ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ; ಮಕ್ಕಳಲ್ಲಿ ಹೆಚ್ಚು ಪ್ರಕರಣ

ಬೆಂಗಳೂರು, ಮಾರ್ಚ್ 28: ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಆರಂಭವಾಗಿದೆ. ಸರ್ಕಾರ ಸೋಂಕು ಹಡುವಿಕೆ ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರದ ಮಾಹಿತಿ ಅನ್ವಯ ಮಕ್ಕಳಲ್ಲಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಹೊಸ ಕೋವಿಡ್ ಪ್ರಕರಣಗಳಲ್ಲಿ 1 ರಿಂದ 10ನೇ ವರ್ಷದ ಮಕ್ಕಳಲ್ಲಿ ಸೋಂಕು ಕಂಡು ಬರುತ್ತಿದೆ. ಮಾರ್ಚ್ 14 ರಿಂದ 21ರ ತನಕ ಬೆಂಗಳೂರು ನಗರದಲ್ಲಿ 160 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕ್ರಮವಾಗಿ 33 ಮತ್ತು 32 ಪ್ರಕರಣ ಪತ್ತೆಯಾಗಿದೆ. ರಾಜ್ಯ ಕೋವಿಡ್ ವಾರ್ ರೂಂ ಮಾಹಿತಿ ಪ್ರಕಾರ ಎರಡು ವಾರದಲ್ಲಿ 267 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

Second Covid 19 Wave More Children Hit In Karnataka

ಕಳೆದ ವರ್ಷದ ಜೂನ್‌ನಲ್ಲಿ ಈಗ ಪತ್ತೆಯಾದ ಸಂಖ್ಯೆಯಷ್ಟು ಪ್ರಕರಣ ದಾಖಲಾಗುತ್ತಿತ್ತು. ಆಗ ಕೇವಲ 16 ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. ಕೋವಿಡ್ ಸೋಂಕಿತರ ವರ್ತನೆಯಿಂದಾಗಿ ಈಗ ಸೋಂಕು ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿಸಿಎಸ್‌ಯು ಸದಸ್ಯರಾದ ಡಾ. ಅನೂಪ್ ಅಮರನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. "2020ರಲ್ಲಿ ಹಲವು ಮಕ್ಕಳು ಪೋಷರು, ಸಂಬಂಧಿಕರಿಂದ ಸೋಂಕಿಗೆ ಒಳಗಾಗಿದ್ದರು. ಈಗಲೂ ಅದೇ ಮಾದರಿ ಕಂಡು ಬರುತ್ತಿದೆ" ಎಂದು ಹೇಳಿದ್ದಾರೆ.

ಈಗ ವೃದ್ಧರಿಂದ ಹಿಡಿದು ಮಕ್ಕಳ ತನ ಪೂರ್ಣ ಕುಟುಂಬಕ್ಕೆ ಸೋಂಕು ತಗುಲುತ್ತಿದೆ. "ಈಗ ಸೋಂಕು ತಗುಲಿದರೂ ಕುಟುಂಬದವರು ಸರಿಯಾಗಿ ಐಸೋಲೇಷನ್ ಆಗುತ್ತಿಲ್ಲ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಶನಿವಾರ 2,886 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,252. ಬೆಂಗಳೂರು ನಗರದಲ್ಲಿ 1820 ಹೊಸ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+