SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ; ಟಾಪರ್‌ಗಳ ಪಟ್ಟಿಯನ್ನ ಇಲ್ಲಿ ಪರಿಶೀಲಿಸಬಹುದು
SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿದ್ದವು. ಇನ್ನು ಇಂದು (ಮೇ 2) ಅಂದುಕೊಂಡಂತೆಯೇ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಲಿದೆ. ಹಾಗಾದ್ರೆ ಫಲಿತಾಂಶವನ್ನು ಯಾವಾಗ ಹಾಗೂ ಎಲ್ಲಿ ವೀಕ್ಷಣೆ ಮಾಡಬಹುದು ಎಂದು ಇಲ್ಲಿ ತಿಳಿಯಿರಿ.
KSEEBಯು ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025ರ ಫಲಿತಾಂಶವನ್ನು ಶುಕ್ರವಾರ ಅಂದರೆ ಇಂದು ಬೆಳಗ್ಗೆ 11.30ಕ್ಕೆ ಪ್ರಟಕ ಮಾಡಲಿದೆ. ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಣೆ ಮಾಡಬಹುದು. ಅಲ್ಲದೆ ಅಂಕಪಟ್ಟಿ ಮತ್ತು ಟಾಪರ್‌ಗಳ ಪಟ್ಟಿಯನ್ನು ಇಲ್ಲಿ ಪರಿಶೀಲನೆ ಮಾಡಬಹುದು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.inನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದು.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡುವುದೇಗೆ?
* karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* SSLC ಫಲಿತಾಂಶ 2025 ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ
* ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಸಬ್ಮಿಟ್ ಮಾಡಿ
* ಪರದೆ ಮೇಲೆ ನಿಮ್ಮ ಫಲಿತಾಂಶ ಲಭ್ಯವಾಗುತ್ತದೆ
* ನಂತರ ಅಂಕಪಟ್ಟಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ಕರ್ನಾಟಕದಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 8.96 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹಾಜರಿದ್ದು, 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ.
ಕಳೆದ ವರ್ಷ ಮೊದಲ ಬಾರಿ ಶಿಕ್ಷಣ ಇಲಾಖೆ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿತ್ತು. ಫಲಿತಾಂಶ ಕುಸಿತವಾದ ಹಿನ್ನೆಲೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡ 25ಕ್ಕೆ ಇಳಿಕೆ ಮಾಡಲಾಗಿತ್ತು. ಈ ವರ್ಷ ಪ್ರಥಮ ಭಾಷೆಯಲ್ಲಿ 35 ಅಂಕ ಹಾಗೂ ಇತರ ವಿಷಯಗಳಲ್ಲಿ ಕನಿಷ್ಠ 28 ಅಂಕ ಮತ್ತು ಅಂತರಿಕ ಅಂಕಗಳು ಸೇರಿ ಒಟ್ಟು 35 ಅಂಕಗಳನ್ನು ಪಡೆದಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು.
ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 100 ಅಂಕಕ್ಕೆ ಕನಿಷ್ಠ 35 ಹಾಗೂ ಇತರೆ ವಿಷಯಗಳಲ್ಲಿ ಪ್ರತಿ ವಿಷಯಕ್ಕೆ 80 ಅಂಕಕ್ಕೆ ಕನಿಷ್ಠ 28 ಅಂಕಗಳನ್ನು ಉತ್ತೀರ್ಣರಾಗಲು ಗಳಿಸಬೇಕು. ಒಟ್ಟಾರೆ ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಆಗಲು ಲಿಖಿತ ಪರೀಕ್ಷೆಯ ಒಟ್ಟು 500 ಅಂಕಗಳಿಗೆ ಕನಿಷ್ಠ 175 ಅಂಕಗಳನ್ನು ಪಡೆಯಲೇಬೇಕು.
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿ ಶೇಕಡ 30 ಅಂಕಗಳನ್ನು ಹಾಗೂ ಒಟ್ಟಾರೆ ಎಲ್ಲಾ ವಿಷಯಗಳ ಸರಾಸರಿ ಶೇಕಡ 35 ಅಂಕಗಳನ್ನು ಪಡೆಯಬೇಕು. ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎಲ್ಲಾ ವಿಷಯಗಳ ಸರಾಸರಿ ಶೇಕಡ 35 ಅಂಕಗಳನ್ನು ಗಳಿಸಬೇಕು.












Click it and Unblock the Notifications