ಶಿವಮೊಗ್ಗ-ಬೆಂಗಳೂರಿಗೆ ವಿಮಾನ ಸೇವೆ ಪುನರಾರಂಭ: ಚೆನ್ನೈ, ಹೈದರಾಬಾದ್‌ಗೆ ವಿಮಾನ ಹಾರಾಟ ಯಾವಾಗ?

ಬೆಂಗಳೂರು: ಕಾರಣಾಂತರಗಳಿಂದ ರಾಜ್ಯದ ಮಲೆನಾಡು ಮತ್ತು ರಾಜಧಾನಿ ಬೆಂಗಳೂರಿಗೆ ಸ್ಥಗಿತವಾಗಿ ವಿಮಾನ ಸೇವೆಯು ಮತ್ತೆ ಪುನರ್ ಆರಂಭಗೊಳ್ಳಲಿದೆ. ಈ ಮೂಲಕ ದೇಶಿಯ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಬೆಂಗಳೂರು-ಶಿವಮೊಗ್ಗ, ಶಿವಮೊಗ್ಗ-ಬೆಂಗಳೂರು ಮಧ್ಯ ವಿಮಾನಯಾನಕ್ಕೆ ಸ್ಟಾರ್ ಏರ್‍‌ ಸಂಸ್ಥೆ ಉತ್ಸುಕವಾಗಿದೆ. ಇದರೊಂದಿಗೆ ಶಿವಮೊಗ್ಗದಿಂದ ಚೈನ್ನೈ ಮತ್ತು ಹೈದರಾಬಾದ್‌ ಗೆ ವಿಮಾನ ಸೇವೆ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಸಹ ಉಂಟಾಗಿದೆ.

ಮೂರು ತಿಂಗಳ ಹಿಂದಷ್ಟೇ (ಮೇ 1) ಸ್ಥಗಿತಗೊಂಡಿದ್ದ ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯು ಇದೀಗ ಮತ್ತೆ ಆರಂಭವಾಗುತ್ತಿದೆ. ಇಂಡಿಗೋ ಸಂಸ್ಥೆಯಿಂದ ಇದೇ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲಾಗಿತ್ತು. ಆದರೆ ವಿಮಾನಗಳು, ಸಿಬ್ಬಂದಿ ಕೊರತೆ ಕಾರಣಕ್ಕೆ ಮೇ 1ರಿಂದ ಸಂಚಾರ ನಿಂತಿತ್ತು. ಆಗ ಪ್ರಯಾಣಿಕರ ಸಾಕಷ್ಟು ತೊಂದರೆ ಅನುಭವಿಸಿದರು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಶಿವಮೊಗ್ಗ ಏರ್‍‌ಪೋರ್ಟ್‌, ವಿಮಾನ ಕಾರ್ಯಾಚರಣೆ ಕುರಿತು ಕಳವಳ ವ್ಯಕ್ತಪಡಿಸಿದ್ದಲ್ಲದೇ, ವಿಮಾನಯಾನ ಪುನಾರಂಭಕ್ಕೆ ಒತ್ತಾಯಿಸಿದರು.

Shivamogga-Bengaluru Flight

ಇದೀಗ ಸ್ಟಾರ್ ಏರ್ ಸಂಸ್ಥೆಯು ವಿಮಾನಸೇವೆ ಆರಂಭಿಸುವುದಾಗಿ ಘೋಷಿಸಿದೆ. ಇನ್ನೆರಡು ತಿಂಗಳಲ್ಲಿ ಪ್ರಯಾಣಿಕರು ಬೆಂಗಳೂರಿನಿಂದ ಮಲೆನಾಡಿಗೆ ವಿಮಾನದಲ್ಲಿ ತೆರಳಬಹುದಾಗಿದೆ. ಇದರಿಂದ ಶೈಕ್ಷಣಿಕ, ಆರ್ಥಿಕ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ.

