ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಕಟ್ಟಲಾಗದ ವಿದ್ಯಾರ್ಥಿನಿ ಇಂದು ರಾಜ್ಯಕ್ಕೆ ಪ್ರಥಮ!

|
Google Oneindia Kannada News

ಬೆಂಗಳೂರು, ಅ. 11: ಕೇವಲ 22 ರೂಪಾಯಿ ಪರೀಕ್ಷಾ ಶುಲ್ಕ ಕಟ್ಟಲಾಗದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ವಂಚಿತಳಾಗಿದ್ದ ವಿದ್ಯಾರ್ಥಿನಿ ಇದೀಗ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಬಂದಿದ್ದಾಳೆ. ಆ ಮೂಲಕ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ್ದಾಳೆ. ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್‌ಗೆ ಆಗಿದ್ದ ತೊಂದರೆ ಕುರಿತು 'ಒನ್‌ಇಂಡಿಯಾ ಕನ್ನಡ' ಜುಲೈ ತಿಂಗಳಿನಲ್ಲಿ ಸಮಗ್ರ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಆಗಿನ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತುಮಕೂರು ಜಿಲ್ಲೆ ಕೊರಟಗೆರೆಗೆ ತೆರಳಿ ಗ್ರೀಷ್ಮಾಗೆ ಧೈರ್ಯ ತುಂಬಿದ್ದರು. ಜೊತೆಗೆ ಪೂರಕ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದರು.

ಆಗಿನ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಪ್ರಯತ್ನದಿಂದ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ ಪರೀಕ್ಷೆ ಬರೆಯುವಂತಾಗಿತ್ತು. ಇದೀಗ ಬಂದಿರುವ ಪರೀಕ್ಷಾ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಮೊದಲಿಗಳಾಗಿ ಗ್ರೀಷ್ಮಾ ನಾಯಕ್ ಪಾಸ್ ಆಗಿದ್ದಾರೆ. ಜೊತೆಗೆ ತನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದ್ದಾಳೆ. ಈ ಬಗ್ಗೆ 'ಒನ್‌ಇಂಡಿಯಾ ಕನ್ನಡ'ದೊಂದಿಗೆ ತಮ್ಮ ಸಂತೋಷವನ್ನೂ ಗ್ರೀಷ್ಮಾ ಪಾಲಕರು ಹಂಚಿಕೊಂಡಿದ್ದಾರೆ.

ಅಂದು ಶುಲ್ಕ ಕಟ್ಟಲಾಗಿರಲಿಲ್ಲ, ಇಂದು ರಾಜ್ಯಕ್ಕೆ ಪ್ರಥಮ ಸ್ಥಾನ!

ಅಂದು ಶುಲ್ಕ ಕಟ್ಟಲಾಗಿರಲಿಲ್ಲ, ಇಂದು ರಾಜ್ಯಕ್ಕೆ ಪ್ರಥಮ ಸ್ಥಾನ!

ಶುಲ್ಕ ಕಟ್ಟಲಾಗದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದರಿಂದ ಗ್ರೀಷ್ಮಾ ನಾಯಕ್ ವಂಚಿತಳಾಗಿದ್ದ ಗ್ರೀಷ್ಮಾ ನಾಯಕ್ ಇಂದು ಪ್ರಕಟವಾಗಿರುವ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲಿಗಳಾಗಿ ಉತ್ತೀರ್ಣಳಾಗಿದ್ದಾರೆ. ಒಟ್ಟು 625ಕ್ಕೆ 599 ಮಾರ್ಕ್ಸ್‌ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ. ಆ ಮೂಲಕ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ತೋರಿಸಿದ್ದಾಳೆ. ಜೊತೆಗೆ ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡು ಎಂಬಿಬಿಎಸ್ ಮಾಡುವ ಗುರಿ ಇಟ್ಟುಕೊಂಡಿರುವುದಾಗಿ 'ಒನ್‌ಇಂಡಿಯಾ ಕನ್ನಡ'ದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇದೇ ವಿಚಾರದ ಬಗ್ಗೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೂಡ ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ.

22 ರೂಪಾಯಿ, SSLC ಪರೀಕ್ಷೆ, ಆಳ್ವಾಸ್ ಶಿಕ್ಷಣ ಸಂಸ್ಥೆ: ಅವಕಾಶ ತಪ್ಪಿಸಿಕೊಂಡ ಗ್ರೀಷ್ಮಾ ನಾಯಕ್22 ರೂಪಾಯಿ, SSLC ಪರೀಕ್ಷೆ, ಆಳ್ವಾಸ್ ಶಿಕ್ಷಣ ಸಂಸ್ಥೆ: ಅವಕಾಶ ತಪ್ಪಿಸಿಕೊಂಡ ಗ್ರೀಷ್ಮಾ ನಾಯಕ್

ಗ್ರೀಷ್ಮಾ ಫಲಿತಾಂಶದಿಂದ ಸುರೇಶ್ ಕುಮಾರ್ ಸಂತಸ!

ಗ್ರೀಷ್ಮಾ ಫಲಿತಾಂಶದಿಂದ ಸುರೇಶ್ ಕುಮಾರ್ ಸಂತಸ!

