ಬಿಜೆಪಿಯದ್ದು '2 ರೆಡ್ಡಿ + 1 ಯಡ್ಡಿ' ಸೂತ್ರ: ಸಿದ್ದರಾಮಯ್ಯ ಟೀಕೆ

ನರೇಂದ್ರ ಮೋದಿ ಅವರು ನಿನ್ನೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಅವರದ್ದು 2+1 ಸೂತ್ರ ಎಂದು ಟೀಕಿಸಿದ ಬೆನ್ನಲ್ಲೆ ಸಿದ್ದರಾಮಯ್ಯ ಅವರು ಮೋದಿ ಹಾಗೂ ಬಿಜೆಪಿ ಮೇಲೆ ಟ್ವಿಟ್ಟರ್ ವಾರ್ ಶುರುಹಚ್ಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದರ ಬಗ್ಗೆ ಹಾಗೂ ಅವರ ಮಗ ಯತೀಂದ್ರಗೆ ಸೀಟು ಕೊಡಿಸಿರುವ ಬಗ್ಗೆ ಟೀಕಿಸುತ್ತಾ ಮೋದಿ ಅವರು ಸಿದ್ದರಾಮಯ್ಯ ಅವರದ್ದು 2+1 ಸೂತ್ರ ಎಂದಿದ್ದರು.

ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನನ್ನದೇನೋ ಗೊತ್ತಿಲ್ಲ ಆದರೆ ಬಿಜೆಪಿಯದ್ದು ಮಾತ್ರ 2 ರೆಡ್ಡಿ + 1 ಯಡ್ಡಿ ಸೂತ್ರ ಎಂದು ಕಾಲೆಳೆದಿದ್ದಾರೆ.

Siddaramiah said BJP has 2 Reddy 1 Yeddy formula

ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಮೋದಿ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು 'ನೀವು ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಏಕೆ ನಿಂತಿದ್ದಿರಿ ಸೋಲಿನ ಭಯದಿಂದಲೇ?' ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರು ರಾಜ್ಯಕ್ಕೆ ಬಂದಾಗಿನಿಂದ ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ಸಿದ್ದರಾಮಯ್ಯ ಅವರನ್ನೇ ಗುರಿ ಮಾಡಿ ಟೀಕಿಸುತ್ತಿದ್ದು ಸಿದ್ದರಾಮಯ್ಯ ಅವರು ಸಹ ಟ್ವಿಟ್ಟರ್ ಮೂಲಕ ಸರಿಯಾಗಿಯೇ ಟಾಂಗ್ ನೀಡುತ್ತಿದ್ದಾರೆ. ಚುನಾವಣೆ ಮುಗಿಯುವ ವರೆಗೂ ಈ ವಾರ್‌ ನಡೆಯುತ್ತಲೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+