ಕ್ರಿಸ್‌ಮಸ್: ಬೆಂಗಳೂರು-ಹುಬ್ಬಳ್ಳಿ ವಿಶೇಷ ರೈಲುಗಳು ಸಂಚಾರ, ವೇಳಾಪಟ್ಟಿ ವಿವರ

ಹುಬ್ಬಳ್ಳಿ, ಡಿಸೆಂಬರ್ 19: ನೈಋತ್ಯ ರೈಲ್ವೆಯು ಇದೇ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಂಚಾರಿಸುವವರಿಗೆ ಅನುಕೂಲವಾಗುಂತೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳು ರಾಜ್ಯದಿಂದ ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕ ಸೇವೆ ನೀಡಲಿವೆ ಎಂದು ರೈಲ್ವೆ ವಯಲದ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ಸಂಭವನೀಯ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಬೆಂಗಳೂರು ಎಸ್ಎಂವಿಟಿ ರೈಲು ನಿಲ್ದಾಣಗಳ ಮಧ್ಯೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಅವುಗಳ ವೇಳಾಪಟ್ಟಿ, ದಿನಾಂಕ ಇಲ್ಲಿದೆ.

South Western Railway Will Run Special Trains Form Dec 25 to January 1 2025 see Schedule

* ಹುಬ್ಬಳ್ಳಿ- ಬೆಂಗಳೂರಿಗೆ ಒನ್-ವೇ ಎಕ್ಸ್ ಪ್ರೆಸ್ ವಿಶೇಷ ರೈಲು

ಡಿಸೆಂಬರ್ 20ರಂದು ಹುಬ್ಬಳ್ಳಿ ಜಂಕ್ಷನ್‌ನಿಂದ ಬೆಂಗಳೂರು ರೈಲು ಪ್ರಯಾಣ ಮಾಡಲಿದೆ. ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ಎಸ್ಎಂವಿಟಿ ಬೆಂಗಳೂರಿಗೆ ಸಂಜೆ 4:15 ಕ್ಕೆ ತಲುಪಲಿದೆ. ಈ ರೈಲು ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ತಿಳಿಸಿದರು.

* SMTV ಬೆಂಗಳೂರು-ವಾಸ್ಕೋ-ಡ-ಗಾಮಾ ಮಧ್ಯೆ ಎರಡು ಟ್ರಿಪ್

ಎಕ್ಸ್‌ಪ್ರೆಸ್‌ ರೈಲು (07306/07307) ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 20 ಮತ್ತು 22ರಂದು ಸಂಚರಿಸಲಿದೆ. ಈ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ 8:45ಕ್ಕೆ ವಾಸ್ಕೋಡ ಗಾಮಾ ನಿಲ್ದಾಣ ತಲುಪಲಿದೆ.

ಇದೇ ರೈಲು ಮರಳಿ ಇದೇ ರೈಲು (07307) ಡಿಸೆಂಬರ್ 21 ಮತ್ತು 23ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಡುತ್ತದೆ. ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ಬಂದು ಸೇರಲಿದೆ.

South Western Railway Will Run Special Trains Form Dec 25 to January 1 2025 see Schedule

* ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ವಿಶೇಷ ರೈಲು

ಎಸ್ಎಂವಿಟಿ ಬೆಂಗಳೂರು-ವಾಸ್ಕೋಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು (07308/07309) ರೈಲು ಸಂಚರಿಸಲಿದೆ. ಡಿಸೆಂಬರ್ 24 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8.30 ಗಂಟೆಗೆ ಸಂಚಾರ ಆರಂಭಿಸಿ ಮರುದಿನ ಮಧ್ಯಾಹ್ನ 12 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣ ತಲುಪುತ್ತದೆ.

ಮರಳಿ ಇದೇ ರೈಲು (07309) ವಾಸ್ಕೋಡ ಗಾಮಾ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 29 ವಾಸ್ಕೋಡ ಗಾಮಾದಿಂದ ಮಧ್ಯಾಹ್ನ 2:30ಕ್ಕೆ ಪ್ರಯಾಣ ಆರಂಭಿಸಿ ಮಾರನೆ ದಿನ ಬೆಳಗ್ಗೆ 5.15ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

* ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಮತ್ತೊಂದು ಟ್ರಿಪ್ ವಿಶೇಷ ರೈಲು (07310/07311) ಡಿಸೆಂಬರ್ 30, 2024 ರಂದು ಸಂಚರಿಸಲಿದೆ. ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12 ಗಂಟೆಗೆ ನಿಗದಿತ ನಿಲ್ದಾಣ ತಲುಪುತ್ತದೆ. ಇದೇ ರೈಲು (07311) ಮರಳಿ ಜನವರಿ 1ರಂದು ಪ್ರಯಾಣ ಆರಂಭಿಸುತ್ತದೆ.

ರೈಲು ನಿಲುಗಡೆಯ ನಿಲ್ದಾಣಗಳ ವಿವರ

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ಸದರಿ ರೈಲುಗಳು ಎರಡು ಎಸಿ ಟು ಟೈರ್ ಬೋಗಿಗಳು, ಹದಿನೈದು ಎಸಿ ತ್ರಿ ಟೈರ್ ಬೋಗಿ, ಎರಡು ಲಗೇಜ್ / ಜನರೇಟರ್/ ಬ್ರೇಕ್ ವ್ಯಾನ್ ಹೊಂದಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಐಆರ್‌ಸಿಟಿ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+