ಮತಗಟ್ಟೆ ಅಧಿಕಾರಿ ಹುದ್ದೆಗೆ ಶಿಕ್ಷಕರ ನಿಯೋಜನೆ; ಆಯೋಗದ ಸ್ಪಷ್ಟನೆ

ಬೆಂಗಳೂರು, ಆಗಸ್ಟ್ 04; ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್ಒ) ಹಾಗೂ ಬೋಧನೇತರ ಕಾರ್ಯಗಳಿಗೆ ನಿಯೋಜನೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಈಗ ರಾಜ್ಯ ಚುನಾವಣಾ ಆಯೋಗ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ.

ಯೋಗೇಶ್ವರ ಎಸ್‌. ಜಂಟಿ ಮುಖ್ಯ ಚುನಾವಣಾಧಿಕಾರಿ ಸಿಆಸುಇ (ಚುನಾವಣೆಗಳು) ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶ ಮತಗಟ್ಟೆ ಅಧಿಕಾರಿಗಳ ಹುದ್ದೆಗೆ ಶಿಕ್ಷಕರನ್ನು ನಿಯೋಜನೆ ಮಾಡುವುದು ಎಂಬ ವಿಷಯ ಒಳಗೊಂಡಿದೆ. ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಕೈಪಿಡಿ ಅಕ್ಟೋಬರ್ 2016. ಭಾರತ ಚುನಾವಣಾ ಆಯೋಗದ ಮತಗಟ್ಟೆ ಅಧಿಕಾರಿಗಳ ಕೈಪಿಡಿ 2011 ಉಲ್ಲೇಖ ಮಾಡಲಾಗಿದೆ.

school-teacher (1)

ಚುನಾವಣಾ ಕಾರ್ಯಗಳಿಗೆ ಭಾರತ ಚುನಾವಣಾ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಕೈಪಿಡಿ, ಅಕ್ಟೋಬರ್ 2016ರ ಅಧ್ಯಾಯ 5ರ ಪ್ಯಾರಾ 5.2 ರಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ನಿಯೋಜನೆಗೆ 13 ವಿವಿಧ ಹುದ್ದೆಗಳ ವಿವರ ನೀಡಲಾಗಿರುತ್ತದೆ ಎಂದು ಹೇಳಿದೆ. ಅದರಲ್ಲಿ ಶಿಕ್ಷಕರ ಹುದ್ದೆಯೂ ಒಂದಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯದ ಅಪೀಲ್ (ಸಿವಿಲ್) 5659/ 2007 ರಲ್ಲಿ ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ ಆದೇಶದಲ್ಲಿ ಈ ಕೆಳಕಂಡಂತೆ ಉಲ್ಲೇಖಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

We would, however notice that the Election Commission before us also categorically stated that as far as possible teachers would be put on electoral roll revision works on holidays, non-teaching days and non-teaching hours- whereas non teaching staff be put on duty any time. We therefore, direct that all teaching staff shall be put on the duties of electoral rolls revision and election works on holidays and non-teaching days. Teachers should not ordinarily be put on duty on teaching days and within teaching hours. Non- teaching staff, however, may be put on such duties on any days, any time, if permissible in law.

ಸ್ಪಷ್ಟನೆಗಳು; ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಾಗ ಯಾವುದೇ ಶಾಲೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಎಲ್ಲಾ ಶಿಕ್ಷಕರನ್ನು ನಿಯೋಜಿಸಬಾರದು. ಶಿಕ್ಷಕರನ್ನು ನಿಯೋಜಿಸುವಾಗ ರಜಾ ದಿನಗಳಲ್ಲಿ ಹಾಗೂ ಬೋಧನಾ ಸಮಯವನ್ನು ಹೊರತುಪಡಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು. Terminal illness ಹೊಂದಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು. ಮುಂದಿನ 6 ತಿಂಗಳ ಅವಧಿಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಹೇಳಿದ್ದಾರೆ.

ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಾಗ ಮೇಲ್ಕಂಡ ಅಂಶಗಳನ್ನು ಹಾಗೂ ಕಾಲಕ್ಕೆ ನೀಡುವ ಭಾರತ ಚುನಾವಣಾ ಆಯೋಗದ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್ಒ) ಹಾಗೂ ಬೋಧನೇತರ ಕಾರ್ಯಗಳಿಗೆ ನಿಯೋಜನೆ ಮಾಡದಿರುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಪತ್ರವನ್ನು ಬರೆದಿದ್ದರು.

ಶಿಕ್ಷಕರನ್ನು ಜನಗಣತಿ, ಚುನಾವಣಾ ಕಾರ್ಯ, ಮಕ್ಕಳಗಣತಿ ಇವುಗಳಲ್ಲಿ ತೊಡಗಿಸಿಕೊಳ್ಳುವುದರ ಪರಿಣಾಮವಾಗಿ ಕನಿಷ್ಟ 244 ಶಾಲಾ ಕರ್ತವ್ಯದದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಂಕನ ಕಾರ್ಯಕ್ಕಾಗಿ/ ಪಠ್ಯೇತರ ಚಟುವಟಿಕೆಗಳ/ ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣಾಕಾರ್ಯ/ ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣಾ ಕಾರ್ಯಕ್ಕಾಗಿ ಮತ್ತು ಶಾಲಾ ಸೃಷ್ಟಿಯ ರಜೆಗಳು ಒಟ್ಟಾರ 64 ದಿನಗಳು ಶಿಕ್ಷಕರುಗಳ ಸೇವೆಯನ್ನು ಮೇಲ್ಕಂಡ ಕಾರ್ಯಕ್ಕೆ ತೂಡಗಿಸಿ ಕೂಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಬೋಧನಾ-ಕಲಿಕಾ ಪ್ರಕ್ರಿಯ ಕುಂಠಿತವಾಗುತ್ತಿದೆ ಎಂದು ಉಲ್ಲೇಖಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+