ವಿಡಿಯೋ ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಟ್ವೀಟ್ ಕಿಡಿ

ಬೆಂಗಳೂರು, ಜೂನ್ 30: ತಾವು ತಮ್ಮ ಆಪ್ತರೊಂದಿಗೆ ಮಾತನಾಡಿದ್ದು ಎನ್ನಲಾದ ವಿಡಿಯೋವನ್ನು ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು 'ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ.' ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಮಾತಿನ ಮುಂದಿನ ಮತ್ತು ಹಿಂದಿನ ಭಾಗವನ್ನು ಕತ್ತರಿಸಿಸಿ ವಿವಾದಕ್ಕೆ ಎಡೆ ಮಾಡಬಹುದಾಂತೆ ಅರ್ಥ ಹೊಮ್ಮುವಂತೆ ಮಾಡಿ ಅದನ್ನಷ್ಟೆ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಠಿಸಲೆಂದೇ ಪ್ರಸಾರ ಮಾಡಲಾಗಿದೆ ಎಂಬುದು ಸಿದ್ದರಾಮಯ್ಯ ಅವರ ಆರೋಪವಾಗಿದೆ.

Siddaramiah angry tweet about media who publish his video

ಈ ಬಗ್ಗೆ ಎರಡು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸುದ್ದಿ ಮಾಧ್ಯಮಗಳನ್ನೇ ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. ತಮ್ಮ ಎರಡನೇ ಟ್ವೀಟ್‌ನಲ್ಲಿ 'ನಾನು ವಿಡಿಯೋ ಬಗ್ಗೆ ಶುಕ್ರವಾರದವರೆಗೆ ಪ್ರತಿಕ್ರಿಯಿಸಿಯೇ ಇರಲಿಲ್ಲ, ಹಾಗಿದ್ದಲ್ಲಿ ಯೂ-ಟರ್ನ್ ಹೇಗೆ ಸಾಧ್ಯ? ಅದೊಂದು ದುರುದ್ದೇಶದ ವಿಡಿಯೋ ಅದರ ಹಿಂದೆ ಯಾರಿದ್ದರು ಎಂಬುದು ಪತ್ತೆ ಮಾಡಲಾಗುವುದು ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರವು ಐದು ವರ್ಷಗಳ ಕಾಲ ಸುಭದ್ರವಾಗಿರಲಿದ್ದು, ಸಮ್ಮಿಶ್ರ ಸರ್ಕಾರದ ಮಂತ್ರಿಗಳು ಶಾಸಕರು ಇದರ ಬಗ್ಗೆ ಪ್ರತಿಕ್ರಿಯೆ ನೀಡಬಾರದು, ವಿಡಿಯೋವನ್ನು ನಿರ್ಲಕ್ಷಿಸಬೇಕು ಎಂದು ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

ನಿನ್ನೆ ಸಹ ಈ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾನು ಯಾವ ಸನ್ನಿವೇಶದಲ್ಲಿ ಮಾತನಾಡಿದ್ದೆ ಎಂಬುದು ಮುಖ್ಯ. ಆದರೆ ವಿಡಿಯೋವನ್ನು ವಿವಾದ ಹುಟ್ಟುಹಾಕುವ ರೀತಿಯಲ್ಲೇ ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ಉಜಿರೆಯ ಶಾಂತಿವನದಲ್ಲಿ ಕೂತು ಸಮ್ಮಿಶ್ರ ಸರ್ಕಾರ ಪೂರ್ಣ ಅವಧಿಗೆ ಇರುವುದಿಲ್ಲ ಆದಷ್ಟು ಬೇಗ ಬೀಳುತ್ತದೆ ಎಂದಿದ್ದ ಸಂಭಾಷಣೆ ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಅದನ್ನು ಹಲವು ಸುದ್ದಿಮಾಧ್ಯಮಗಳು ಪ್ರಸಾರ ಮಾಡಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+