ಇನ್ಮುಂದೆ ಆಧಾರ್ ಕಾರ್ಡ್‌ನಿಂದ ಸಿಗೋಲ್ಲ ಫ್ರೀ ಬಸ್: ಶೀಘ್ರದಲ್ಲೇ ಸಿಗಲಿದೆ ಸ್ಮಾರ್ಟ್ ಕಾರ್ಡ್

ಬೆಂಗಳೂರು, ಸೆಪ್ಟೆಂಬರ್‌ 15: ರಾಜ್ಯ ಸರ್ಕಾರ ಜಾರಿ ಮಾಡಿದ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಕಾರ್ಯರೂಪಕ್ಕೆ ಬಂದು ಮೂರು ತಿಂಗಳಾದರೂ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭ ಆಗಿಲ್ಲ. ಇನ್ನೂ ಕೂಡ ಆಧಾರ್ ಕಾರ್ಡ್ ಹಿಡಿದೆ ಯೋಜನೆ ಅಡಿ ಸಂಚಾರ ಮಾಡುತ್ತಿದ್ದಾರೆ. ಸದ್ಯ ಈಗ ಮಹಿಳೆಯರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾಗಲಿದೆ.

ಇಷ್ಟು ದಿನ ಶಕ್ತಿ ಯೋಜನೆ ಅಡಿ ಓಡಾಡಬೇಕಾದರೆ ಮಹಿಳೆಯರು ಆಧಾರ್ ಕಾರ್ಡ್, ಐಡಿ ಕಾರ್ಡ್‌ಗಳನ್ನು ತಮ್ಮ ಜೊತೆಯಲ್ಲೇ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆದರೆ ಸದ್ಯದಲ್ಲೇ ನಿಮ್ಮ ದಾಖಲೆಗಳನ್ನು ಹಿಡಿದು ಓಡಾಡುವುದಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ಕೆಲ ದಿನಗಳಲ್ಲಿ ಯೋಜನೆ ಸ್ಮಾರ್ಟ್ ಕಾರ್ಡ್ ಕೂಡ ನಿಮ್ಮ ಕೈ ಸೇರಲಿದೆ.

Shakti scheme: Smart Card Will Be Available Soon

ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿ ಭರವಸೆ ಆರಂಭವಾಗಿ ಇಂದಿಗೆ 92 ದಿನ ಕಳೆದಿದೆ. ಯೋಜನೆ ಆರಂಭಕ್ಕೂ ಮುನ್ನ ಮಹಿಳೆಯರ ಸಂಚಾರಕ್ಕೆ ಸಹಾಯವಾಗುವುದರ ಅಡಿ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಚಿಂತನೆ ನಡೆಸಿತ್ತು. ಜೊತೆಗೆ ಯೋಜನೆ ಶುರುವಾದ ಬಳಿಕ ಸ್ಮಾರ್ಟ್ ಕಾರ್ಡ್ ನೀಡುವ ಪ್ರಕ್ರಿಯೆಗೂ ಸಾರಿಗೆ ಇಲಾಖೆಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಮೂರು ತಿಂಗಳಾದರೂ ಈ ಪ್ರಕ್ರಿಯೆ ಮುಗಿದಿಲ್ಲ.

ಸದ್ಯ ಈಗ ಅಂತಿಮ ಹಂತಕ್ಕೆ ಬಂದಿದ್ದು, ಮುಂದಿನ ಒಂದು ತಿಂಗಳ ಒಳಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಆರಂಭವಾಗುವ ಬಗ್ಗೆ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೊನೆಯ ಹಂತದಲ್ಲಿರುವ ಪ್ರಕ್ರಿಯೆ ಕೆಲ ಟೆಕ್ನಿಕಲ್ ವಿಚಾರವಾಗಿ ಅಂತಿಮಗೊಳ್ಳುತ್ತಿದೆ. ಮುಂದಿನ ಒಂದು ತಿಂಗಳ ಒಳಗೆ ವಿತರಣಾ ಪ್ರಕ್ರಿಯೆ ಕೂಡ ಆರಂಭವಾಗುವ ಸಾಧ್ಯತೆ ಇದೆ.

ಇನ್ನೂ ಸ್ಮಾರ್ಟ್ ಕಾರ್ಡ್ ವಿತರಣೆ ವೇಳೆ ನಕಲಿ ಆಧಾರ್ ಕಾರ್ಡ್ ಬಳಸಿ ಸ್ಮಾರ್ಟ್ ಕಾರ್ಡ್ ಪಡೆಯುವವರ ಮೇಲೆಯೂ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಸ್ಮಾರ್ಟ್ ಕಾರ್ಡ್ ಪಡೆಯ ವೇಳೆ ಕಡ್ಡಾಯವಾಗಿ ಆಧಾರ್ ಕಾರ್ಡ್‌ನ್ನು ನೊಂದಾಯಿಸಲೇಬೇಕಿದೆ. ಬೆಂಗಳೂರು ಒನ್, ಗ್ರಾಮ್ ಒನ್ , ಸೇವಾ ಸಿಂಧೂಗಳ‌ ಮೂಲಕ ಕಾರ್ಡ್ ಪಡೆಯಲು ಅವಕಾಶ ಮಾಡಲಾಗುತ್ತದೆ.

ಆಧಾರ್ ಕಾರ್ಡ್‌ನಲ್ಲಿ ಕೇವಲ ಕರ್ನಾಟಕದೊಳಗಿನ ಅಡ್ರೆಸ್ ಇದ್ದರೆ ಮಾತ್ರ ಸಿಗಲಿದೆ. ಒಂದೊಮ್ಮೆ ನೀವು ಬೇರೆ ರಾಜ್ಯದವರಾಗಿದ್ದು, ಆಧಾರ ಕಾರ್ಡ್ನಲ್ಲಿ ಅಡ್ರೆಸ್ ಬದಲಾಹಿಸಿಕೊಂಡು ಬಂದರೆ ನಿಮಗೆ ಸ್ಮಾರ್ಟ್ ಕಾರ್ಡ್ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ನಕಲಿ ತಡೆಯುವುದು, ಜೊತೆಗೆ ಆಕ್ರಮ ಆದರೆ ಪತ್ತೆ ಹಚ್ಚೋದು ಹೇಗೆ ಎಂಬ ಟೆಕ್ನಿಕಲ್ ವಿಚಾರಗಳ ಬಗ್ಗೆ ಇಲಾಖೆ ಸಂಬಂಧಪಟ್ಟ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಂಡು ವಿತರಣಾ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.

ಒಟ್ಟಾರೆ ಯೋಜನೆ ಆರಂಭದ ದಿನದಿಂದಲೂ ಆಧಾರ್ ಅಥವಾ ಇತರೆ ದಾಖಲೆ ಹಿಡಿದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕೊನೆಗೂ ಸ್ಮಾರ್ಟ್ ಕಾರ್ಡ್ ಹಿಡಿದು ಸಂಚಾರ ಮಾಡುವ ದಿನ ಶೀಘ್ರದಲ್ಲೇ ಹತ್ತಿರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+