Ct Ravi Case: ಸಿಟಿ ರವಿ ಪ್ರಕರಣದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಬಸವರಾಜ ಹೊರಟ್ಟಿ!
Ct Ravi Case: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ಎಂಎಲ್‌ಸಿ ಸಿಟಿ ರವಿ ಅವರು ಬೈದಿದ್ದಾರೆ ಎನ್ನುವ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಲಾಗುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ನಾನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಯಾವುದೇ ಕೆಟ್ಟ ಪದಗಳನ್ನು ಬಳಸಿಲ್ಲ ಎಂದೇ ಸಿಟಿ ರವಿ ಅವರು ಇಲ್ಲಿಯವರೆಗೆ ವಾದಿಸಿಕೊಂಡು ಬಂದಿದ್ದರು. ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಹ ಹೊರಟ್ಟಿ ಅವರು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಮಾತನಾಡಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಇನ್ನೂ ತನಿಖೆ ಮುಂದುವರಿದಿದೆ. ಈ ರೀತಿ ಇರುವಾಗಲೇ ಬಸವರಾಜ ಹೊರಟ್ಟಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅವಿರುದ್ಧ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರು ಅಶ್ಲೀಲ ಪದ ಬಳಕೆ ಮಾಡಿರುವ ವಿಚಾರ ತನಿಖೆಯಲ್ಲಿ ಪತ್ತೆ ಆಗಿದೆ ಅಂತ ಹೇಳಲಾಗಿರುವುದಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನನಗೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಅಧಿಕೃತ ಮಾಹಿತಿ ಬರಬೇಕು ಅಂತ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳಿಕೆ ನೀಡಿದ್ದಾರೆ. ಈ ಕುರಿತು ನಾನು ವಿಧಾನ ಪರಿಷತ್ ಕಾರ್ಯದರ್ಶಿ ಅವರಿಗೆ ಸೂಚನೆ ಕೊಡುತ್ತೇನೆ. ಅವರಿಂದ ಮಾಹಿತಿ ಪಡೆದುಕೊಂಡು ನಾನು ಮುಂದೆ ಮಾತನಾಡುತ್ತೇನೆ. ಯಾವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ. ನಾನು ಕಳೆದ ಒಂದು ವಾರದಿಂದ ಮನೆಯಲ್ಲೇ ಇದ್ದೇನೆ. ಹೋಮ್ ಮಿನಿಸ್ಟರ್ ಪರಮೇಶ್ವರ್‌ಗೆ ನಾನೇ ನಿನ್ನೆ ಕಾಲ್ ಮಾಡಿದ್ದೆ. ಆದರೆ ನನ್ನ ಪೋನ್ ರಿಸೀವ್ ಮಾಡಿಲ್ಲ. ಅಲ್ಲದೆ ಅವರು ಮತ್ತೆ ಕಾಲ್ ಸಹ ಮಾಡಿಲ್ಲ ಅಂತಲೂ ಹೇಳಿದ್ದಾರೆ.
ಇನ್ನು ನಾನು ಒಳ್ಳೆಯ ಉದ್ದೇಶದಿಂದ ಪತ್ರ ಬರೆದಿದ್ದೆ. ಸಿಐಡಿ ತನಿಖೆಗೆ ವಹಿಸಿದ್ದು ಹೊರಗೆ ಅಂತ ನಾನು ಅಂದುಕೊಂಡಿದ್ದೆ. ಆದರೆ ರೆಫರೆನ್ಸ್ ವಿಧಾನ ಪರಿಷತ್ ಎಂದು ಹಾಕಿದ್ದಾರೆ. ವಿಧಾನ ಪರಿಷತ್ ಒಳಗೆ ಹೇಗೆ ಬರುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಸದನದಲ್ಲಿ ಆಗಿರುವ ವಿಚಾರ ಸದನದಲ್ಲಿಯೇ ಮುಗಿಯಬೇಕು. ಸಿಐಡಿ ಅಧಿಕಾರಿಗಳು ನಮ್ಮನ್ನು ಕೇಳದೆ ಏನೂ ಮಾಡುವುದಕ್ಕೆ ಅವಕಾಶ ಇಲ್ಲ. ಗೃಹ ಮಂತ್ರಿ ಜಿ ಪರಮೇಶ್ವರ್ ಅವರು ಇಲ್ಲಿಯ ವರೆಗೆ ಈ ವಿಚಾರವಾಗಿ ನನ್ನೊಂದಿಗೆ ಏನೂ ಮಾತನಾಡಿಲ್ಲ. ಈ ವಿಚಾರ ನೂರಕ್ಕೆ ನೂರು ಸದನದಲ್ಲಿ ಮುಗಿಸಬೇಕು ಅಂತಾ ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಈ ರೀತಿ ಘಟನೆಗಳು ನಡೆದರೆ ಮುಂದೆ ಸದನಕ್ಕೆ ಎಲ್ಲರೂ ಬರುತ್ತಾರೆ. ಹಂಗಾದರೆ ಮುಂದೆ ಸದನಕ್ಕೆ ಘನತೆ ಎನ್ನುವುದೇ ಇರುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications