದು, ಗ್ರಾಪಂ ಸದಸ್ಯರು ದುರಸ್ತಿ ಮಾಡುತ್ತಿಲ್ಲ ಎಂದು ಕಿತ್ತನಹಳ್ಳಿ ಗ್ರಾಮಸ್ಥರು ಗ್ರಾಪಂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ದೊಡ್ಡಹಸಾಳ ಗ್ರಾಮದಲ್ಲಿ ಸಂಭವಿಸಿರುತ್ತದೆ. ರಾಮಾಂಜಿ ಎಂಬುವರು ಅದೇ ಗ್ರಾಮದ ಮುನಿರಾಜು ರವರ ಬಳಿ 30,000 ರೂ.ಗಳನ್ನು ಈ ಹಿಂದೆ ಬಡ್ಡಿಗೆ ತೆಗೆದುಕೊಂಡಿದ್ದು. ಈಗಿರುವಲ್ಲಿ ಈ ತಿಂಗಳ ಬಡ್ಡಿಹಣವನ್ನು ನೀಡಲು ರಾಮಾಂಜಿ ರವರು ತಡಮಾಡಿದ್ದಕ್ಕೆ ಮುನಿರಾಜು ರವರು ರಾಮಾಂಜಿ ರವರನ್ನು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಸಂಭವಿಸಿರುತ್ತದೆ.

ಚಿತ್ರದುರ್ಗ
ಅಸ್ವಾಭಾವಿಕ ಮರಣ ಪ್ರಕರಣ
ಹಿರಿಯೂರು: ಪ್ರತಿದಿನ ಕುಡಿಯುವ ಚಟವಿದ್ದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪರಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದ ಈ ದಿನ ಬೆಳಿಗ್ಗೆಯ ಮಧ್ಯದ ಅವಧಿಯಲ್ಲಿ ನಡೆದಿದೆ. ಗ್ರಾಮದ ತಿಮ್ಮಣ್ಣ ಎಂಬುವರಿಗೆ ಪ್ರತಿದಿನ ಕುಡಿಯುವ ಚಟವಿದ್ದು, ನಿನ್ನೆ ರಾತ್ರಿ ಚೆನ್ನಾಗಿ ಕುಡಿದು ಹೊಲಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ರಾತ್ರಿ ಯಾವುದೋ ಸಮಯದಲ್ಲಿ ಮನೆಯ ಹತ್ತಿರ ಬಂದು ಚಪ್ಪರದ ಗೂಟಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಶಿವಮೊಗ್ಗ
ಹೊಳೆಹೊನ್ನೂರು ಠಾಣೆ ಅಪಘಾತದಿಂದ ಸಾವು ಪ್ರಕರಣ : ಮೃತ ವಿಜಯಕುಮಾರ ನು ಮತ್ತು ಚಿಕ್ಕಪ್ಪನ ಮಗಳಾದ ಕು ಅಕ್ಷತಾ ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಎನ್ ಹೆಚ್ 13 ರಸ್ತೆಯ ಲ್ಲಿ ಬರುತ್ತಿರುವಾಗ ಚಿಕ್ಕಕೊಡ್ಲಿ ಹತ್ತಿರ ಆರೋಪಿ ಕೆಎ 14 8388 ರ ಬಸ್ ಚಾಲಕನು ಬೈಕಿಗೆ ಡಿಕ್ಕಿ ಹೊಡೆಸಿದ್ದ ಪರಿಣಾಮ ಮೃತ ವಿಜಯಕುಮಾರನು ಶಿವಮೊಗ ಸಹ್ಯಾದ್ರಿ ನಾರಾಯಣ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ












Click it and Unblock the Notifications