ಮಂಗಳೂರು-ವಿಜಯಪುರ ಸೇರಿ ಹಲವು ರೈಲು ಸೇವೆ ವಿಸ್ತರಣೆ, ಪಟ್ಟಿ

ಬೆಂಗಳೂರು, ಆಗಸ್ಟ್ 23: ನೈಋತ್ಯ ರೈಲ್ವೆ ಹಲವು ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಕರಾವಳಿ ಭಾಗದ ಎರಡು ಜನಪ್ರಿಯ ರೈಲುಗಳಾದ ಮಂಗಳೂರು-ವಿಜಯಪುರ ಮತ್ತು ಯಶವಂತಪುರ ಮುರುಡೇಶ್ವರ ರೈಲುಗಳು ಸಹ ಇದರಲ್ಲಿ ಸೇರಿವೆ.

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶಿಸಿದೆ. ಈಗ ಓಡುತ್ತಿರುವ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

South Western Railway Extended Some Special Train Services

ಪೂರ್ವ ಮಧ್ಯ ರೈಲ್ವೆ ವಲಯದ ಸೂಚನೆಯಂತೆ ರೈಲು ಸಂಖ್ಯೆ 03241/ 03242 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಮತ್ತು ದಾನಾಪುರ ನಡುವಿನ ವಿಶೇಷ ರೈಲು ಸೇವೆಯನ್ನು ಸಹ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ರೈಲುಗಳ ವಿವರಗಳು

* ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೊದಲು ಪ್ರತಿದಿನ ಆಗಸ್ಟ್ 31ರ ತನಕ ಓಡಿಸಲು ಸೂಚಿಸಲಾಗಿತ್ತು. ಈಗ ಸೆಪ್ಟೆಂಬರ್ 1 ರಿಂದ 30ರ ತನಕ ವಿಸ್ತರಣೆ ಮಾಡಲಾಗಿದೆ.

* ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಪ್ರತಿದಿನ ಸೆಪ್ಟೆಂಬರ್ 1ರ ತನಕ ಓಡಿಸಲು ಈ ಹಿಂದೆ ಸೂಚಿಸಲಾಗಿತ್ತು. ಈಗ ಅದನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 1ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

* ರೈಲು ನಂಬರ್ 06563 ಯಶವಂತಪುರ-ಮುರುಡೇಶ್ವರ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಪ್ರತಿ ಶನಿವಾರ ಆಗಸ್ಟ್ 26ರ ತನಕ ಓಡಿಸಲು ಈ ಹಿಂದೆ ಸೂಚನೆ ನೀಡಲಾಗಿತ್ತು. ಈಗ ಸೆಪ್ಟೆಂಬರ್ 2 ರಿಂದ 30ರ ನಕ ವಿಸ್ತರಣೆ ಮಾಡಲಾಗಿದೆ.

* ರೈಲು ಸಂಖ್ಯೆ 06564 ಮುರುಡೇಶ್ವರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಹಿಂದೆ ಪ್ರತಿ ಭಾನುವಾರ ಮುರುಡೇಶ್ವರದಿಂದ ಆಗಸ್ಟ್ 27ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಸೆಪ್ಟೆಂಬರ್ 3 ರಿಂದ ಅಕ್ಟೋಬರ್ 1ರ ತನಕ ವಿಸ್ತರಣೆ ಮಾಡಲಾಗಿದೆ.

ವಿಶೇಷ ರೈಲು ಸಂಚಾರ ಮುಂದುವರಿಕೆ; ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಘೋಷಣೆ ಮಾಡಿದ್ದ ವಿಶೇಷ ರೈಲು ಸೇವೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ. ಪೂರ್ವ ಮಧ್ಯ ರೈಲ್ವೆ ವಲಯದ ಸೂಚನೆಯಂತೆ ರೈಲು ಸೇವೆ ಮುಂದುವರೆಸಲಾಗಿದೆ.

ರೈಲು ನಂಬರ್ 03241/ 03242 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಮತ್ತು ದಾನಾಪುರ ನಡುವಿನ 5 ಟ್ರಿಪ್ ವಾರದ ವಿಶೇಷ ರೈಲು ಸಂಚಾರವನ್ನು ಅದೇ ವೇಳಾಪಟ್ಟಿ, ನಿಲುಗಡೆಯೊಂದಿಗೆ ಮುಂದುವರೆಸಲಾಗಿದೆ.

ರೈಲು ನಂಬರ್ 03241 ದಾನಾಪುರ- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ವಾರದ ವಿಶೇಷ ರೈಲು ಪ್ರತಿ ಶುಕ್ರವಾರ ಆಗಸ್ಟ್ 25ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಸೆಪ್ಟೆಂಬರ್ 1 ರಿಂದ 29ರ ತನಕ 5 ಟ್ರಿಪ್ ಮುಂದುವರೆಸಲಾಗಿದೆ.

ರೈಲು ಸಂಖ್ಯೆ 03242 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು-ದಾನಾಪುರ ವಾರದ ವಿಶೇಷ ರೈಲನ್ನು ಈ ಹಿಂದೆ ಭಾನವಾರ ಆಗಸ್ಟ್ 27ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಸೆಪ್ಟೆಂಬರ್ 3 ರಿಂದ ಅಕ್ಟೋಬರ್ 1ರ ತನಕ 5 ಟ್ರಿಪ್ ವಿಸ್ತರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+