Breaking; ವಿವಿಧ ರೈಲು ಸೇವೆ ವಿಸ್ತರಿಸಿದ ನೈಋತ್ಯ ರೈಲ್ವೆ, ಪಟ್ಟಿ
ಬೆಂಗಳೂರು, ಡಿಸೆಂಬರ್ 16; ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದ್ದು, ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಇವುಗಳಲ್ಲಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿಂದ ಸಂಚಾರ ನಡೆಸುವ ಹಲವು ರೈಲುಗಳು ಸೇರಿವೆ. ರೈಲು ಪ್ರಯಾಣಿಕರು ಈ ರೈಲುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ರೈಲು ನಂಬರ್ 07355 ಹುಬ್ಬಳ್ಳಿ-ರಾಮೇಶ್ವರಂ ವಾರಕ್ಕೊಮ್ಮೆ ಸಂಚಾರ ನಡೆಸುವ ವಿಶೇಷ ರೈಲು ಸೇವೆಯನ್ನು ಮಾರ್ಚ್ 25ರ ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲು ಸೇವೆ ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿತ್ತು. ರೈಲು ನಂಬರ್ 07356 ರಾಮೇಶ್ವರಂ-ಹುಬ್ಬಳ್ಳಿ ರೈಲು ಸಂಚಾರ ಮಾರ್ಚ್ 26ರ ತನಕ ವಿಸ್ತರಣೆ ಮಾಡಲಾಗಿದೆ.

ಯಶವಂತಪುರ-ವಿಜಯಪುರ ರೈಲು ಸಂಖ್ಯೆ 06545 ಪ್ರತಿ ದಿನದ ವಿಶೇಷ ರೈಲು ಸೇವೆಯನ್ನು ಮಾರ್ಚ್ 31ರ ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲು ಸೇವೆ ಸಹ ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿತ್ತು. ವಿಜಯಪುರ-ಯಶವಂತಪುರ 06546 ರೈಲಿನ ಸೇವೆಯನ್ನು ಸಹ ಏಪ್ರಿಲ್ 1ರ ತನಕ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್- ಎಂಜಿಆರ್ ಚೆನ್ನೈ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲನ್ನು 2023ರ ಮಾರ್ಚ್ 28ರ ತನಕ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 27ಕ್ಕೆ ರೈಲು ಸಂಚಾರ ಅಂತ್ಯಗೊಳ್ಳಬೇಕಿತ್ತು.
ರೈಲು ಸಂಖ್ಯೆ 06224 ಎಂಜಿಆರ್ ಚೆನ್ನೈ- ಶಿವಮೊಗ್ಗ ಟೌನ್ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲನ್ನು 29/3/2023ರ ತನಕ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 28ಕ್ಕೆ ರೈಲು ಸಂಚಾರ ಸ್ಥಗಿತವಾಗಬೇಕಿತ್ತು.
ಈ ರೈಲು ಸೇವೆಗಳನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ. ಬಳಿಕ ರೈಲ್ವೆ ಇಲಾಖೆ ಸೇವೆ ವಿಸ್ತರಣೆ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ.











Click it and Unblock the Notifications