Gruhajyoti Scheme: ಮೊದಲ ದಿನವೇ ಕೈಕೊಟ್ಟ ಸರ್ವರ್, ಅರ್ಜಿ ಸಲ್ಲಿಸಲು ಭಾರಿ ಸಮಸ್ಯೆ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ. ಜುಲೈ ತಿಂಗಳಿನಲ್ಲಿ ಬಳಸುವ ವಿದ್ಯುತ್ ಉಚಿತವಾಗಿರಲಿದೆ, ಇದಕ್ಕೆ ಸರ್ಕಾರ ಅನೇಕ ಷರತ್ತುಗಳನ್ನು ವಿಧಿಸಿದೆ. ಮಹತ್ವದ ಯೋಜನೆಯ ಫಲಾನುಭವಿಗಳಾಗಲು ಸರ್ಕಾರ ಅರ್ಜಿ ಸ್ವೀಕರಿಸುತ್ತಿದೆ. ಶನಿವಾರ ಸಂಜೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

ಆದರೆ, ಭಾನುವಾರ ಅರ್ಜಿ ಸಲ್ಲಿಸಲು ನಾಗರಿಕರು ಪರದಾಡುವಂತಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಸದ್ಯ ಸರ್ವರ್ ಬ್ಯುಸಿ ಎಂದು ತೋರಿಸುತ್ತಿದೆ. ಸೇವಾಸಿಂಧು ಸರ್ವರ್ ಕ್ಲೋಸ್ ಆಗಿರುವ ಕಾರಣ ಭಾನುವಾರ ಸಾರ್ವಜನಿಕರು ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.

Server for Gruha Jyoti Scheme Down, Applicants Unable to Apply

ಅರ್ಜಿ ಸಲ್ಲಿಸಲು ಬೆಸ್ಕಾಂ ಕಚೇರಿ, ಗ್ರಾಹಕ ಕೇಂದ್ರಗಳಿಗೆ ತೆರಳಿದ್ದ ಸಾರ್ವಜನಿಕರು ಅರ್ಜಿ ಸಲ್ಲಿಸಲಾಗದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ರಜೆ ಇರುವ ಕಾರಣ ಬಹುತೇಕರು ಇಂದು ಅರ್ಜಿ ಸಲ್ಲಿಸಲು ಯೋಜಿಸಿ, ಹತ್ತಿರದ ಬೆಂಗಳೂರು ಒನ್, ಬೆಸ್ಕಾಂ ಆಫೀಸ್ ಗಳತ್ತ ತೆರಳಿದ್ದರು, ಸರ್ವರ್ ಡೌನ್ ಆದ ಕಾರಣ, ಗೃಹಜ್ಯೋತಿ ವೆಬ್ ಸೈಟ್ ಓಪನ್ ಆಗುತ್ತಿಲ್ಲ, ಭಾನುವಾರ ಮಧ್ಯಾಹ್ನವಾದರೂ ಇದೇ ಸಮಸ್ಯೆಯಾಗಿದ್ದು, ಜನರು ಕಾದು ಕಾದು ಹೈರಾಣಾದರು.

ಅರ್ಜಿ ಸಲ್ಲಿಸುವುದು ಹೇಗೆ?

ಸೇವಾಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. www.sevasindhugs.karnataka.gov.in ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಲಬಹುದು. ನೀವೆ ಸ್ವತಃ ಅರ್ಜಿ ಸಲ್ಲಿಸಲು ಕೂಡ ಅವಕಾಶ ಇದೆ. ಮೊಬೈಲ್, ಲ್ಯಾಪ್‌ಟಾಪ್‌, ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದಲ್ಲಿ, ಎಸ್ಕಾಂ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ನಾಡಕಚೇರಿಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್ ಆರ್ ನಂಬರ್, ಮೊಬೈಲ್ ನಂಬರ್ ನೀಡಬೇಕಾಗುತ್ತದೆ, ಬಾಡಿಗೆ ಮನೆಯವರು ಈ ಯೋಜನೆಯ ಲಾಭ ಪಡೆಯಲು ಮನೆ ಬಾಡಿಗೆ ಅಗ್ರಿಮೆಂಟ್ ಪತ್ರ ನೀಡಬೇಕಾಗುತ್ತದೆ. ಯಾವುದೇ ಅನುಮಾನಗಳಿದ್ದರೂ 1912 ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾತನಾಡಬಹುದಾಗಿದೆ.

ಇನ್ನು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೂ ಯೋಜನೆ ಅನ್ವಯ ಆಗಲಿದ್ದು ಪ್ರತಿ ತಿಂಗಳು 53 ಯುನಿಟ್‌ವರೆಗೆ ಉಚಿತ ವಿದ್ಯುತ್ ಸಿಗಲಿದೆ. 200 ಯುನಿಟ್‌ಗಿಂತ ಜಾಸ್ತಿ ಬಳಸಿದವರು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ, 200 ಯುನಿಟ್‌ಗಿಂದ ಕಡಿಮೆ ವಿದ್ಯುತ್ ಬಳಸಿದರೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಇದಕ್ಕೂ ಸರ್ಕಾರ ಷರತ್ತು ವಿಧಿಸಿದ್ದು, ಕಳೆದ ಒಂದು ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್‌ಗಿಂದ ಶೇಕಡಾ 10 ರಷ್ಟು ಹೆಚ್ಚು ವಿದ್ಯುತ್ ಮಾತ್ರ ಉಚಿತವಾಗಿರಲಿದೆ ಎಂದು ಹೇಳಿದೆ.

ಅರ್ಜಿಯನ್ನು ಸ್ವೀಕರಿಸಲು ಆರಂಭಿಸಿದ್ದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ, ಆದರೆ ಜುಲೈನಿಂದಲೇ ಉಚಿತ ವಿದ್ಯುತ್ ಬೇಕು ಎನ್ನುವವರು ಮಾತ್ರ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಅರ್ಜಿ ಸಲ್ಲಿಸಲು ಆಸಕ್ತಿ ತೋರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+