Breaking: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಜನವರಿ 6: ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಪ್ರಕರಣಗಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 2 ವಾರಗಳ ಕಾಲ ಶಾಲೆಗಳನ್ನು ಬಂದ್ ಮಾಡಿ, ಆನ್‌ಲೈನ್ ತರಗತಿಗಳಿಗೆ ಮಣೆ ಹಾಕಲಾಗಿದೆ.
ಈ ಮಧ್ಯೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಬಗ್ಗೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳು, ಪೋಷಕರ ಗೊಂದಲಕ್ಕೆ ಕರ್ನಾಟಕ ಶಿಕ್ಷಣ ಇಲಾಖೆ ಸ್ಪಂದಿಸಿದೆ.
ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದೆ. ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಮಾರ್ಚ್ 28 ಕನ್ನಡ (ಪ್ರಥಮ ಭಾಷೆ), ಮಾರ್ಚ್ 30 ಇಂಗ್ಲಿಷ್ (ದ್ವಿತೀಯ ಭಾಷೆ), ಏಪ್ರಿಲ್ 1ರಂದು ಕೋರ್ ಸಬ್ಜೆಕ್ಟ್ ಇರಲಿದೆ.
ಏಪ್ರಿಲ್ 4ರಂದು ಗಣಿತ- ಸಮಾಜಶಾಸ್ತ್ರ, ಏಪ್ರಿಲ್ 6ರಂದು ಸಮಾಜ ವಿಜ್ಞಾನ, ಏಪ್ರಿಲ್ 8ರಂದು ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.
| ದಿನಾಂಕ | ವಿಷಯ | ಸಮಯ |
| ಮಾರ್ಚ್ 28, 2022 | ಪ್ರಥಮ ಭಾಷೆ ( ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್, ಉರ್ದು, ತಮಿಳು, ಇಂಗ್ಲಿಷ್ ಪಠ್ಯಕ್ರಮ, ಸಂಸ್ಕೃತ) | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 |
| ಮಾರ್ಚ್ 30, 2022 | ದ್ವಿತೀಯ ಭಾಷೆ(ಇಂಗ್ಲೀಷ್, ಕನ್ನಡ) | ಬೆಳಗ್ಗೆ 10.30 ರಿಂದ 1.45 |
| ಏಪ್ರಿಲ್ 04, 2022 | ಗಣಿತ | ಬೆಳಗ್ಗೆ 10.30 ರಿಂದ 1.45 |
| ಏಪ್ರಿಲ್ 06, 2022 | ಸಮಾಜ ವಿಜ್ಞಾನ | ಬೆಳಗ್ಗೆ 10.30 ರಿಂದ 1.45 |
| ಏಪ್ರಿಲ್ 08, 2022 | ತೃತೀಯ ಭಾಷೆ ( ಕನ್ನಡ, ಹಿಂದಿ, ಕೊಂಕಣಿ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ತುಳು ) | ಬೆಳಗ್ಗೆ 10.30 ರಿಂದ 1.45 |
| ಏಪ್ರಿಲ್ 11, 2022 | ವಿಜ್ಞಾನ | ಬೆಳಗ್ಗೆ 10.30 ರಿಂದ 1.45 |
ಏಪ್ರಿಲ್ 11ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕನ್ನಡ ಶಾಸ್ತ್ರೀಯ/ ಹಿಂದೂಸ್ಥಾನ ಸಂಗೀತದ ಪರೀಕ್ಷೆ ಇರಲಿದೆ. ಪ್ರತಿ ದಿನ ಬೆಳಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು, ಪೋಷಕರಿಗೆ ಆಕ್ಷೇಪಣೆಗಳಿದ್ದರೆ ಜ.6ರಿಂದ 14ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅವಕಾಶ ನೀಡಿದೆ.

ಕಳೆದ ಭಾರಿ ಕೊರೊನಾ ಸೋಂಕು ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಇದರ ನಡುವೆ ಎರಡು ದಿನಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಸೀಮಿತಗೊಳಿಸಿ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡುವ ಷರತ್ತಿನೊಂದಿಗೆ ಮೂರು ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆ ತಯಾರಿಸಿ ಎರಡು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಆರು ವಿಷಯಗಳಿಗೆ ಎರಡು ದಿನದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ಆರು ವಿಷಯಗಳಿಗೆ ಹಳೇ ಪದ್ಧತಿಯಂತೆ ಆರು ದಿನ ಪರೀಕ್ಷೆ ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಹೀಗಾಗಿ ಹಳೇ ಪದ್ಧತಿಯಂತೆ ಪ್ರಥಮ ಭಾಷೆಗೆ 125 ಅಂಕ, ( 100 ಅಂಕ ಲಿಖಿತ ಪರೀಕ್ಷೆ, 25 ಅಂಕ ಶಾಲಾ ಮೌಲ್ಯಮಾಪನ ಅಂಕ) ಇತರೆ ಐದು ವಿಷಯಗಳಿಗೆ 80 + 20 ( 20 ಶಾಲಾ ಮೌಲ್ಯಮಾಪನ) ಅಂಕ ನಿಗದಿ ಪಡಿಸಲಾಗಿದೆ. ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಖ್ಯ ಪರೀಕ್ಷೆಯ ಅಂತಿಮ ದಿನಾಂಕ ಪ್ರಕಟ ಮಾಡಲಿದೆ. ಪ್ರಶ್ನೆ ಪತ್ರಿಕೆ ಓದಲು ಹದಿನೈದು ನಿಮಿಷ ಕಾಲಾವಕಾಶ ನೀಡಲಾಗಿದೆ.












Click it and Unblock the Notifications