ಕರ್ನಾಟಕಕ್ಕೆ ಲಸಿಕೆ; ಜಾಗತಿಕ ಟೆಂಡರ್‌ನ 2 ಬಿಡ್ ತಿರಸ್ಕಾರ

ಬೆಂಗಳೂರು, ಮೇ 30; ಕರ್ನಾಟಕ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಲಸಿಕೆ ಪೂರೈಕೆಗೆ ಆಹ್ವಾನ ನೀಡಿತ್ತು. ಎರಡು ಕಂಪನಿಗಳು ಟೆಂಡರ್ ಸಲ್ಲಿಕೆ ಮಾಡಿದ್ದವು. ಇವುಗಳನ್ನು ತಿರಸ್ಕರಿಸಲಾಗಿದೆ.

ರಾಜ್ಯ ಕೋವಿಡ್ ಟಾಸ್ಕ್‌ ಫೋರ್ಸ್ ಅಧ್ಯಕ್ಷ ಡಾ. ಸಿ. ಎನ್. ಅಶ್ವಥ್ ನಾರಾಯಣ ಈ ಕುರಿತು ಮಾಹಿತಿ ನೀಡಿದ್ದಾರೆ. "ಎರಡು ಕೋಟಿ ಡೋಸ್ ಕೋವಿಡ್ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಆಹ್ವಾನಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಬಂದಿದ್ದ ಎರಡೂ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ" ಎಂದು ಹೇಳಿದ್ದಾರೆ.

"ರಾಜ್ಯಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆ ಮಾಡಲು ಮುಂಬೈ ಮತ್ತು ದೆಹಲಿಯ ಕಂಪನಿಗಳು ಬಿಡ್ ಸಲ್ಲಿಕೆ ಮಾಡಿದ್ದವು. ಆದರೆ ಕಂಪನಿಗಳು ನಮೂದಿಸಿದ ದರ ಸೇರಿದಂತೆ ಇತರ ಅಂಶಗಳು ಕಾರ್ಯಸಾಧು ಅಲ್ಲ. ಹೀಗಾಗಿ ಟೆಂಡರ್ ತಿರಸ್ಕರಿಸಲಾಗಿದೆ. ಹೊಸ ಟೆಂಡರ್ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ" ಎಂದರು.

Sputnik Vaccine

"ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಎರಡೂ ಕಂಪನಿಗಳು ಲಸಿಕೆ ತಯಾರಕರಲ್ಲ. ಕೇವಲ ಸರಬರಾಜು ಮಾಡುವವರು" ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಡಾ. ಸಿ. ಎನ್. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.

ಸುಳಿವು ಸಿಕ್ಕಿತ್ತು; ಟೆಂಡರ್ ತಿರಸ್ಕಾರವಾಗುವ ಕುರಿತು ಮೊದಲೇ ಸುಳಿವು ಸಿಕ್ಕಿತ್ತು. ಜಾಗತಿಕ ಮಟ್ಟದ ಯಾವುದೇ ದೊಡ್ಡ ಕಂಪನಿಗಳು ಲಸಿಕೆ ಪೂರೈಕೆ ಮಾಡಲು ಟೆಂಡರ್ ಸಲ್ಲಿಕೆ ಮಾಡಿರಲಿಲ್ಲ. ಆದ್ದರಿಂದ ಅಧಿಕಾರಿಗಳು ಟೆಂಡರ್ ಅವಧಿಯನ್ನು ವಿಸ್ತರಣೆ ಮಾಡುವ ಸುಳಿವು ಕೊಟ್ಟಿದ್ದರು.

ಕೋವಿಡ್ ಲಸಿಕೆ ಪೂರೈಕೆಯಾಗಿ ಮೇ 14ರಂದು ಟೆಂಡರ್ ಕರೆದಿದ್ದ ಕರ್ನಾಟಕ ಸರ್ಕಾರ ಮೇ 24ರ ತನಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡಿತ್ತು. ಈಗ ಪುನಃ ಟೆಂಡರ್ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಕರ್ನಾಟಕ ಲಸಿಕೆ ಕೊರತೆ ಎದುರಿಸುತ್ತಿದೆ. 18-44 ವಯೋಮಾನದವರಿಗೆ ಲಸಿಕೆ ನೀಡಲು ಸರ್ಕಾರ ಜಾಗತಿಕ ಟೆಂಡರ್ ಆಹ್ವಾನಿಸಿದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್‌, ಸ್ಪುಟ್ನಿಕ್ ಸೇರಿದಂತೆ ವಿಶ್ವದಾದ್ಯಂತ ಸುಮಾರು 15 ಲಸಿಕೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+