'ಕನ್ನಡಕ್ಕೂ ಬೇಕು ಬಿಬಿಸಿ', ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಬೆಂಗಳೂರು, ಅಕ್ಟೋಬರ್ 9: ಇತ್ತೀಚೆಗೆ ಬ್ರಿಟಿಷ್ ಬ್ರಾಡ್ ಕಾಸ್ಟ್ ಕಂಪನಿ (ಬಿಬಿಸಿ) ಹೊಸದಾಗಿ ಭಾರತದ 4 ಭಾಷೆಗಳಿಗೆ ತನ್ನ ಸೇವೆ ವಿಸ್ತರಿಸಿದೆ. ಆದರೆ ಇದರಲ್ಲಿ ಕನ್ನಡ ಮಾತ್ರ ಸೇರಿಲ್ಲ. ಹೀಗಾಗಿ ಕನ್ನಡ ಭಾಷೆಯಲ್ಲೂ ಬಿಬಿಸಿ ಆಯ್ಕೆ ಕೊಡಿ ಎಂದು ಅಭಿಯಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಅಕ್ಟೋಬರ್ 2ರಂದು ಬಿಬಿಸಿ ಭಾರತದ ಗುಜರಾತಿ, ಮರಾಠಿ, ಪಂಜಾಬಿ ಮತ್ತು ತೆಲುಗು ಭಾಷೆಗಳಲ್ಲಿ ತನ್ನ ಸೇವೆ ಆರಂಭಿಸಿತ್ತು. ಒಟ್ಟು 11 ಭಾಷೆಗಳಿಗೆ ತನ್ನ ಸೇವೆ ವಿಸ್ತರಿಸಿದ್ದ ಬಿಬಿಸಿ ಇದರಲ್ಲಿ ನಾಲ್ಕು ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿತ್ತು.

ಈ ಹಿಂದೆಯೇ ತಮಿಳು ಭಾಷೆಯಲ್ಲಿ ತನ್ನ ಸೇವೆ ಆರಂಭಿಸಿದ್ದ ಬಿಬಿಸಿ ಇದೀಗ ತೆಲುಗಿಗೂ ಅದನ್ನು ವಿಸ್ತರಿಸಿದೆ. ಅತ್ತ ಹಿಂದೆ ಮರಾಠಿ ಭಾಷೆಗಳಲ್ಲೂ ಬಿಬಿಸಿ ಲಭ್ಯವಿದೆ. ಈಗ ದಕ್ಷಿಣ ಭಾರತದಲ್ಲಿ ಉಳಿದಿರುವುದು ಕನ್ನಡ ಮತ್ತು ಮಲಯಾಳಂ ಮಾತ್ರ.

ಕನ್ನಡದಲ್ಲೂ ಬೇಕು ಬಿಬಿಸಿ

ಹೀಗಾಗಿ ಕನ್ನಡಕ್ಕೂ ಬಿಬಿಸಿ ಬೇಕು ಎಂಬ ಅಭಿಯಾನವನ್ನು ಕನ್ನಡ ಗ್ರಾಹಕರ ಕೂಟ ಸೇರಿದಂತೆ ಹಲವು ಕನ್ನಡಿಗರು ಆರಂಭಿಸಿದ್ದಾರೆ. ಕನ್ನಡದಲ್ಲೂ ಬಿಬಿಸಿ ಆಯ್ಕೆ ಕೊಡಿ ಎಂದು ಬಿಬಿಸಿ ಸಂಸ್ಥೆಗೆ ಟ್ವಿಟ್ಟರಿನಲ್ಲಿ ಹಕ್ಕೊತ್ತಾಯ ಮಂಡಿಸಿದ್ದಾರೆ.

ಕನ್ನಡದಲ್ಲಿ ಯಾವಾಗ ಆರಂಭಿಸ್ತೀರಿ?

ಟ್ವಿಟ್ಟರ್ ಬಳಕೆದಾರ ಆಶಿತ್ ಶೆಟ್ಟಿ, ಬಿಬಿಸಿಯವರೇ ನೀವು ಯಾವಾಗ ಕನ್ನಡದಲ್ಲಿ ನಿಮ್ಮ ಸೇವೆಯನ್ನು ಆರಂಭಿಸುತ್ತೀರಿ? ಸದ್ಯದಲ್ಲೇ ಆರಂಭಿಸುತ್ತೀರಿ ಎಂದು ಭಾವಿಸಿದ್ದೇನೆ ಎಂದು ಬಿಬಿಸಿಯವರನ್ನು ಪ್ರಶ್ನಿಸಿದ್ದಾರೆ.

ಆರುವರೆ ಕೋಟಿ ಕನ್ನಡಿಗರಿದ್ದಾರೆ ಸ್ವಾಮಿ

ಕನ್ನಡವನ್ನು 6.5 ಕೋಟಿ ಜನರು ಮಾತನಾಡುತ್ತಾರೆ. ಹೀಗಿದ್ದೂ ಕನ್ನಡದಲ್ಲಿ ಯಾಕೆ ನೀವು ನಿಮ್ಮ ಸೇವೆಯನ್ನು ಆರಂಭಿಸಿಲ್ಲ ಎಂದು ಭೀಮೇಶ್ ರಾವ್ ಎನ್.ಪಿ ಎನ್ನುವವರು ಪ್ರಶ್ನೆ ಎತ್ತಿದ್ದಾರೆ.

ಬೇಡಿಕೆ ಮನ್ನಿಸುತ್ತಾ ಬಿಬಿಸಿ?

ಕನ್ನಡದಲ್ಲೂ ಬಿಬಿಸಿ ತನ್ನ ಸೇವೆ ಆರಂಭಿಸಲು ಇದು ಸರಿಯಾದ ಸಮಯ. ನೀವು ಹೆಚ್ಚುವರಿಯಾಗಿ 6.5 ಕೋಟಿ ಜನರನ್ನು ತಲುಪಬಹುದು. ನಾವು ಬಿಬಿಸಿ ಕನ್ನಡ ನೋಡಲು ಕಾಯುತ್ತಿದ್ದೇವೆ. ನಮ್ಮ ಮನವಿಯನ್ನು ಒಪ್ಪಿಕೊಳ್ಳಿ ಎಂದು ಮಂಜುನಾಥ್ ಎಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬಿಬಿಸಿಯ ಅತ್ಯುತ್ತಮ ಸಾಕ್ಷ್ಯಚಿತ್ರಗಳು ಕನ್ನಡದಲ್ಲೂ ಬೇಕು ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ.

ಇದೀಗ ಬಿಬಿಸಿ ಕನ್ನಡಿಗರ ಬೇಡಿಕೆ ಮನ್ನಿಸಿ ಕನ್ನಡದಲ್ಲೂ ತನ್ನ ಸೇವೆ ಆರಂಭಿಸುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+