ಊರಿನವರು ಪಾರ್ಲಿಮೆಂಟ್ ನೋಡ್ಬೇಕು ಅಂದ್ರೆ ಸಿದ್ದರಾಮಯ್ಯನವರೂ ಪಾಸ್ ಕೊಡ್ತಾರೆ: ಸಿ ಟಿ ರವಿ

ಚಿಕ್ಕಮಗಳೂರು,ಡಿಸೆಂಬರ್16: ಸಂಸತ್ ನೋಡುತ್ತೇವೆ ಪಾಸ್ ಕೊಡಿ ಅಂದರೇ ಕೊಡ್ತಾರೆ. ‌ಊರಿನವರು ಪಾರ್ಲಿಮೆಂಟ್‌ ನೋಡಬೇಕು ಪಾಸ್‌ ಕೊಡಿ ಎಂದರೇ ನಾನು, ನೀವು, ಸಿದ್ದರಾಮಯ್ಯನವರು ಪಾಸ್ ಕೊಡಿಸ್ತಾರೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.

ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರತಾಪ್‍ಸಿಂಹ ಜಾಗದಲ್ಲಿ ನಾನೇ ಇದ್ದರೂ ಪಾಸ್ ಕೊಡಿಸುತ್ತಿದ್ದೇ. ಶಿಫಾರಸ್ಸು ಮಾಡುವಾಗ ಒಳ್ಳೇಯವನೋ, ಕೆಟ್ಟವನೋ ಅಂತ ಗುರುತಿಸೋ ಐ ಸ್ಕ್ಯಾನರ್ ಯಾರ ಬಳಿಯೂ ಇರಲ್ಲ. ಘೋಷಿತ ಅಪರಾಧಿಗೆ ಶಿಫಾರಸ್ಸು ಮಾಡಿದರೇ ಅದು ಅಪರಾಧವಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

Siddaramaiah Will Give A Pass If The Assembly Has To See Says CT Ravi

ಊರಿನವರು ಪಾರ್ಲಿಮೆಂಟ್ ನೋಡಬೇಕು, ವಿಧಾನಸಭೆ ನೋಡಬೇಕು ಅಂದರೆ ನಾನು, ನೀವು, ಸಿದ್ದರಾಮಯ್ಯನವರು ಪಾಸ್ ಕೊಡಿಸ್ತಾರೆ. ಒಳ್ಳೇಯವನೋ, ಕೆಟ್ಟವನೋ ಯಾರು ಮುಂಚಿತವಾಗಿ ತಿಳಿದಿರುವುದಿಲ್ಲ, ಆದರೆ, ಸಂಸತ್ ಘಟನೆಯಲ್ಲಿ ಭದ್ರತಾಲೋಪವಾಗಿರುವುದು ನಿಜ. ಅದನ್ನು ನಾನು ಸಮರ್ಥಿಸುವುದಿಲ್ಲ ಎಂದರು.

ಘಟನೆ ಸಂಬಂಧ ಕಾಂಗ್ರೆಸ್‍ನ ಸಕ್ರೀಯತೆ ನೋಡಿದರೇ ಟೂಲ್‍ಕಿಟ್ ರಾಜಕೀಯದ ಅನುಮಾನ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ಕಾಂಗ್ರೆಸ್ ಸಂಸದನ ಮನೆಯಲ್ಲಿನ ನೋಟಿನ ಘಟನೆ ಮರೆತು ಹೋಯ್ತು, ಇದರ ಬಗ್ಗೆ ಒಂದೇ ಒಂದು ಶಬ್ದ ರಾಹುಲ್‍ಗಾಂಧಿ ಚಕಾರ ಎತ್ತಲಿಲ್ಲ. ಇದಕ್ಕೆ ಐಟಿ, ಇಡಿ, ಸಿಬಿಐ ದಾಳಿ ಅಂದರೇ, ಕಾಂಗ್ರೆಸ್ ಭಯ ಗೊಗೊಳ್ಳುವುದು ಎಂದ ಅವರು, ಧೀರಜ್ ಸಾಹು ಅಂತವರು ನೂರಾರು ಜನ ಕಾಂಗ್ರೆಸ್ಸಿಗರ ಬಳಿ ಇದ್ದಾರೆ. ಇದೆಲ್ಲ ಲೋಕಸಭೆ ಚುನಾವಣೆಗೆ ಸಂಗ್ರಹಿಸಿಟ್ಟಿರುವ ಹಣ, ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸಬೇಕು ಎಂದು ಷಡ್ಯಂತರ ನಡೆಸಲಾಗುತ್ತಿದೆ ಎಂದರು.

Siddaramaiah Will Give A Pass If The Assembly Has To See Says CT Ravi

ಅಪಪ್ರಚಾರ, ಕಳ್ಳಹಣದ ಜೊತೆ ವಿದೇಶಿ ಶಕ್ತಿಗಳ ಜೊತೆ ಶಾಮೀಲಾಗಿರುವ ಸಂಶಯ ಇದೆ. ಎಲ್ಲದರ ಬಗ್ಗೆ ಪಾರ್ಟ್ ಅಂಡ್ ಪಾರ್ಸಲ್ ಆಗಿ ಇದೆಲ್ಲಾ ನಡೆದಿರುವ ಸಂಶಯವಿದೆ. ಇದರ ಹಿಂದಿನ ಶಕ್ತಿ ಯಾರು, ಯಾರ ಜೊತೆ ಸಂಬಂಧವಿದೆ ಅನ್ನೋ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಂಸತ್ ಮೇಲಿನ ದಾಳಿ ಪ್ರಕರಣವನ್ನು ಸ್ಪೀಕರ್ ನೇತೃತ್ವದಲ್ಲಿ ತನಿಖೆ

ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಂಸತ್ ಮೇಲಿನ ದಾಳಿ ಪ್ರಕರಣವನ್ನು ಸ್ಪೀಕರ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ. ಸಂಸತ್ ಗೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರು ವಾರಸ್ಸುದಾರರು, ಗಂಭೀರ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ದಳದ ಎಜೆಸ್ಸಿಗಳು, ಸಂಸತ್ ಒಳಗಿನ ಭದ್ರತಾ ವ್ಯವಸ್ಥೆ ತನಿಖೆ ಮಾಡುತ್ತಿದೆ, ಸದನದ ಸಂದರ್ಭ ಅಧಿಕಾರಿಗಳು ಸದನದ ಒಳಗೆ ಬರೋದು ಕಷ್ಟವಾಗಿರುತ್ತದೆ. ಇವತ್ತು ನಾಳೆ ರಜೆ ಇದೆ, ಎಲ್ಲಾ ರೀತಿಯ ತನಿಖೆ ಮಾಡುತ್ತೇವೆಂದು ಹೇಳಿದ್ದಾರೆ. ಅಪರಾಧಿಗಳು ಯಾರು ಅವರು ಸಿಕ್ಕಿ ಬಿದ್ದಿದ್ದಾರೆ, ಝಾ ಎಂಬಾತ ಎಲ್ಲರ ಮೊಬೈಲ್ ಸಂಗ್ರಹಿಸಿ ಓಡಿ ಹೋಗಿದ್ದ, ಆತನೂ ಅರೆಸ್ಟ್ ಆಗಿದ್ದಾನೆ. ಶೀಘ್ರವೇ ಘಟನೆ ಹಿಂದಿನ ಶಕ್ತಿ ಹಾಗೂ ಷಡ್ಯಂತ್ರ ಹೊರ ಬರಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+