SSLC: ಸೆಪ್ಟೆಂಬರ್ 24ರಿಂದ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ಆರಂಭ: ಪ್ರಶ್ನೆಪತ್ನಿಕೆ ಹೇಗಿರಲಿದೆ ಗೊತ್ತಾ?
SSLC Examination: ಪರೀಕ್ಷೆ ಒಂದು ತಿಂಗಳು ಇರುವ ಮುನ್ನವೇ ವಿದ್ಯರ್ಥಿಗಳು ಪೂರ್ವ ತಯಾರಿಯನ್ನು ನಡೆಸಲು ಪ್ರಾರಂಭಿಸಿಬಿಡುತ್ತಾರೆ. ಆದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಂತೂ ಪರೀಕ್ಷೆ ಆರಂಭವಾಗುವ ಒಂದು ಎರಡು ತಿಂಗಳ ಮುಂಚೆಯೇ ತಯಾರಿ ನಡೆಸುತ್ತಾರೆ. ಇನ್ನು ನಾಳೆಯಿಂದ ಅಂದರೆ ಸೆಪ್ಟೆಂಬರ್ 25ರಿಂದ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಹಾಗಾದರೆ ಪ್ರಶ್ನೆ ಪತ್ರಿಕೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಾಳೆಯಿಂದ (ಸೆಪ್ಟೆಂಬರ್ 24) ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಇನ್ನು ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅರ್ಧ ವಾರ್ಷಿಕ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನೀಡುವ ಏಕರೂಪದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಬೇಕಿದೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ಮಂಡಳಿ ನೀಡಲಿದೆ ಎಂದು ತಿಳಿದುಬಂದಿದೆ.

ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ, ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೆ ಈ ವರ್ಷ ಅದಕ್ಕೆ ಬ್ರೇಕ್ ಹಾಕಿದ್ದು, ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾಧ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನ ಮಾಡಿದೆ.
ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಂಡಳಿಯಿಂದಲೇ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತಿದೆ.
ಕಳೆದ ಬಾರಿಯಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ಮಂಡಳಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತಿತ್ತು. ಆದರೆ ಈ ಬಾರಿ ಸರ್ಕಾರದ ನಿರ್ದೇಶನದಂತೆ ಅದನ್ನು ಅರ್ಧ ವಾರ್ಷಿಕ ಪರೀಕ್ಷೆಗೂ ವಿಸ್ತರಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಮಾಹಿತಿ ನೀಡಿದ್ದಾರೆ.
ವೇಳಾಪಟ್ಟಿ ವಿವರ ಇಲ್ಲಿದೆ
* ಸೆಪ್ಟೆಂಬರ್ 24- ಪ್ರಥಮ ಭಾಷೆ (ಕನ್ನಡ, ಹಿಂದಿ, ಇಂಗ್ಲಿಷ್)
* ಸೆಪ್ಟೆಂಬರ್ 25- ದ್ವಿತೀಯ ಭಾಷೆ (ಇಂಗ್ಲಿಷ್, ಹಿಂದಿ) ಜೊತೆಗೆ ಅದೇ ದಿನ ಮಧ್ಯಾಹ್ನ (ಹಿಂದಿ, ಕನ್ನಡ, ಇಂಗ್ಲಿಷ್) ಪರೀಕ್ಷೆಗಳು ನಡೆಯಲಿವೆ.
* ಸೆಪ್ಟೆಂಬರ್ 26-ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್
* ಸೆಪ್ಟೆಂಬರ್ 27- ಗಣಿತ, ಸಮಾಜ ಶಾಸ್ತ್ರ, ವಿಜ್ಞಾನ
* ಸೆಪ್ಟೆಂಬರ್ 28- ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ
* ಸೆಪ್ಟೆಂಬರ್ 30- ಸಮಾಜ ವಿಜ್ಞಾನ,
* ಅಕ್ಟೋಬರ್ 1- ಜೆಟಿಎಸ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.












Click it and Unblock the Notifications