ವೈಟ್ ಫೀಲ್ಡ್ ಬಳಿ ಟ್ಯಾಂಕರ್ ಹರಿದು ಬಾಲೆ ಸಾವು

ಬೆಂಗಳೂರು, ಡಿ.4: ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಹೃದಯ ವಿದ್ರಾವಕ ಅಪಘಾತ ಸಂಭವಿಸಿದ್ದು, ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ವೈಟ್ ಫೀಲ್ಡ್ ನಿವಾಸಿ ಸುರೇಶ್ ಹಾಗೂ ನಾಗಲಕ್ಷ್ಮಿ ದಂಪತಿಯ ಪುತ್ರಿ ಧನುಶ್ರೀ ಮೃತಪಟ್ಟಿರುವ ದುರ್ದೈವಿ.

ಸುರೇಶ್ ಅವರು ವೈಟ್ ಫೀಲ್ಡ್ ಬಳಿ ಚಿಲ್ಲರೆ ಅಂಗಡಿ ವ್ಯಾಪಾರಿಯಾಗಿದ್ದಾರೆ. ನಾಗಲಕ್ಷ್ಮಿ ಅವರು ಬುಧವಾರ ಬೆಳಗ್ಗೆ ಅವರು ತಮ್ಮ ಹಾಗೂ ಮಗುವಿನ ಜತೆ ಹೊರಗಡೆ ಹೊರಟ್ಟಿದ್ದಾರೆ. ಬೈಕಿನಲ್ಲಿ ಮೂವರು ಹೂಡಿ ಸರ್ಕಲ್ ಬಳಿಯ ರಾಜಪಾಳ್ಯದಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಬೈಕಿಗೆ ಗುದ್ದಿದೆ. ಬೈಕಿನಲ್ಲಿದ್ದವರೆಲ್ಲ ಕೆಳಗೆ ಬಿದ್ದಿದ್ದಾರೆ.

ಬಲಭಾಗದಲ್ಲಿ ಬಿದ್ದ ಮಗು ಧನುಶ್ರೀ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ನಾಗಲಕ್ಷ್ಮಿ ಹಾಗೂ ಅವರ ತಮ್ಮ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.

ಘಟನೆ ನಂತರ ಆಕ್ರೋಶ ವ್ಯಕ್ತಪಡಿಸಿ ಗ್ಯಾಸ್ ಟ್ಯಾಂಕರ್ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಕೆಆರ್ ಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಆಕ್ರೋಶಭರಿತ ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಸಮಾಧಾನಪಡಿಸಿ ಗ್ಯಾಸ್ ಟ್ಯಾಂಕರ್ ಚಾಲಕ ಕುಮಾರಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ..

ಶಿವಮೊಗ್ಗ

ಶಿವಮೊಗ್ಗ

ಪಿರ್ಯಾದಿ ನಿರಂಜನ ವಾಸ; ಕೋಟೆ ತಾಂಡ ಇವರ 3 ಎಕರೆ 20 ಗುಂಟೆ ಜನಮೀನಿನಲ್ಲಿ ಕಟಾವು ಮಾಡಿ ರಾಶಿ ಹಾಕಿದ್ದ ಜೋಳಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟುಸುಮಾರು 70,000/- ನಷ್ಟವಾಗಿರುತ್ತದೆ.

ಚಾಮರಾಜನಗರ

ಚಾಮರಾಜನಗರ

ಕೊಳ್ಳೇಗಾಲ: ಬೋರ್ ವೆಲ್ ನಿಂದ ನೀರು ಸಿಗದೆ, ಅತ್ತ ಬೆಳೆಯೂ ಬೆಳೆಯಲಾರದೆ ಕಂಗಾಲಾದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಂದರಹಳ್ಳಿಯ ತಿಮ್ಮದಾಸ (೩೮) ಮೃತ ರೈತ.

ಈತ ನಿನ್ನೆ ಸಂಜೆ ಅರಣ್ಯ ಭಾಗಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ತನ್ನ ಭಾವನಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಭಾವ ರಾಜಣ್ಣ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ತನ್ನ 4-5 ಎಕರೆ ಜಮೀನಿನಲ್ಲಿ ಕಳೆದ ಹಲವು ವರ್ಷಗಳಿಂದ 7-8 ಬೋರ್ ವೆಲ್ ಗಳನ್ನು ಕೊರೆಸಿದ್ದ ತಿಮ್ಮದಾಸ ನೀರು ಸಿಗದೆ ಕಂಗಾಲಾಗಿದ್ದನು.ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಕೋಲಾರ

