ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡವಾಳ ಹೂಡಿಕೆ : ಉ. ಕರ್ನಾಟಕಕ್ಕೆ ಸಿಂಹಪಾಲು

By Mahesh
|
Google Oneindia Kannada News

Murugesh Nirani
ಬೆಂಗಳೂರು, ಜೂ.20: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಪ್ರಭಾವದಿಂದ ಮತ್ತಷ್ಟು ಕಂಪೆನಿಗಳು ಕರ್ನಾಟಕದತ್ತ ಮುಖ ಮಾಡಿವೆ. ಸುಮಾರು 69 ಕಂಪನಿಗಳು 87,494ಕೋಟಿ ರೂ. ವೆಚ್ಚದ ಬಂಡವಾಳ ಹೂಡಿಕೆಗೆ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಯೋಜನೆಗಳಿಂದ ಹೆಚ್ಚುವರಿಯಾಗಿ 1,30,386 ಮಂದಿಗೆ ಉದ್ಯೋಗ ಸಿಗಲಿದೆ. ಒಂದೆರಡು ದಿನದಲ್ಲಿ ಆಯಾ ಕಂಪನಿಗಳು ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಸಿಂಹ ಪಾಲು : ಈಗ ಅನುಮೋದನೆ ಪಡೆದುಕೊಂಡಿರುವ ಯೋಜನೆಗಳ ಪೈಕಿ ಶೇ. 52 ರಷ್ಟು ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಲಿವೆ. ದಕ್ಷಿಣದಲ್ಲಿ ಶೇ. 41 ಹಾಗೂ ಇತರೆಡೆ ಶೇ. 7 ರಷ್ಟು ಬರಲಿವೆ. ಒಟ್ಟು 22 ವಿದ್ಯುತ್ ಉತ್ಪಾದನೆ ಯೋಜನೆಗಳಿದ್ದು, 2 ಉಷ್ಣ ವಿದ್ಯುತ್, 14 ಅನಿಲ ವಿದ್ಯುತ್ ಹಾಗೂ 6 ಅಸಾಂಪ್ರದಾಯಿಕ ಇಂಧನ ಮೂಲದವಾಗಿವೆ ಎಂದು ಹೇಳಿದರು.

ಯಾವ ಜಿಲ್ಲೆಗೆ ಯಾವ ಕೈಗಾರಿಕೆ :
ಯಾದಗಿರಿ >> ಹಿಂದೂಸ್ತಾನ್ ಕೋಕಾಕೋಲಾ ಪೇಯ ಕಂಪನಿ>> 250 ಕೋಟಿ ರು >> ಹಣ್ಣಿನ ರಸ ಘಟಕ.
ಬೆಂಗಳೂರು>> ದೇವನಹಳ್ಳಿ>> ರಾಜೇಶ್ ಎಕ್ಸ್ ಪೋರ್ಟ್ >> 460 ಕೋಟಿ ರು>>ಚಿನ್ನಾಭರಣ ಪಾರ್ಕ್.
ವಿಜಾಪುರ>> ಎಟ್‌ಕೊ ಡೆನಿಮ್ ಕಂಪನಿ>>216ಕೋಟಿ ರು>> ಸಿದ್ಧ ಉಡುಪು ಘಟಕ.
ಮಂಡ್ಯ>> ತುಮಕೂರು>> ಶಿವಮೊಗ್ಗ>> ಗೋಕುಲದಾಸ್ ಇಮೇಜಸ್ >> ಸಿದ್ಧ ಉಡುಪು ಘಟಕ.
ಬೆಂಗಳೂರು>> ದೇವನಹಳ್ಳಿ>>ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್>>93ಕೋಟಿ ರು>>ಇಂಜಿನಿಯರಿಂಗ್ ಕನ್ಸಲ್ಟೆನ್ಸಿ.
ಮೈಸೂರು>> ರೂಯಿಯಾ ಗ್ರೂಪ್‌>>ಫಾಲ್ಕನ್ ಟೈರ್‍ಸ್>>ಡನ್ ಲಪ್ ಟೈರ್ ಟ್ಯೂಬ್ ಘಟಕ.

ಶಿಕ್ಷಣ ಕ್ಷೇತ್ರ:4 ಯೋಜನೆ >> 1,789 ಕೋಟಿ ರು>>4,250 ಉದ್ಯೋಗ ಸೃಷ್ಟಿ
ದೊಡ್ಡಬಳ್ಳಾಪುರ>>ಮಣಿಪಾಲ್ ಸಂಸ್ಥೆ>>650ಕೋಟಿ ರು>>ಬಹು ಶಿಸ್ತಿನ ಶಿಕ್ಷಣ ಕೇಂದ್ರ
ಧಾರವಾಡ ಜಿಲ್ಲೆ>>ಮಾರ್ಗ್ ಸಂಸ್ಥೆ>>960 ಕೋಟಿ ರು>>ಜ್ಞಾನ ಕಣಜ ಕೇಂದ್ರ

ಜಿಲ್ಲಾವಾರು ಪ್ರಮುಖ ಬಂಡವಾಳ ಹೂಡಿಕೆ

ಬೆಂಗಳೂರು ಗ್ರಾ.ಜಿಲ್ಲೆ>>12 ಯೋಜನೆ >>5,479 ಕೋಟಿ ರು.
ಕೊಪ್ಪಳ ಜಿಲ್ಲೆ>>4 ಯೋಜನೆ>>11,320 ಕೋಟಿ ರು.
ಚಿಕ್ಕಬಳ್ಳಾಪುರ>>3 ಯೋಜನೆ>>19,146 ಕೋಟಿ ರು.
ಬಳ್ಳಾರಿ>>7 ಯೋಜನೆ>>3,788 ಕೋಟಿ ರು.
ಚಿತ್ರದುರ್ಗ>>5 ಯೋಜನೆ>>3,472 ಕೋಟಿ ರು.
ಬೆಳಗಾವಿ>>4 ಯೋಜನೆ>> 2,615 ಕೋಟಿ ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X