ಕಾಂಗ್ರೆಸ್ ನಾಯಕರು ಕಂಡಂತೆ ರಾಜೀವ್ ಗಾಂಧಿ, ದೇವರಾಜ ಅರಸು ಹೀಗಿದ್ದರು!
ಬೆಂಗಳೂರು, ಆ. 20: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನ ಆಗಸ್ಟ್ 20. ಕಾಂಗ್ರಸ್ ನಾಯಕರೆಲ್ಲರೂ ಶುಕ್ರವಾರ ಒಗ್ಗಟ್ಟಾಗಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ದಿ. ರಾಜೀವ್ ಗಾಂಧಿ ಹಾಗೂ ದಿ. ದೇವರಾಜ ಅರಸು ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.
ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಹಲವರು ದಿ. ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ನೆನಪು ಹಂಚಿಕೊಂಡರು. ಒಬ್ಬೊಬ್ಬರದ್ದು ಒಂದು ಅನುಭವ. ರಾಜೀವ್ ಗಾಂಧಿ ಅವರ ದೂರದೃಷ್ಟಿ, ಅರಸುರವರು ಬಡವರಿಗಾಗಿ ಸ್ಪಂಧಿಸುತ್ತಿದ್ದ ರೀತಿ. ಯಾವುದಕ್ಕೂ ಜಗ್ಗದೆ ಕಾನೂನು ರಚೆನ ಮಾಡಿದ್ದು ಸೇರಿದಂತೆ ಹಲವು ವೈಯಕ್ತಿಕ ಸಂಗತಿಗಳನ್ನು ಕೈ ನಾಯಕರು ಹಂಚಿಕೊಂಡರು.

ಇಬ್ಬರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ಕನಸು ಕಾಣದವರನ್ನು ಬೆಳೆಸಿ ವಿಧಾನಸೌಧಕ್ಕೆ ಬರುವಂತೆ ಮಾಡಿದ್ದು ದೇವರಾಜ ಅರಸು. ನಿಜವಾಗಿ ಹಿಂದುಳಿದವರಿಗೆ ಮಿಸಲಾತಿ ಕೊಟ್ಟಿದ್ದು ಅರಸು ಅವರು. ಆದರೆ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ನಾನು ಕಾಂಗ್ರೆಸ್ ಸೇರಿದ್ದು 2006ರಲ್ಲಿ" ಎಂದು ತಮ್ಮ ಅನುಭವ ಹಂಚಿಕೊಂಡರು.
ಜನತಾ ಪರಿವಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದುಕೊಂಡು ಈ ಇಬ್ಬರು ನಾಯಕರ ಕೆಲಸವನ್ನು ನೋಡಿದ್ದೇನೆ, ಕೇಳಿದ್ದೇನೆ. ರಾಜೀವ್ ಗಾಂಧಿ ಅವರು ಬಹಳ ಚಿಕ್ಕ ವಯಸ್ಸಿಗೆ ಪ್ರಧಾನಿಯಾದರು. ಅವರು ಪ್ರಧಾನಿಯಾಗಿ ದೇಶದ ಯುವ ಸಮೂಹದ ಮೇಲೆ ವಿಶ್ವಾಸ, ನಂಬಿಕೆ ಇಟ್ಟಿದ್ದರು. ಯುವಕರಿಂದ ಸಮಾಜ ವಿಕಾಸ, ದೇಶದ ಬೆಳವಣಿಗೆ ಸಾಧ್ಯ ಎಂದು ನಂಬಿದ್ದರು. ಅದಕ್ಕಾಗಿ ಅನೇಕರ ಟೀಕೆಯನ್ನು ಲೆಕ್ಕಿಸದೆ 18 ವರ್ಷದವರಿಗೆ ಮತದಾನದ ಹಕ್ಕು ನೀಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಇಬ್ಬರು ದಿಗ್ಗಜರ ಬಗ್ಗೆ ಮಾತನಾಡುತ್ತಿದ್ದೇವೆ: ದಿನೇಶ್ ಗುಂಡೂರಾವ್
"ಇಂದು ನಾವು ಇಬ್ಬರು ದಿಗ್ಗಜರ ಬಗ್ಗೆ ಮಾತನಾಡುತ್ತಿದ್ದು, ಇವರ ಬಗ್ಗೆ ಕೆಲವೇ ಕ್ಷಣಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ಮಾಡಿರುವ ಹೋರಾಟ, ಸೇವೆ ಅನನ್ಯ. ದೇವರಾಜ ಅರಸು ಅವರ ಕೊಡುಗೆ, ರಾಜಕೀಯ ಸಾಧನೆಯಲ್ಲಿ ಬಹುಮುಖ್ಯ ಅಂಶ ಸಾಮಾಜಿಕ ನ್ಯಾಯ ನೀಡುವ ಕಾರ್ಯಕ್ರಮ. ರಾಜ್ಯದ ಯಾವುದೇ ಮೂಲೆಗೆ ಹೋದರು ಸಾಮಾಜಿಕ ನ್ಯಾಯ ಎಂದರೆ ದೇವರಾಜ ಅರಸು ಅವರ ಹೆಸರು ಕೇಳಿ ಬರುತ್ತದೆ" ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ತಮ್ಮ ಅನುಭವ ಹಂಚಿಕೊಂಡರು.