ಅತ್ಯಂತ ಸಮಾಧಾನ ತಂದ ಸುದ್ದಿ ಇದು. ಸಂತಸವೂ ಆಗುತ್ತಿದೆ. ಅಂದು ಏನೋ ತಪ್ಪಿಂದ ಗ್ರೀಷ್ಮಾ ಗೆ ಎಸೆಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ದೊರಕಿರಲಿಲ್ಲ. ತೀವ್ರವಾಗಿ ನೊಂದ ಗ್ರೀಷ್ಮಾ ಪರೀಕ್ಷೆಯ ಒಂದು ಅನಾಹುತಕ್ಕೆ ಕೈ ಹಾಕಿದ್ದಳು. ಸುದ್ದಿ ತಿಳಿದ ತಕ್ಷಣ ನಾನು ಶನಿವಾರ (17.7.2021) ಮುಂಜಾನೆ ಕೊರಟಗೆರೆಯ ಗ್ರೀಷ್ಮಾಳ ಮನೆಗೆ ಧಾವಿಸಿದ್ದೆ. ಅವಳನ್ನು ಪಕ್ಕದಲ್ಲಿ ಕೂಡಿಸಿಕೊಂಡು ಧೈರ್ಯ ಹೇಳಿದ್ದೆ. ನಿನ್ನನ್ನು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೂಡಿಸುವ ಜವಾಬ್ದಾರಿ ನನ್ನದು, ಚಿಂತೆ ಇಲ್ಲದೆ ಸಿದ್ಧಳಾಗು, ಎಂದಿದ್ದೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ,

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಪಷ್ಟನೆ: ತಿರುವು ಪಡೆದುಕೊಂಡ SSLC ವಿದ್ಯಾರ್ಥಿನಿ ಗ್ರೀಷ್ಮ ಪರೀಕ್ಷೆ ಪ್ರಕರಣ!ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಪಷ್ಟನೆ: ತಿರುವು ಪಡೆದುಕೊಂಡ SSLC ವಿದ್ಯಾರ್ಥಿನಿ ಗ್ರೀಷ್ಮ ಪರೀಕ್ಷೆ ಪ್ರಕರಣ!

ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ, ಸಾಧಿಸಿ ತೋರಿಸಿದೆ

ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ, ಸಾಧಿಸಿ ತೋರಿಸಿದೆ

ನಂತರ ನನ್ನ ಶಿಕ್ಷಣ ಸಚಿವ ಸ್ಥಾನ ಹೋದ ನಂತರವೂ ಆಯುಕ್ತರು, ಎಸ್‌ಎಸ್‌ಎಲ್‌ಸಿ ಮಂಡಳಿ ನಿರ್ದೇಶಕರು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಗ್ರೀಷ್ಮಾಳನ್ನು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದೆ. ಇಂದು ಫಲಿತಾಂಶ ತಿಳಿದಾಗ ನಿರಾಳವಾಯಿತು ನನ್ನ ಮನ. ಇಂದು ಮೊದಲನೇ Rank ಪಡೆದಿರುವ ಕು. ಗ್ರೀಷ್ಮಳಿಗೆ ಹಾರ್ದಿಕ ಅಭಿನಂದನೆಗಳು. ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ. ಸಾಧಿಸಿ ತೋರಿಸಿದೆ. ನೀನೊಂದು ಉತ್ತಮ ಉದಾಹರಣೆ ರಾಜ್ಯದ ಮಕ್ಕಳಿಗೆ ಎಂದು ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.

ಆಗಸ್ಟ್ ಪರೀಕ್ಷೆಗೆ ಅವಕಾಶ: ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾಗೆ ಸುರೇಶ್ ಕುಮಾರ್ ಭರವಸೆ!ಆಗಸ್ಟ್ ಪರೀಕ್ಷೆಗೆ ಅವಕಾಶ: ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾಗೆ ಸುರೇಶ್ ಕುಮಾರ್ ಭರವಸೆ!

Recommended Video

ಕನ್ನಡಿಗ Robin Uthappa ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೊಟ್ಟಿದ್ದ ಸ್ಪಷ್ಟನೆ!

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೊಟ್ಟಿದ್ದ ಸ್ಪಷ್ಟನೆ!

ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೆಸಿಡೆನ್ಸಿಯಲ್ ಶಾಲೆಯ ತಪ್ಪಿನಿಂದಾಗಿ ತಮ್ಮ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದರಿಂದ ವಂಚಿತಳಾಗಿದ್ದಾಳೆ ಎಂದು ಗ್ರೀಷ್ಮಾ ತಂದೆ ನರಸಿಂಹಮೂರ್ತಿ ನಾಯಕ್ ಆರೋಪಿಸಿದ್ದರು. ವಿದ್ಯಾರ್ಥಿನಿಯ ಪೋಷಕರ ತಪ್ಪಿನಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಆಡಳಿತ ಮಂಡಳಿ ನಂತರ ಸ್ಪಷ್ಟನೆ ಕೊಟ್ಟಿತ್ತು. ಬಳಿಕ ಕೊರಟಗೆರೆಗೆ ತೆರಳಿದ್ದ ಅಂದಿನ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಒದಗಿಸಿದ್ದರು. ನಂತರ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೀಷ್ಮಾ ನಾಯಕ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.

English summary
SSLC Student Grishma tops state in SSLC exam. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X