ದ್ವಿತೀಯ ಪಿಯುಸಿ ಫಲಿತಾಂಶ: 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ಬೆಂಗಳೂರು, ಮೇ 11: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 132 ಕಾಲೇಜುಗಳಿಗೆ ಶೂನ್ಯ ಫಲಿತಾಂಶ ಬಂದಿದೆ. ಕಳೆದ ವರ್ಷ 91 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 41 ಕಾಲೇಜುಗಳು ಸಂಖ್ಯೆ ಹೆಚ್ಚಾಗಿದೆ. ಇನ್ನು ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ ಇಂತಿದೆ.
ಮಾರ್ಚ್ 2017ರಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ[ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]

ಅನುದಾನಿತ ಪದವಿಪೂರ್ವ ಕಾಲೇಜು- 1
ಅನುದಾನರಹಿತ ಪದವಿಪೂರ್ವ ಕಾಲೇಜು- 127
ವಿಭಜಿತ ಪದವಿಪೂರ್ವ ಕಾಲೇಜು-1
ಮಾರ್ಚ್ 2016ರಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ
ಸರಕಾರಿ ಪದವಿಪೂರ್ವ ಕಾಲೇಜು- 1
ಅನುದಾನಿತ ಪದವಿಪೂರ್ವ ಕಾಲೇಜು- 1
ಅನುದಾನರಹಿತ ಪದವಿಪೂರ್ವ ಕಾಲೇಜು- 88
ವಿಭಜಿತ ಪದವಿಪೂರ್ವ ಕಾಲೇಜು-1
ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಅಂದರೆ 2011ರಲ್ಲಿ ಶೇ 48.93ರಷ್ಟು ಫಲಿತಾಂಶ ಬಂದಿತ್ತು. ಆ ನಂತರ ಈ ಬಾರಿ ಬಂದಿರುವುದು (ಶೇ 52.38ರಷ್ಟು) ಅತಿ ಕಡಿಮೆ ಫಲಿತಾಂಶ ಬಂದಿದೆ.












Click it and Unblock the Notifications