ಆ ಸಮಯದಲ್ಲಿ ಯಾರಿಗೆ ಅಧಿಕಾರ ಇರಲಿಲ್ಲ ಅವರಿಗೆ ಅಧಿಕಾರ ನೀಡುವಂತೆ ಮಾಡಿದ್ದು, ದೇವರಾಜ ಅರಸು ಹಾಗೂ ಇಂದಿರಾ ಗಾಂಧಿ ಅವರು. ಇದೇ ಕಾಂಗ್ರೆಸ್ ಸಿದ್ಧಾಂತ. ಬೇರೆ ಯಾವ ಪಕ್ಷದಲ್ಲಿ ಈ ರೀತಿ ಸಣ್ಣ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಪರಿಣಾಮ, ಮೊಯ್ಲಿ, ಬಂಗಾರಪ್ಪ, ಧರ್ಮ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಅದರಲ್ಲಿ ಖರ್ಗೆ ಅವರು ಮಾತ್ರ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. 2008ರ ಚುನಾವಣೆಯಲ್ಲಿ ನೇತೃತ್ವದಲ್ಲಿ ನಡೆದಿತ್ತು. ಅಂದು ಫಲಿತಾಂಶ ನಮ್ಮ ಕಡೆ ಬಂದಿದ್ದರೆ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸತತ 28 ವರ್ಷ ಗೆಲ್ಲಲು ರಾಜೀವ್ ಗಾಂಧಿ ಕಾರಣ:ಕೆ.ಎಚ್. ಮುನಿಯಪ್ಪ
"ರಾಜೀವ್ ಗಾಂಧಿ ಅವರು ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನನಗೆ ಆಶೀರ್ವಾದ ಮಾಡಿದರು ಪರಿಣಾಮ ಸತತ 28 ವರ್ಷಗಳ ಕಾಲ ಸಂಸತ್ತಿನಲ್ಲಿ ಹಾಗೂ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು." ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ನೆನಪು ಹಂಚಿಕೊಂಡರು.
ರಾಜೀವ್ ಗಾಂಧಿ ಅವರು, ಯುಪಿಎ ಸರ್ಕಾರ ಜನಪರ ಕಾರ್ಯಕ್ರಮ ನೀಡಿದ್ದರು. ರೈತರ ಸಾಲ ಮನ್ನಾ, ಪ್ರಧಾನ ಮಂತ್ರಿ ಉದ್ಯೋಗ, ನರೇಗಾ ಯೋಜನೆಗಳು ದುರ್ಬಲವಾಗಿವೆ. ದೇಶವನ್ನು ಸಮೃದ್ಧ ಮಾಡಲು ಎಲ್ಲ ಧರ್ಮದವರು ನೆಮ್ಮದಿಯ ಬದುಕು ನಡೆಸಲು, ಯುವಕರಿಗೆ ಬದುಕು ಕೊಡಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಬೇಕು. ಆದಕ್ಕಾಗಿ ಅಧ್ಯಕ್ಷರಾದ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನಾವು ಬೆಂಬಲ ನೀಡಬೇಕು ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.

ಅರಸು ರಾಜ್ಯ ಸುತ್ತಿ ಪಕ್ಷ ಸಂಘಟಿಸಿದ್ದರು: ಕೆ.ಜೆ. ಜಾರ್ಜ್!
