Get Updates
Get notified of breaking news, exclusive insights, and must-see stories!

ವರ್ಷಕ್ಕೆ 30 ದಿನಗಳ ಗಳಿಕೆ ರಜೆ: ಮಹತ್ವದ ಆದೇಶ, ವಿವರ

ಬೆಂಗಳೂರು, ಏಪ್ರಿಲ್ 13: ಸಮಾಜ ಕಲ್ಯಾಣ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ವರ್ಷಕ್ಕೆ 30 ದಿನಗಳ ಗಳಿಕೆ ರಜೆಯನ್ನು ಪಡೆಯಲು ಮಂಜೂರಾತಿ ಆದೇಶವನ್ನು ನೀಡುವ ಆದೇಶ ಇದಾಗಿದೆ. ಅಧ್ಯಕ್ಷರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ನೌಕರರ ಸಂಘ (ರಿ), ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪತ್ರದ ಅನ್ವಯ ಈ ಆದೇಶವನ್ನು ಹೊರಡಿಸಲಾಗಿದ್ದು, ವಿವರಗಳನ್ನು ಸಹ ನೀಡಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಎಂ. ಬಾಟಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾರಕರು ಹಾಗೂ ನಿಲಯ ಪಾಲಕರು (ಪುರುಷ) (ಮಹಿಳೆ) ಇವರುಗಳನ್ನು ರಜಾ ರಹಿತ ಸಿಬ್ಬಂದಿ ಎಂದು ಪರಿಗಣಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

Social Welfare Department Order On 30 Days Yearly Holidays

ಪ್ರಸ್ತಾವನೆ: ಅಧ್ಯಕ್ಷರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ನೌಕರರ ಸಂಘ (ರಿ), ಬೆಳಗಾವಿ ಇವರು ದಿನಾಂಕ 28.12.2006ರ ಪತ್ರದಲ್ಲಿ 8 ಬೇಡಿಕೆಗಳನ್ನು ಸಲ್ಲಿಸಿದ್ದು, ಅದರಲ್ಲಿ 2ನೇ ಬೇಡಿಕೆ ಸಮಾಜ ಕಲ್ಯಾಣ ಇಲಾಖೆಯಲ್ಲ ಇರುವಂತೆ ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ನಿಲಯ ಪಾಲಕರನ್ನು ರಜಾ ರಹಿತ ಇಲಾಖಾ ವ್ಯಾಪ್ತಿಯಲ್ಲಿ ತರುವುದು ಎಂಬುದು ಆಗಿದೆ.

ಆಯುಕ್ಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಪತ್ರ ದಿನಾಂಕ 9/8/2007ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ರಾಜ್ಯಾದ್ಯಂತ 1184 ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಹಾಗೂ 284 ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ವಿದ್ಯಾರ್ಥಿನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾಕರು ಹಾಗೂ ನಿಲಯ ಪಾಲಕರುಗಳನ್ನು 'ರಜಾ ರಹಿತ' ಇಲಾಖಾ ನೌಕರರೆಂದು ಪರಿಗಣಿಸಲಾಗಿರುತ್ತದೆ.

ಇದರಿಂದಾಗಿ, ಸದರಿ ನೌಕರರು 'ರಜಾ ರಹಿತ' ಇಲಾಖಾ ನೌಕರರು ಪಡೆಯುತ್ತಿರುವ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುತ್ತಾರ. ಸರ್ಕಾರದ ಆದೇಶ ದಿನಾಂಕ 1/4/1986ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ನಿಲಯ ಮೇಲ್ವಿಚಾರಕರು ಹಾಗೂ ನಿಲಯ ಪಾಲಕರುಗಳನ್ನು 'ರಜಾ ರಹಿತ' ಇಲಾಖಾ ನೌಕರರೆಂದು ದಿನಾಂಕ 1/4/1986ರಿಂದ ಜಾರಿಗೆ ಬರುವಂತೆ ಪರಿಗಣಿಸಿ ಆದೇಶಿಸಲಾಗಿರುತ್ತದೆ.

