Bajrang Dal Ban: ಬಜರಂಗದಳ ಬ್ಯಾನ್ ಮಾಡ್ತೀರಾ ಎಂದಿದ್ಕೆ ಸಿದ್ದರಾಮಯ್ಯ ಹೇಳಿದ್ದೇನು?

ಸಮಾಜದಲ್ಲಿ ಶಾಂತಿಯನ್ನು ಕೆಡಿಸುವ ಯಾವುದೇ ಸಂಘಟನೆಗಳನ್ನಾದರೂ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಬಜರಂಗದಳ, ಪಿಎಫ್‌ಐ ಸಂಘಟನೆಗಳ ಹೆಸರನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕರು ಇದನ್ನು ಚುನಾವಣಾ ಅಸ್ತ್ರವಾಗಿಸಿಕೊಂಡಿದ್ದಾರೆ. ಬಜರಂಗದಳ ನಿಷೇಧ ವಿಚಾರವನ್ನು ವಿವಾದವನ್ನಾಗಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಉತ್ಸಾಹದಲ್ಲಿ ಬಿಜೆಪಿ ನಾಯಕರಿದ್ದರೆ, ಕಾಂಗ್ರೆಸ್ ಕೂಡ ಅದಕ್ಕೆ ತಿರುಗೇಟು ನೀಡಲು ನಿರ್ಧರಿಸಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಬಜರಂಗದಳ ನಿಷೇಧಿಸುವ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Siddaramaiah Reaction To Bajarang Dal Ban

"ಯಾರು ಕೋಮುವಾದ ಮಾಡ್ತರೆ, ಯಾರು ಅಶಾಂತಿ ನಿರ್ಮಾಣ ಮಾಡ್ತಾರೆ, ಯಾರು ದ್ವೇಷದ ರಾಜಕಾರಣ ಮಾಡ್ತಾರೆ ಅಂತಹ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ನಾವು ಹೇಳಿದ್ದೇವೆ. ಯಾವುದೋ ಒಂದು ಸಂಘಟನೆಯನ್ನು ಮಾತ್ರ ನಿಷೇಧ ಮಾಡುವುದಾಗಿ ಹೇಳಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯವರು ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ, ಕಾಂಗ್ರೆಸ್ ಹಿಂದೂಗಳ ವಿರೋಧಿಗಳಂತೆ ಬಿಂಬಿಸುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, "ಬಿಜೆಪಿಯವರಿಗೆ ಇನ್ನೇನು ಹೇಳಲು ಸಾಧ್ಯ, ನೀರಾವರಿ ಯೋಜನೆಗಳನ್ನು ನೀಡಿದ್ದೇವೆ ಎನ್ನಲು ಆಗುತ್ತಾ? ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇವೆ ಎಂದು ಹೇಳುತ್ತಾರ? ಅವರು ಕೆಲಸ ಮಾಡಿಲ್ಲ ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ" ಎಂದರು.

ಘೋಷಣೆ ವಾಪಸ್ ಪಡೆಯದಿರುವ ನಿರ್ಧಾರ

ಬಜರಂಗದಳ, ಪಿಎಫ್‌ಐ ಸೇರಿದಂತೆ ಇತರೆ ಸಂಘಟನೆಗಳ ನಿಷೇಧ ಕುರಿತ ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಹಿಂದೆ ಪಡೆಯದಿರಲು ಕಾಂಗ್ರೆಸ್ ನಿರ್ಧರಿಸಿದೆ. ಬಜರಂಗದಳ ನಿಷೇಧ ವಿಚಾರವನ್ನು ಬಿಜೆಪಿ ರಾಜಕೀಯಕರಣಗೊಳಿಸಿ ವಿವಾದ ಮಾಡಲು ಯತ್ನಿಸುತ್ತಿದ್ದು, ಬಿಜೆಪಿ ನಾಯಕರಿಗೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಬಜರಂಗದಳಕ್ಕೂ ಆಂಜನೇಯನಿಗೂ ಸಂಬಂಧವಿಲ್ಲ, ಸಮಜಾದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳಿದ್ದೇವೆ, ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿ ಯಾಕೆ ಹೆಗಲುಮುಟ್ಟಿ ನೋಡಿಕೊಳ್ಳುತ್ತಿದೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕಗಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಜಗಳ ಮಾಡುವ ರಾಜಕೀಯ ಮಾಡುತ್ತಿದ್ದಾರೆ. ರಾತ್ರಿ ಮಾಂಸ ತಿಂದು ಬೆಳಗ್ಗೆ ನಮಗೆ ಬೈತಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+