"ದೇವರಾಜ ಅರಸು ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟಿಸಿದ್ದರು. ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು, ಗುಂಡೂರಾವ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಅಂದು 80ನೇ ಇಸವಿಯ ಚುನಾವಣೆಯಲ್ಲಿ ಕಾಂಗ್ರೆಸ್ 27 ಕ್ಷೇತ್ರದಲ್ಲಿ ಗೆದ್ದಾಗ ಅರಸು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನಂತರ ಗುಂಡೂರಾವ್ ಅವರು ಮುಖ್ಯಮಂತ್ರಿಯಾದರು" ಎಂದು ಮಾಜಿ ಸಚಿವ ಕೆಜೆ ಜಾರ್ಜ್ ತಮ್ಮ ಅನುಭವವನನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಜಾತಿ, ಭಾಷೆ ವ್ಯತ್ಯಾಸ ಇಲ್ಲ. ನಮಗೆ ಕಾಂಗ್ರೆಸ್ ಪಕ್ಷವೇ ಜಾತಿ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲ ಜಾತಿ, ಭಾಷಿಗರು ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್. ದೇವರಾಜ ಅರಸು, ಬಂಗಾರಪ್ಪ ಅವರಿಂದ ಸಿದ್ದರಾಮಯ್ಯ ಅವರವರೆಗೂ ಎಲ್ಲ ನಾಯಕರು ಹಿಂದುಳಿದವರ ಪರವಾದ ಕಾರ್ಯಕ್ರಮ ಕೊಟ್ಟಿದ್ದಾರೆ. ಹಿದುಳಿದ ವರ್ಗ, ದೀನರು, ದಲಿತರನ್ನು ಮೇಲೆ ತರಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕೆ.ಜೆ. ಜಾರ್ಜ್ ಹೇಳಿದರು.
Recommended Video

ರಾಜೀವ್ ಗಾಂಧಿ ಅಪರೂಪದ ರಾಜಕಾರಣಿ: ಸಲೀಂ ಅಹ್ಮದ್
"ಇಂದು ಬಹಳ ಸಂತೋಷದಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ರಾಜೀವ್ ಗಾಂಧಿ ಅವರು ಬಹು ಅಪರೂಪದ ರಾಜಕಾರಣಿ. ಅವರು ದೇಶದ ಪ್ರಧಾನಿಯಾದಾಗ ಯುವಕರ ಬಗ್ಗೆ ಕಾಳಜಿ ಹೊಂದಿದ್ದವರು. ಯುವಕರು, ಶೋಷಿತರು, ಮಹಿಳೆಯರಿಗೆ ಅಧಿಕಾರ ಸಿಗುವಂತೆ ಮಾಡಿದರು. 18 ವರ್ಷದವರಿಗೆ ಮತದಾನದ ಹಕ್ಕು ನೀಡಿದರು. ಇದಕ್ಕೆ ಹಲವಾರು ವಿರೋಧ ಮಾಡಿದರು. ಈ ದೇಶ ಉಳಿದು, ಬೆಳೆದು, 21ನೇ ಶತಮಾನಕ್ಕೆ ಹೋಗಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ರಾಜೀವ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ ನಾನು ಎನ್ಎಸ್ ಯುಐ ಅಧ್ಯಕ್ಷನಾಗಿದ್ದಾಗ ಅವರು ನೀನು ಚುನಾವಣೆ ಯಾಕೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಕೇಳಿದರು. ಆಗ ನನಗೆ ಟಿಕೆಟ್ ಕೈತಪ್ಪಿದೆ ಎಂದೇ. ಆಗ ಅವರು ನನ್ನಿಂದ ಈ ಟಿಕೆಟ್ ಕೈತಪ್ಪಿಲ್ಲ. ಇದು ಹೇಗಾಯಿತು? ಎಂದು ಗೊತ್ತಿಲ್ಲ ಎಂದು ಹೇಳಿದರು. ಅವರ ಆದರ್ಶದ ಮೇಲೆ ನಾವು ನಡೆಯಬೇಕು.
ಮೋದಿ ಅವರು ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದಿದ್ದರು. ಆದರೆ ಅವರು ನರಕ ತೋರಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಲೀಂ ಅಹ್ಮದ್ ಕಾರ್ಯಕ್ರಮದಲ್ಲಿ ಮಾತನಾಡಿದರು.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications