South First Exit Poll Survey: ಸರಳ ಬಹುಮತದ ಸನಿಹದಲ್ಲಿ ಕಾಂಗ್ರೆಸ್: ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಮುಕ್ತಾಯವಾಗಿದೆ. ಎಲ್ಲಾ 224 ಕ್ಷೇತ್ರಗಳಲ್ಲಿ ಒಂದೇ ಬಾರಿ ಮತದಾನ ನಡೆದಿದ್ದು, ಮತದಾರ ತನ್ನ ತೀರ್ಪು ಬರೆದಿದ್ದಾನೆ. ಮೇ 13ರಂದು ಮತದಾರನ ಅಂತಿಮ ತೀರ್ಪು ಹೊರಬೀಳಲಿದೆ. ಸೌತ್ ಫಸ್ಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.
ಸೌತ್ ಫಸ್ಟ್ ಎಕ್ಸಿಟ್ ಪೋಲ್ ಸರ್ವೆ ಪ್ರಕಾರ ಕಾಂಗ್ರೆಸ್ ಈ ಬಾರಿ 107 ರಿಂದ 119 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಆಡಳಿತಾರೂಢ ಬಿಜೆಪಿ 78 ರಿಂದ 90 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ 23 ರಿಂದ 29 ಸ್ಥಾನಗಳನ್ನು ಪಡೆಯಲಿದ್ದು, ಇತರೆ 1-3 ಸ್ಥಾನಗಳು ಬರಬಹುದು ಎಂದು ಹೇಳಿದೆ.

ಕಾಂಗ್ರೆಸ್ ಸರಳ ಬಹುಮತಕ್ಕೆ ಹತ್ತಿರದಲ್ಲಿದೆ, ಒಂದು ವೇಳೆ ಕಾಂಗ್ರೆಸ್ 105 ಅಥವಾ ಅದಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ ಎನ್ನುವು ಕುತೂಹಲ ಆರಂಭವಾಗುತ್ತದೆ. ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ಯಾ ಎನ್ನುವ ಚರ್ಚೆ ಈಗಾಗಲೇ ಆರಂಭವಾಗಿದೆ.
ಕಾಂಗ್ರೆಸ್ ಶೇಕಡಾ 40ರಷ್ಟು ಮತಗಳನ್ನು ಪಡೆಯಲಿದೆ, ಬಿಜೆಪಿ ಶೇಕಡಾ 36 ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ ಶೇಕಡಾ 16 ರಷ್ಟು ಮತಗಳನ್ನು ಪಡೆಯಲಿದ್ದು, ಶೇಕಡಾ 6 ರಷ್ಟು ಇತರರ ಪಾಲಾಗಲಿದೆ ಎಂದು ಹೇಳಿದೆ.
ಇನ್ನು ರಾಜ್ಯದ ಜನತೆ ಮತ್ತೊಮ್ಮೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸಿದ್ದಾರೆ. ಶೇಕಡಾ 42 ರಷ್ಟು ಮಂದಿ ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಬೇಕು ಎಂದು ಶೇಕಡಾ 24 ರಷ್ಟು ಜನ ಹೇಳಿದ್ದು, ಶೇಕಡಾ 17 ರಷ್ಟು ಜನ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಬಯಸಿದ್ದಾರೆ. ಶೇಕಡಾ 14 ರಷ್ಟು ಮಂದಿ ಬಿಎಸ್‌ವೈ ಮೇಲೆ ಒಲವು ತೋರಿದ್ದು, ಶೇಕಡಾ 3 ರಷ್ಟು ಮಂದಿ ಮಾತ್ರ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದಿದ್ದಾರೆ.












Click it and Unblock the Notifications