ಯಾವತ್ತಿಂದ ವಿಮಾನ ಸೇವೆ ಪುನರಾರಂಭ

ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಮೂಲಸೌಕರ್ಯಾಭಿವೃದ್ಧಿ ನಿಗಮವು ಸತತವಾಗಿ ಪ್ರಯತ್ನ ನಡೆಸಿತ್ತು. ಈ ಮಾರ್ಗದಲ್ಲಿ ಸೇವೆ ಮತ್ತೆ ಆರಂಭಿಸುವುದು ಮಲೆನಾಡಿಗರ ಆಗ್ರಹವು ಆಗಿತ್ತು. ಕೊನೆಗೂ ಸ್ಟಾರ್ ಏರ್ ಸಂಸ್ಥೆ ಇದೇ ಅಕ್ಟೋಬರ್ 15ರಿಂದ ವಿಮಾನ ಹಾರಾಟಕ್ಕೆ ಮುಂದಾಗಿದೆ. ಜೊತೆಗೆ ಇನ್ನಿತರ ಏರ್‍‌ಲೈನ್ಸ್ ಗಳ ಜೊತೆಗೂ ಮಾತುಕತೆ ನಡೆಯುತ್ತಿದೆ. ಬೆಂಗಳೂರು ಮಾತ್ರವಲ್ಲದೇ ಬೇರೆ ಬೇರೆ ಭಾಗಗಳಿಗೂ ವಿಮಾನ ಸೇವೆ ಆರಂಭಿಸುವ ಪ್ರಯತ್ನ ಇದಾಗಿದೆ.

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ಯಾವಾಗ ಸೇವೆ?

ಶಿವಮೊಗ್ಗದಿಂದ ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಿಗೂ ಸೇವೆ ಆರಂಭಿಸಿದ್ದ ಸ್ಪೈಸ್‌ ಜೆಟ್ ಸಂಸ್ಥೆಯು ಕಳೆದ ಜೂನ್ 9ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳನ್ನು ತಿಳಿಸಿ ಸೇವೆ ಕೈ ಬಿಟ್ಟಿತ್ತು. ಶಿವಮೊಗ್ಗ-ಬೆಂಗಳೂರಿಗೆ ಅಕ್ಟೋಬರ್ 15ರಂದು ವಿಮಾನ ಸೇವೆ ಆರಂಭವಾಗುವ ಮುನ್ನವೇ ಸೆಪ್ಟಂಬರ್ ತಿಂಗಳಲ್ಲಿ ಮಲೆನಾಡಿನಿಂದ ಚೆನ್ನ ಮತ್ತು ಹೈದರಾಬಾದ್‌ಗೆ ಸಂಪರ್ಕ ಸೇವೆ ಪುನಾರಂಭಗೊಳ್ಳಲಿದೆ. ಇವುಗಳ ಸಮಯ ವೇಳಾಪಟ್ಟಿ ಮೊದಲಿನಂತಿರಲಿದಯೋ? ಅಥವಾ ಬದಲಾಗಲಿದೆಯೋ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಶೀಘ್ರವೇ ಸೇವೆಯ ವೇಳಾಪಟ್ಟಿ ಸಹ ಪ್ರಕಟವಾಗಲಿದೆ.

ಮೂರು ವರ್ಷದ ಹಿಂದೆ ಸೇವೆ ಆರಂಭ

2023ರ ಆಗಸ್ಟ್ 31 ರಿಂದ ವಿಮಾನ ಸೇವೆ ಮೊದಲ ಬಾರಿಗೆ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಗೆ ಮೂರು ವರ್ಷ ಕಳೆದಿವೆ. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬೆಂಗಳೂರಿಗೆ ಬಂದು ಹೋಗುವವರಿಗೆ ಮತ್ತು ದೇಶದ ಇತರ ಭಾಗಗಳಿಂದ ಬಂದು ಹೋಗುವವರಿಗೆ ಸಹಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+