ವಾಲ್ಮೀಕಿ ನಿಗಮ ಹಗರಣ: ಯಾರಿಂದ ಎಷ್ಟು ವಸೂಲಿ? - ಅಂಕಿ ಅಂಶಗಳನ್ನ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಜುಲೈ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣವೇ ದೊಡ್ಡ ಕಂಟಕವಾಗಿದ್ದು, ಶುಕ್ರವಾರ ಈ ಕುರಿತು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ನಿಮಯ 69ರಡಿ ಚರ್ಚೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಕುರಿತು ಎಸ್ ಐ ಟಿ ತನಿಖೆ ವೇಳೆ ವಶಪಡಿಸಿಕೊಂಡ ಹಣದ ಕುರಿತು ಸಂಪೂರ್ಣ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

ನಮ್ಮ ಎಸ್.ಐ.ಟಿ.ಯು ಇದುವರೆಗೆ ಮುಟ್ಟು ಗೋಲು ಹಾಕಿಕೊಂಡಿರುವ ಮೊತ್ತ
1 14/2024 8,21,62,600 ಸತ್ಯನಾರಾಯಣ ವರ್ಮಾ
2 16/2024 3,62,47,200 ಪದ್ಮನಾಭ ಜೆ.ಜಿ.
3 17/2024 30,00,000 ಪದ್ಮನಾಭ ಜೆ.ಜಿ.
4 18/2024 1,49,65,200 ನಾಗೇಶ್ವರ ರಾವ್
5- 20/2024 30,00,000 ಚಂದ್ರಮೋಹನ್
6- 26/2024 12,50,000 ಜಿ.ಕೆ. ಜಗದೀಶ್
7- 27/2024 3,10,000 ಸತ್ಯನಾರಾಯಣ ವರ್ಮಾ
8 -28/2024 24,00,000 ಸತ್ಯನಾರಾಯಣ ವರ್ಮಾ
ಒಟ್ಟು ನಗದು 14,33,35,000
9 -207 ಗ್ರಾಂ ಚಿನ್ನ 13,50,000 ಚಂದ್ರಮೋಹನ್
10- 47.6 ಗ್ರಾಂ ಚಿನ್ನ 3,09,400 ಜಿ.ಕೆ. ಜಗದೀಶ್
ವಿವಿಧ 217 ಬ್ಯಾಂಕ್ ಅಕೌಂಟ್ ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ.ಗಳನ್ನು ಫ್ರೀಜ್ ಮಾಡಲಾಗಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ.
ಎಸ್.ಐ.ಟಿ. ಯು ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರ್‌ನ್ನು ಬಿಗ್‌ಬಾಯ್ಸ್ ಟಾಯ್ಸ್ ಲಿ. ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಕಂಪನಿಯು ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.
ಇದೇ ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್.ಐ.ಟಿ.ಯು ತನ್ನ ವಶಕ್ಕೆ ಪಡೆದಿರುತ್ತದೆ. ಈ ಕಾರನ್ನೂ ಸಹ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ 1,21,00,000. ದಿನಾಂಕ:23.05.2024 ರಂದು ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ[ ರತ್ನಾಕರ್ ಬ್ಯಾಂಕ್] ಎಸ್.ಟಿ. ನಿಗಮದ ಖಾತೆಗೆ 5.00 ಕೋಟಿ ಮರಳಿಸಿರುತ್ತಾರೆ.
ಯೂನಿಯನ್ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46.00 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್ ಲಿ. ನಲ್ಲಿದೆ. ಈ ಹಣವನ್ನು ನಮ್ಮ ಎಸ್.ಐ.ಟಿ. ತಂಡವು ಫ್ರೀಜ್ ಮಾಡಿರುತ್ತದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ.












Click it and Unblock the Notifications