ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರಿಗೆ ಮಾತ್ರ ಹಿರಿಯ ನಾಗರಿಕರ ಕಾಯ್ದೆ ಅನ್ವಯ- ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಏ.1. ಭಾರತೀಯರಾದರೆ ಮಾತ್ರ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅನ್ವಯವಾಗುತ್ತದೆ, ವಿದೇಶಿ ಪೌರತ್ವ ಹೊಂದಿರುವವರಿಗಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

ಇಂಗ್ಲೆಂಡ್ ಪೌರತ್ವ ಪಡೆದಿದ್ದ ತಾಯಿ ಕರೋಬಿನಾ ಫೆರೆರೋ ಗುರೈನ್ ಎಂಬುವರು ಹಿರಿಯ ನಾಗರಿಕರ ಕಾಯ್ದೆಯಡಿ ಮಂಗಳೂರಿನಲ್ಲಿದ್ದ ತನ್ನ ಮಕ್ಕಳ ವಿರುದ್ಧ ಹೂಡಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ, ಅರ್ಹತೆ ಮತ್ತು ಮಾನದಂಡಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ, ಅರ್ಹತೆ ಮತ್ತು ಮಾನದಂಡ

ಪ್ರಕರಣ ರದ್ದು ಕೋರಿ ಮಗ ಡೆಫ್ನಿ ಗ್ಲೈಡಸ್ ಲೋಬೋ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಪಿ.ಕೃಷ್ಣ ಭಟ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

 Senior citizen Act will apply for Indians only: HC ruled

ಕೋರ್ಟ್ ಆದೇಶವೇನು?

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, "ಹಿರಿಯ ನಾಗರಿಕರ ಕಾಯಿದೆಯನ್ನು ರೂಪಿಸಿರುವುದರ ಮೂಲ ಉದ್ದೇಶ, ಯಾರು ಭಾರತೀಯ ಪ್ರಜೆಗಳಿಗೂ ಅವರಿಗೆ ಅನ್ವಯಿಸಲಿ ಎಂದು. ಆದರೆ, ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಈ ದೇಶದ ಪ್ರಜೆಯಲ್ಲವೆಂಬುದು ಖಾತ್ರಿಯಾಗಿದೆ. ಹಾಗಾಗಿ ಹಿರಿಯ ನಾಗರಿಕರ ಕಾಯಿದೆ ಅವರಿಗೆ ಅನ್ವಯವಾಗುವುದಿಲ್ಲ'' ಎಂದು ಸ್ಪಷ್ಟಪಡಿಸಿದೆ.

"ಪ್ರತಿವಾದಿಯ ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅದರಲ್ಲಿ ಅವರು ಬ್ರಿಟಿಷ್ ಪ್ರಜೆಯಾಗಿದ್ದಾರೆಂಬುದು ದೃಢಪಟ್ಟಿದೆ. ಪೋಸ್‌ಪೋರ್ಟ್ ನಲ್ಲಿ ಆಕೆಯ ಭಾವಚಿತ್ರವೂ ಇದೆ. ಹಾಗಾಗಿ ಭಾರತೀಯ ಸಂವಿಧಾನದಲ್ಲಿ ದ್ವಿಪೌರತ್ವ ಹೊಂದಲು ಅವಕಾಶವಿಲ್ಲ, ಆದ್ದರಿಂದ ದೇಶದಲ್ಲಿ ಜಾರಿಯಲ್ಲಿರುವ ಹಿರಿಯ ನಾಗರಿಕ ಕಾಯ್ದೆ ಅವರಿಗೆ ಅನ್ವಯವಾಗುವುದಿಲ್ಲ'' ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಹಿರಿಯ ನಾಗರಿಕ ಕಲ್ಯಾಣ ಕಾಯಿದೆ 2007 ಸೆಕ್ಷನ್ 2 (ಎಚ್) ರಲ್ಲಿ ವ್ಯಾಖ್ಯಾನಿಸಿರುವಂತೆ 60 ವರ್ಷ ಮೇಲ್ಪಟ್ಟವರು ಮತ್ತು ದೇಶ ವಾಸಿಗಳು ಆ ಕಾಯಿದೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಆದರೆ ಪ್ರತಿವಾದಿ ವಿದೇಶಿ ಪ್ರಜೆಯಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಅವರು ನೀಡಿದ ದೂರಿನ ಮೇರೆಗೆ ಮಂಗಳೂರು ಉಪವಿಭಾಗಾಧಿಕಾರಿ ಕ್ರಮ ಕೈಗೊಂಡಿರುವುದು ಸರಿಯಲ್ಲ. ಹಾಗಾಗಿ ಆದೇಶ ರದ್ದುಗೊಳಿಸಲಾಗುವುದು ಎಂದು ಕೋರ್ಟ್ ಆದೇಶಿಸಿದೆ.

 Senior citizen Act will apply for Indians only: HC ruled

ಏನಿದು ಪ್ರಕರಣ?

ಕರೋಬಿನಾ ಫೆರೆರೋ ಗುರೈನ್ ಎಂಬ ವೃದ್ಧಿಗೆ ಮಂಗಳೂರು ಉಪವಿಭಾಗಾಧಿಕಾರಿಗೆ ದೂರು ನೀಡಿ, ತಮ್ಮ ಮಕ್ಕಳು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು. ಆ ದೂರು ಆಧರಿಸಿ ಉಪವಿಭಾಗಾಧಿಕಾರಿ, ಮಕ್ಕಳಿಗೆ ನೋಟಿಸ್ ನೀಡಿದ್ದರು.

Recommended Video

ಶೂ ಹಾಕಿಕೊಂಡೇ ಕೂತು ಶ್ರೀಗಳಿಗೆ ಅವಮಾನ ಮಾಡಿದ ಗೃಹಸಚಿವ ಅಮಿತ್ ಶಾ | Oneindia Kannada

ಹಾಗಾಗಿ ಪ್ರಕರಣ ರದ್ದು ಕೋರಿ ಮಕ್ಕಳಿಂದ ಹೈಕೋರ್ಟ್ ಮೊರೆ ಹೋಗಿ, ತಾಯಿ ಭಾರತೀಯ ನಾಗರಿಕರಲ್ಲವಾದ್ದರಿಂದ ಕಾಯ್ದೆ ಅನ್ವಯವಿಲ್ಲ. ಹಾಗಾಗಿ ಪ್ರಕರಣ ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

English summary
The High Court order has held that senior citizens' welfare law applies only to Indians, not to Non resident Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X