ಮೇಕ್ ಇನ್ ಕರ್ನಾಟಕ ಎಂದ ಸಿದ್ದರಾಮಯ್ಯ
ಬೆಂಗಳೂರು, ಜೂ.20: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ 'ಜಿಮ್' ಬದಲಿಗೆ 'ಇನ್ವೆಸ್ಟ್ ಕರ್ನಾಟಕ-2015' ವನ್ನು ಸಿದ್ದರಾಮಯ್ಯ ಸರ್ಕಾರ ಆರಂಭಿಸುತ್ತಿದೆ.
ನವೆಂಬರ್ 23 ರಿಂದ 25ರ ತನಕ ನಡೆಯಲಿರುವ ಹೊಸ ರೂಪದ ಈ ಬಂಡವಾಳ ಹೂಡಿಕೆ ಸಮಾವೇಶ, ಮೋದಿ ಅವರ ಮೇಕ್ ಇನ್ ಇಂಡಿಯಾ ಮಂತ್ರದಂತೆ ಮೇಕ್ ಇನ್ ಕರ್ನಾಟಕ ಮಂತ್ರವನ್ನು ಜಪಿಸಲಿದೆ. [ಬಂಡವಾಳ ಹೂಡಿದ ಎನ್ಆರ್‌ಐ ರವಿ ಹರಸೂರ]
ಹೂಡಿಕೆದಾರರನ್ನು ಆಕರ್ಷಿಸಲು ದೇಶದ ಇತರೆ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಿ ಬಂಡವಾಳವನ್ನು ತರಲು ಯೋಜಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹೇಳಿದ್ದಾರೆ.

ಯಾವ ಯಾವ ಕ್ಷೇತ್ರಕ್ಕೆ ಹೂಡಿಕೆ:
* ಉತ್ಪಾದನೆ : ಆಟೋಮೊಬೈಲ್, ಏರೋಸ್ಪೇಸ್, ಮೆಷಿನ್ ಟೂಲ್ಸ್, ರಕ್ಷಣಾ ಖಾತೆ ಸಾಧನಗಳು, ಹೆವಿ ಇಂಜಿನಿಯರಿಂಗ್..ಇತ್ಯಾದಿ
* ಕೃಷಿ ಹಾಗೂ ಆಹಾರ ಸಂಸ್ಕರಣೆ
* ಪ್ರವಾಸೋದ್ಯಮ
* ಮಾಹಿತಿ ತಂತ್ರಜ್ಞಾನ ಹಾಗೂ ಬಯೋ ಟೆಕ್ನಾಲಜಿ
* ಮೂಲ ಸೌಕರ್ಯ ಅಭಿವೃದ್ಧಿ
* ಖಾಸಗಿ ಕೈಗಾರಿಕಾ ಪಾರ್ಕ್
* ಸ್ಮಾರ್ಟ್ ಟೌನ್ ಶಿಪ್
* ಔಷಧ ಹಾಗೂ ಫಾರ್ಮಸ್ಯೂಟಿಕಲ್ಸ್
* ಇಂಧನ (ಪುನರ್ ಬಳಕೆ ಇಂಧನ ಸೇರಿ) [ಕೈಗಾರಿಕಾ ಕ್ರಾಂತಿಗೆ ಕರ್ನಾಟಕ ಬರೆದ ಮುನ್ನುಡಿ]
ಯಾವಾಗ? ಎಲ್ಲಿ?
* ನವೆಂಬರ್ 23 ರಿಂದ 25, 2015.
* ಬೆಂಗಳೂರು ಅರಮನೆ ಮೈದಾನ.
ರೋಡ್ ಶೋಗಳು ಎಲ್ಲೆಲ್ಲಿ?
ಮೈಸೂರು, ಹುಬ್ಬಳ್ಳಿ, ಕಲಬುರಗಿ, ಚೆನ್ನೈ, ಹೈದರಾಬಾದ್, ಪುಣೆ, ದೆಹಲಿ ಹಾಗೂ ಇನ್ನಿತರ ನಗರಗಳು. [ಹೂಡಿಕೆ : ಉ. ಕರ್ನಾಟಕಕ್ಕೆ ಸಿಂಹಪಾಲು]
ಎಲ್ಲಿಂದ ಬಂಡವಾಳ ಹೂಡಿಕೆ ನಿರೀಕ್ಷೆ:
ಜಪಾನ್, ತೈವಾನ್, ಮಧ್ಯಪ್ರಾಚ್ಯ ರಾಷ್ಟ್ರಗಳು, ಯುಎಸ್, ಜರ್ಮನಿ, ಫ್ರಾನ್ಸ್, ಸ್ವೀಡನ್ ಹಾಗೂ ಸಿಂಗಪುರ.
ಎಷ್ಟು ಪ್ರಮಾಣದ ಭೂಮಿ ವಶ?
ಸುಮಾರು 30,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಇನ್ನೂ 20,000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಗುರುತಿಸಲಾಗಿದೆ.
2010 ಜಿಮ್ ನಲ್ಲಿ : 389 ಒಡಂಬಡಿಕೆಗಳಿಗೆ ಸಹಿ, 3.92 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿತ್ತು.
2012 ಜಿಮ್ : 751 ಒಪ್ಪಂದಗಳಿಗೆ ಸಹಿ, 6.77 ಲಕ್ಷ ಕೋಟಿ ರು ಬಂಡವಾಳ ಹರಿದು ಬಂದಿತ್ತು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications