Second PUC Exam-2 Result 2024: ದ್ವಿತೀಯ ಪಿಯುಸಿ ಪರೀಕ್ಷೆ- 2 ಫಲಿತಾಂಶ ಪ್ರಕಟ, ಇಲ್ಲಿ ಪರಿಶೀಲಿಸಿ
ಬೆಂಗಳೂರು, ಮೇ. 21: 2 ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 21) ದ್ವಿತೀಯ ಪಿಯುಸಿ 2 ನೇ ಪರೀಕ್ಷೆಯ ಫಲಿತಾಂಶ 2024 ಅನ್ನು ಪ್ರಕಟಿಸಿದೆ. ಏಪ್ರಿಲ್ 29 ಮತ್ತು ಮೇ 16 ರ ನಡುವೆ 2024 ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆದಿತ್ತು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಪಿಯುಸಿ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ - karresults.nic.in ನಿಂದ ಡೌನ್‌ಲೋಡ್ ಮಾಡಬಹುದು. ಈ ವರ್ಷ 2ನೇ ಪಿಯುಸಿ ದ್ವಿತೀಯ ಪರೀಕ್ಷೆಗೆ ಒಟ್ಟು 1,49,824 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಈ ಪೈಕಿ 1,48,942 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 52,505 ಮಂದಿ ಉತ್ತೀರ್ಣರಾಗಿದ್ದಾರೆ. 35.25 ರಷ್ಟು ಉತ್ತೀರ್ಣರಾಗಿದ್ದಾರೆ.

ಒಟ್ಟು 84,632 ಹುಡುಗರು ಮತ್ತು 64,310 ಹುಡುಗಿಯರು ಕರ್ನಾಟಕ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಹುಡುಗರು 26,496 ಶೇಕಡಾ 31.31 ರಷ್ಟು ಉತ್ತೀರ್ಣರಾಗಿದ್ದಾರೆ ಮತ್ತು ಹುಡುಗಿಯರು 35.25% (26,009) ಅಂಕಗಳನ್ನು ಗಳಿಸಿದ್ದಾರೆ.
ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ 2024: ಪರಿಶೀಲಿಸುವುದು ಹೇಗೆ?
ಮೊದಲ ಹಂತ : ಅಧಿಕೃತ ಫಲಿತಾಂಶದ ವೆಬ್‌ಸೈಟ್‌ಗೆ ಹೋಗಿ - karresults.nic.in
ಎರಡನೇ ಹಂತ : ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ
ಮೂರನೇ ಹಂತ: ನೋಂದಣಿ ಸಂಖ್ಯೆ ಮತ್ತು ಇತರ ಮಾಹಿತಿ ದಾಖಲಿಸಿ
ನಾಲ್ಕನೇ ಹಂತ: ಪಿಯುಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ
ಫಲಿತಾಂಶ ತೃಪ್ತಿ ತರದ ವಿದ್ಯಾರ್ಥಿಗಳು ಏನು ಮಾಡುವುದು?
ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು, ಪಿಯುಸಿ ವಿದ್ಯಾರ್ಥಿಗಳು ಮೇ 21 ರಿಂದ 23 ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಮತ್ತು ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಶುಲ್ಕವಿದೆ.

ಈ ವರ್ಷ, ಮೊದಲ ಪರೀಕ್ಷೆಯಲ್ಲಿ, ಎ ವಿದ್ಯಾಲಕ್ಷ್ಮಿ ಅವರು 2024 ರ ದ್ವಿತೀಯ ಪಿಯು ಕರ್ನಾಟಕ ಬೋರ್ಡ್ ಪರೀಕ್ಷೆಯಲ್ಲಿ 598 ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜ್ಞಾನವಿ ಎಂ 597 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರೈತರ ಮಗಳಾದ ಮೇಧಾ ಡಿ 596 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.












Click it and Unblock the Notifications