ಕೋಲಾರ

ಮಾಲೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರೇರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು, ಭಾವನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶಶಿಕಲಾ ಕೋಂ ಮುನಿನರಸಪ್ಪ ರವರು ರಾತ್ರಿ 9 ಗಂಟೆಯಲ್ಲಿ ತನ್ನ ಗಂಡ ಮುನಿನರಸಪ್ಪ ರವರ ಕಿರುಕುಳದಿಂದಾಗಿ ಮನನೊಂದು ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಎನ್ ಆರ್ ಪುರ ಪೊಲೀಸ್ ಠಾಣೆ ಮೊ.ಸಂ. 168/2013 - ಕಲಂ: 3 & 25 ಭಾರತೀಯ ಆಯುಧ ಕಾಯ್ದೆ ಪಿ ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊದಿಗೆ ಸಿಂಸೆ ಗ್ರಾಮದ ಚಟ್ನಡ್ಲು ಸರ್ಕಲ್ ನಲ್ಲಿರುವ ಏಲಿಯಾಸ್ ಎಂಬುವನು ತನ್ನ ಮನೆಯ ಪಕ್ಕದ ಕೊಟ್ಟಿಗೆಯ ಮುಂದೆ ಯಾವುದೇ ಪರವಾನಗಿ ಇಲ್ಲದೆ ಒಂದು ಎಸ್.ಬಿ.ಎಂ.ಎಲ್ ಬಂದೂಕವನ್ನು ಹಿಡಿದುಕೊಂಡು ನಿಂತಿದ್ದವನ ಮೇಲೆ ದಾಳಿ ಮಾಡಲಾಗಿ ಆರೋಪಿ ಬಂದೂಕವನ್ನು ಅಲ್ಲಿಯೇ ಬಿಸಾಡಿ ತಲೆಮರೆಸಿಕೊಂಡಿರುತ್ತಾನೆ. ನಂತರ ಬಂದೂಕು ಹಾಗೂ ಒಂದು ಗಜಕಡ್ಡಿಯನ್ನು ಅಮಾನತ್ತು ಮಾಡಿ ಪ್ರಕರಣ ದಾಖಲಿಸಿದ್ದಾಗಿರುತ್ತೆ.

ಗದಗ

ಗದಗ

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ನರಸಾಪುರ ಗ್ರಾಮದಲ್ಲಿ ನಡೆದಿದೆ.

ನಿವೇದಿತಾ(28), ಕಾವ್ಯ(7), ಪುರ್ಣಿಮಾ(6) ಹಾಗೂ ಒಂದು ವರ್ಷದ ಮಗು ಸೃಜನ್ ಬಾವಿಗೆ ಬಿದ್ದ ತಾಯಿ ಮಕ್ಕಳು. ಕೌಟುಂಬಿಕ ಕಲಹದಿಂದ ಬೇಸತ್ತ ನಿವೇದಿತಾ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈವರೆಗೆ ಎರಡು ಮಕ್ಕಳ ಶವ ಪತ್ತೆಯಾಗಿದ್ದು, ಇನ್ನೂ ಉಳಿದ ಎರಡು ಶವಗಳಿಗಾಗಿ ಆಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉಡುಪಿ

ಉಡುಪಿ

ಡಿ.3ರಂದು ಪಿರ್ಯಾದಿ ಗಣೇಶ್ ರೈ (34) ಬಸ್ ಕೆಎ 19 ಸಿ 8933 ರ ನಿರ್ವಹಕರಾಗಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೊರಟ್ಟಿದ್ದು ಗಣೇಶ್ ರೈ ರವರ ಬಸ್ಸಿನಲ್ಲಿ ಚಾಲಕರಾಗಿ ಖಲೀಲ್ ಮತ್ತು ಕ್ಲೀನರ್ ಆಗಿ ದಿನೇಶ ಪಡು ಗ್ರಾಮದ ಮಾರಿಗುಡಿ ಬಸ್ ನಿಲ್ದಾಣದ ಬಳಿ ತಲುಪಿ ಪ್ರಯಾಣಿಕರನ್ನು ಇಳಿಸಿ ಮುಂದೆ ಹೋಗುತ್ತಿದ್ದಂತೆ ಅದಾಗಲೆ ಕಾಪು ಮಾರಿಗುಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎ 19 ಸಿ 9658 ನೇ ಬಸ್ಸಿನ ಚಾಲಕನಾದ ಕುಮಾರನು ಬಸ್ಸಿನಿಂದ ಕೆಳಗೆ ಇಳಿದು ಬಂದು ಗಣೇಶ್ ರೈ ಬಸ್ಸು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಅದನ್ನು ವಿಚಾರಿಸಲು ಹೋದ ಗಣೇಶ್ ರೈರವರಿಗೆ ಆರೋಪಿ 'ಕೆರಂದೆ ಬುಡೆಯೆ 'ಎಂಬುದಾಗಿ ತುಳುವಿನಲ್ಲಿ ಜೀವ ಬೆದರಿಕೆ ಹಾಕಿ ನಂತರ ಕೈಯಿಂದ ಹೊಡೆದಿರುತ್ತಾರೆ. 264/2013 ಕಲಂ 341 323 506 504 ಐ.ಪಿ.ಸಿ ಯಂತೆ ಪ್ರಕರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+