ಟಿವಿ ಮಾಧ್ಯಮಗಳಿಗೆ ಲಗಾಮು, ಸದನ ಸಮಿತಿ ರಚನೆಗೆ ಸ್ಪೀಕರ್ ಸೂಚನೆ

ಕನ್ನಡದ ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಹಾಕುವ ಸಂಬಂಧ ವಿಧಾನ ಸಭೆಯ ಉಭಯ ಸದನಗಳಲ್ಲಿ ನಿನ್ನೆ ಕಾವೇರಿದ ಚರ್ಚೆ ನಡೆಯಿತು. 'ನಮ್ಮ ತೇಜೋವಧೆ ಮಾಡಲಾಗುತ್ತಿದೆ,’ ಎಂದು ಪಕ್ಷ ಭೇದ ಮರೆತು ಶಾಸಕರೆಲ್ಲಾ ಮಾಧ್ಯಮಗಳ ಮೇಲೆ ಅಬ್ಬರಿಸಿದರು.

ಬೆಂಗಳೂರು, ಮಾರ್ಚ್ 23: ಕನ್ನಡದ ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಹಾಕುವ ಸಂಬಂಧ ವಿಧಾನ ಸಭೆಯ ಉಭಯ ಸದನಗಳಲ್ಲಿ ನಿನ್ನೆ ಕಾವೇರಿದ ಚರ್ಚೆ ನಡೆಯಿತು. 'ನಮ್ಮ ತೇಜೋವಧೆ ಮಾಡಲಾಗುತ್ತಿದೆ,' ಎಂದು ಪಕ್ಷ ಭೇದ ಮರೆತು ಶಾಸಕರೆಲ್ಲಾ ಮಾಧ್ಯಮಗಳ ಮೇಲೆ ಅಬ್ಬರಿಸಿದರು.

ಸಾರ್ವಜನಿಕ ಮಹತ್ವದ ಜರೂರಿನ ವಿಷಯವಾಗಿ ನಿಯಮ 69ರ ಅಡಿಯಲ್ಲಿ ಕೆ.ಎಸ್ ಪುಟ್ಟಣ್ಣಯ್ಯ, ಬಿ.ಆರ್ ಪಾಟೀಲ್ ಮುಂತಾದವರು ವಿದ್ಯುನ್ಮಾನ ಮಾಧ್ಯಮಗಳ ವಿಷಯ ಪ್ರಸ್ತಾಪಿಸಿದರು. ಇದಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಚಾರಿತ್ರ್ಯ ಹರಣ ಮತ್ತು ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ. ಆ್ಯಂಕರ್ ಗಳು ಸ್ಟುಡಿಯೋದಲ್ಲಿ ಕುಳಿತು ನ್ಯಾಯಾಧೀಶರಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯವನ್ನು ದೃಶ್ಯ ಮಾಧ್ಯಮಗಳು ಹಾಳು ಮಾಡುತ್ತಿವೆ ಎಂದು ಒಬ್ಬರಾದ ಮೇಲೊಬ್ಬರಂತೆ ಶಾಸಕರು ಹರಿಯಾಹ್ದರು.[143 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ, ಕಲಾಪದಲ್ಲಿ ಚರ್ಚೆ]

Speaker formed house committee to control TV media

ಶಾಸಕರ ಒತ್ತಾಯದ ಮೇರೆಗೆ ಸ್ಪೀಕರ್ ಕೆ.ಬಿ ಕೋಳಿವಾಡ್ ಸದನ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ದೃಶ್ಯ ಮಾಧ್ಯಮಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಈ ಸದನ ಸಮಿತಿ ಶಿಫಾರಸ್ಸು ಮಾಡಲಿದೆ.

ಸದನ ಸಮಿತಿ ರಚನೆ ಘೋಷಿಸಿದ ಕೋಳಿವಾಡ್, 'ಶಾಸಕಾಂಗದ ಕೈ ಯಾವತ್ತೂ ಗಿಡ್ಡ ಇಲ್ಲ. ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛೆ ಆಗಬಾರದು. ಮಾಧ್ಯಮಗಳಿಗೆ ಕಡಿವಾಣ ಹಾಕಲೇ ಬೇಕಾಗುತ್ತದೆ. ಇದಕ್ಕೆ 15 ದಿನದೊಳಗೆ ಸದನ ಸಮಿತಿ ರಚನೆ ಮಾಡಲಾಗುವುದು,' ಎಂದು ಹೇಳಿದ್ದಾರೆ.[ನಿಯಮ ಪಾಲಿಸದ ಶಾಲೆಗಳಿಗೆ ಕಾದಿದೆ ಗಂಡಾಂತರ]

ಹೆಚ್ಚಿನ ಎಲ್ಲಾ ಸದಸ್ಯರು ಮಾಧ್ಯಮಗಳಿಗೆ ಕಡಿವಾಣ ಹಾಕಲು ಒಪ್ಪಿಕೊಂಡರು. ಆದರೆ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತ್ರ ಸದನ ಸಮಿತಿ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಮಾಧ್ಯಮಗಳಿಗೆ ಕಡಿವಾಣ ಹಾಕಲು ಸಂವಿಧಾನ ಚೌಕಟ್ಟಿನಲ್ಲಿಯೇ ಪ್ರೆಸ್ ಕೌನ್ಸಿಲ್ ಮುಂತಾದ ಸಂಸ್ಥೆಗಳಿವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+