• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಬಳಸದ ಇಲಾಖೆಗಳ ಮೇಲೆ ಕ್ರಮಕ್ಕೆ ಸಿದ್ಧರಾಮಯ್ಯ ಶಿಫಾರಸು

|

ಬೆಂಗಳೂರು, ಸೆಪ್ಟೆಂಬರ್ 25: ಸರ್ಕಾರಿ ಕಡತಗಳನ್ನು ಮತ್ತು ಜಾಲತಾಣಗಳನ್ನು ಕನ್ನಡದಲ್ಲಿಯೇ ನಿರ್ವಹಣೆ ಮಾಡಬೇಕು ಎಂಬ ನಿಯಮಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ.

ಜಾಲತಾಣಗಳನ್ನು ಕನ್ನಡದಲ್ಲಿ ನಿರ್ವಹಿಸದ 62 ಸರ್ಕಾರಿ ಕಚೇರಿ ಹಾಗೂ ಇಲಾಖೆಗಳ ಮುಖ್ಯಸ್ಥರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ.

ಸುಲಭವಾಗಿ ಕನ್ನಡ ಕಲಿಯಲು ಬಂತು ವೆಬ್‌ ಸೈಟ್

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಜಾಲತಾಣಗಳ ಕುರಿತು ವರದಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೋರಿತ್ತು. ಈ ವರದಿಯನ್ನು ಆಗಸ್ಟ್‌ನಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು.

ವರದಿ ಪ್ರಕಾರ ಸರ್ಕಾರದ 71 ಇಲಾಖೆಗಳಲ್ಲಿ ಜಾಲತಾಣಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇನ್ನು 32 ಇಲಾಖೆಗಳ ಜಾಲತಾಣಗಳ ಮುಖಪುಟದಲ್ಲಿ ಕನ್ನಡದಲ್ಲಿ ಹೊಂದಿದ್ದರೂ ಕೂಡ ಇತರೆ ಯಾವುದೇ ಮಾಹಿತಿಗಳು ಕನ್ನಡದಲ್ಲಿ ಲಭ್ಯವಿಲ್ಲ. ಇನ್ನು 40 ಇಲಾಖೆಗಳ ಜಾಲತಾಣಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಕೆಯೇ ಮಾಡಲಾಗಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದ್ದಾರೆ.

ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ

ಕನ್ನಡವು ಆಡಳಿತ ಭಾಷೆಯಾಗಿ ಒಪ್ಪಿತವಾದ ಇಷ್ಟು ವರ್ಷಗಳ ನಂತರವೂ ಕಾಲಕಾಲಿಕ ಬದಲಾವಣೆಗಳಿಗೆ ಅನುಗುಣವಾಗಿ ಕನ್ನಡವನ್ನು ಆಡಳಿತ ವ್ಯವಸ್ಥೆಯ ಪ್ರಮುಖ ಭಾಗವನ್ನಾಗಿ ಮಾಡಲು ಸಾಧ್ಯವಾಗದೇ ಇರುವುದು ಇಡೀ ವ್ಯವಸ್ಥೆಯ ವೈಫಲ್ಯ ಎಂದು ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಡಳಿತಯಂತ್ರದ ಮುಖ್ಯಸ್ಥರ ಈ ರೀತಿಯ ಉದಾಸೀನ ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಪಾರದರ್ಶಕ ರೀತಿಯಲ್ಲಿ ತಲುಪಿಸುವ ಮಹತ್ವದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ಇಂತಹ ಆಡಳಿತ ವೈಫಲ್ಯಗಳಿಗೆ ಕಾರಣರಾಗುವ ಅಧಿಕಾರಿಗಳನ್ನು ಶಿಸ್ತುಕ್ರಮಕ್ಕೆ ಗುರಿ ಮಾಡದಿದ್ದಲ್ಲಿ, ಜನರಿಗೆ ಈಗಾಗಲೇ ವ್ಯವಸ್ಥೆಯ ಕುರಿತಂತೆ ಇರುವ ಅಪನಂಬಿಕೆಯನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆ ಕಲಿಕೆ ಕಡ್ಡಾಯ: ಖಾಸಗಿ ಶಾಲೆಗಳಿಗೆ ಖಡಕ್ ಆದೇಶ

ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಅನುಷ್ಠಾನ ಮಾಡಲು ವಿಫಲರಾದ ಅಧಿಕಾರಿಗಳಿಗೆ ವಾಗ್ದಂಡನೆ ವಿಧಿಸುವ ಅವಕಾಶವನ್ನು ಸರ್ಕಾರದ ನಿಯಮಗಳು ಕಲ್ಪಿಸಿವೆ. ಇಂತಹ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳಲ್ಲಿಯೂ ಸಹ ಕರ್ತವ್ಯ ಚ್ಯುತಿ ಬಗ್ಗೆ ದಾಖಲು ಮಾಡುವ ಕುರಿತಂತೆ ನಿಯಮಗಳು ಇರುತ್ತವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಸಿದ್ಧರಾಮಯ್ಯ ನೆನಪಿಸಿದ್ದಾರೆ.

ಇ-ಆಡಳಿತ ಇಲಾಖೆ ಸಲ್ಲಿಸಿದ ವರದಿಯನ್ನು ಕೂಡಲೇ ಪರಿಶೀಲಿಸಿ ಅದರಲ್ಲಿ ಪ್ರಸ್ತಾಪಿಸಿರುವಂತೆ ಇಲಾಖೆ/ಕಚೇರಿ ಮುಖ್ಯಸ್ಥರ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಶಿಸ್ತುಕ್ರಮ ಜಾರಿಮಾಡುವಂತೆ ಅವರು ಕೋರಿದ್ದಾರೆ.

English summary
Kannada Development Authority president Prof. SG Siddaramaiah recommended Chief sectretary pf the state TM Vijayabhaskar to take strict action against the officers who not implemented Kannada in respective departments websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X