ಎರಡು ಇಲಾಖೆಗಳ ವಿದ್ಯಾರ್ಥಿನಿಲಯಗಳ ಸಿಬ್ಬಂದಿಗಳ (ನಿಲಯ ಮೇಲ್ವಿಚಾರಕರು ಹಾಗೂ ನಿಲಯ ಪಾಲಕರು) ಕರ್ತವ್ಯ ಹಾಗೂ ಜವಾಬ್ದಾರಿಗಳು ಒಂದೇ ಸಮಾನಾಂತರವಾಗಿದ್ದು, ಸರ್ಕಾರದ ಸವಲತ್ತುಗಳನ್ನು ನೀಡುವಲ್ಲಿ ಈ ರೀತಿಯ ತಾರತಮ್ಯವಿರುವುದು ಸಮಂಜಸವಾಗಿರುವುದಿಲ್ಲ.

ಆದ್ದರಿಂದ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿನ ನಿಲಯ ಮೇಲ್ವಿಚಾರಕರು ಹಾಗೂ ನಿಲಯಪಾಲಕರುಗಳಿಗೆ ರಜಾ ರಹಿತ ಇಲಾಖಾ ನೌಕರರೆಂದು ಇರುವಂತೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾರಕರು ನಿಲಯ ಪಾಲಕರುಗಳನ್ನು ರಚಾ ಸಹಿತ ಇಲಾಖಾ ನೌಕರರ ಬದಲಾಗಿ ರಜಾ ರಹಿತ ಇಲಾಖಾ ನೌಕರರೆಂದು
ಪರಿಗಣಿಸಲು ಕೋರಿರುತ್ತಾರೆ.

ಸಮಾಜ ಕಲ್ಯಾಣ ಇಲಾಖೆಯ ಆದೇಶ ದಿನಾಂಕ 1/4/1986ರಲ್ಲಿ ದಿನಾಂಕ 13/8/1968ರಲ್ಲಿ ಎಸ್.ಸಿ ಮತ್ತು ಎಸ್.ಟಿ. ಇಲಾಖೆಯ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೊಂದು ಗ್ರೂಪ್-ಸಿ ಹುದ್ದೆಗಳನ್ನು ರಜಾ ರಹಿತ ಹುದ್ದೆಗಳೆಂದು ಪರಿಗಣಿಸಿ ಆದೇಶಿಸಿದೆ. ಮೇಲಿನ ಅಂಶಗಳನ್ನು ಪರಿಶೀಲಿಸಿ, ದಿನಾಂಕ 30/3/2011ರಂದು ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ದಿನಾಂಕ 13/6/1968 ಅನ್ನು ಭಾಗಶ: ಮಾರ್ಪಡಿಸಿ ಹೂರಡಿಸಿರುವ ಸಮಾಜ ಕಲ್ಯಾಣ ಇಲಾಖೆಯ ಆದೇಶದ ಮಾದರಿಯಲ್ಲಿಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಪಾಲಕರು ಹಾಗೂ ನಿಲಯ ಮೇಲ್ವಿಚಾರಕರು (ಪುರುಷ) (ಮಹಿಳೆ) ಇವರುಗಳನ್ನು ರಜಾ ರಹಿತ ಸಿಬ್ಬಂದಿ ಎಂದು ಪರಿಗಣಿಸಿ, ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 118ರ ಪ್ರಕಾರ ಪ್ರತಿ ವರ್ಷಕ್ಕೆ 30 ದಿನಗಳ ಗಳಿಕೆ ರಜೆಯನ್ನು ಪಡೆಯಲು ಮಂಜೂರಾತಿ ಆದೇಶವನ್ನು ನೀಡಿದೆ. ಸದರಿ ಆದೇಶಕ್ಕೆ ಆರ್ಥಿಕ ಇಲಾಖೆಯ ಸಹಮತಿ ನೀಡಲಾಗಿದೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+