Mahakumbh Mela 2025: ಮಂಗಳೂರಿನಿಂದ ಮಹಾಕುಂಭಮೇಳಕ್ಕೆ ವಿಶೇಷ ರೈಲು; ದಿನಾಂಕ, ಸಮಯ ಮಾಹಿತಿ

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ 2025ರ ಜನವರಿ 14 ರಿಂದ ಆರಂಭವಾಗಲಿದ್ದು 44 ದಿನಗಳ ಕಾಲ ನಡೆಯಲಿದೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದು ಹೇಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಸುಮಾರು 40 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಹಾಕುಂಭಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದ್ದು ದೇಶದ ಮೂಲೆ ಮೂಲೆಯಿಂದ ಪ್ರಯಾಗ್‌ರಾಜ್, ವಾರಣಾಸಿಗೆ ರೈಲು ಸೇವೆ ಕಲ್ಪಿಸಿದೆ.

ಮಂಗಳೂರಿನಿಂದ ಕೂಡ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು ಮಂಗಳೂರು ಸೆಂಟ್ರಲ್‌ನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ. ಎರಡು ದಿನ ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ. ಜನವರಿ 18 ಮತ್ತು ಫೆಬ್ರವರಿ 15 ರಂದು ರೈಲು ಸಂಖ್ಯೆ 06019 ಮಂಗಳೂರು ಸೆಂಟ್ರಲ್ - ವಾರಣಾಸಿ ಸಾಪ್ತಾಹಿಕ ವಿಶೇಷ ರೈಲು ಮಂಗಳೂರಿನಿಂದ ಬೆಳಗಿನ ಜಾವ 4.15ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 2.50ಕ್ಕೆ ವಾರಣಾಸಿ ತಲುಪಲಿದೆ.

special train maha kumbhamela mangaluru

ರೈಲು ಸಂಖ್ಯೆ 06020 ವಾರಣಾಸಿ - ಮಂಗಳೂರು ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು ಜನವರಿ 21 ಮತ್ತು ಫೆಬ್ರವರಿ 18 ರಂದು ವಾರಣಾಸಿಯಿಂದ ಸಂಜೆ 6.20 ಕ್ಕೆ ಹೊರಟು, ನಾಲ್ಕನೇ ದಿನ ಮಧ್ಯಾಹ್ನ 02.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ತಿರುವೊಟ್ಟಿಯೂರ್, ಪೆರಂಬೂರ್, ಕಟ್ಪಾಡಿ ಮತ್ತು ಜೋಲಾರ್‌ಪೆಟ್ಟೈನಲ್ಲಿ ಈ ರೈಲು ನಿಲುಗಡೆ ನೀಡುತ್ತದೆ. ವಿಶೇಷ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಚೆನ್ನೈನಿಂದ ಕೂಡ ವಿಶೇಷ ರೈಲು ಸೇವೆ

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೆ ಇಲಾಖೆ ಚೆನ್ನೈನಿಂದ ಕೂಡ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 06071 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಗೋಮತಿ ನಗರ (ಲಕ್ನೋ) ನಗರ ಸಾಪ್ತಾಹಿಕ ವಿಶೇಷ ರೈಲು ಜನವರಿ 18, ಫೆಬ್ರವರಿ 15 ಮತ್ತು ಮಾರ್ಚ್ 1ರಂದು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ 2.20 ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 2.15 ಕ್ಕೆ ಗೋಮತಿ ನಗರವನ್ನು ತಲುಪಲಿದೆ.

ರೈಲು ಸಂಖ್ಯೆ 06072 ಗೋಮತಿ ನಗರ (ಲಕ್ನೋ) - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು ಜನವರಿ 21, ಫೆಬ್ರವರಿ 18 ಮತ್ತು ಮಾರ್ಚ್ 4 ರಂದು ಬೆಳಗಿನ ಜಾವ 03.45 ಕ್ಕೆ ಗೋಮತಿ ನಗರದಿಂದ ಹೊರಟು ಮೂರು ದಿನದ ಬಳಿಕ ರಾತ್ರಿ 11.55 ಕ್ಕೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+