School Holiday: ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪದೇ ಪದೇ ರಜೆ ಘೋಷಣೆ ಮಾಡಲಾಗುತ್ತಿದೆ. ಶಾಲಾ & ಕಾಲೇಜುಗಳಿಗೆ ರಜೆ ನೀಡಲು ಡಿಸೈನ್, ಡಿಸೈನ್ ಕಾರಣಗಳು ಈಗ ಸೃಷ್ಟಿಯಾಗುತ್ತಿವೆ. ಹೀಗೆ ರಜೆ ಸಿಗುತ್ತೆ ಅಂದ್ರೆ ವಿದ್ಯಾರ್ಥಿಗಳಿಗೂ ಖುಷಿ ಆಗೇ ಆಗುತ್ತೆ ಅಲ್ವಾ? ಅದೇ ರೀತಿ ಮತ್ತಷ್ಟು ರಜೆ ಸಿಗಲಿ ಅಂತಾನೇ ಬಯಸುವ ವಿದ್ಯಾರ್ಥಿಗಳು ಕೂಡ ಇದ್ದಾರೆ. ಹೀಗಿದ್ದಾಗಲೇ, ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ನಿಮಗೆಲ್ಲಾ ಗೊತ್ತಿರುವಂತೆ ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ ಸುಮಾರು 60 ದಿನ ಅಂದ್ರೆ 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗುತ್ತದೆ. ಪ್ರತಿವರ್ಷ ಕೂಡ ಹೀಗೆ ಬೇಸಿಗೆ ರಜೆ ಘೋಷಣೆ ಮಾಡುವುದು ರೂಢಿ, ಅದೇ ರೀತಿ ಈ ವರ್ಷ ಕೂಡ ಬೇಸಿಗೆ ರಜೆ ಎಂಜಾಯ್ ಮಾಡಿ ಬಂದಿರುವ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಬಂಪರ್ ರಜೆ ಸಿಗುತ್ತಿದೆ. 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲೆ & ಕಾಲೇಜುಗಳಿಗೆ ವಾಪಸ್ ಆಗಿದ್ದ ವಿದ್ಯಾರ್ಥಿಗಳಿಗೆ ಇದೀಗ ಮತ್ತೆ ಸಾಲು ಸಾಲು ರಜೆ ನೀಡಲಾಗುತ್ತಿದೆ!

School Holiday May Announce In Karnataka On July 25 Of 2025 For This Reason

ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?

ಹೌದು, ಶಾಲೆ & ಕಾಲೇಜುಗಳು ಈಗ ತಾನೇ ಶುರುವಾಗಿವೆ... ಆದರೆ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವುದು ಒಂದು ಕಡೆ ಮಕ್ಕಳಿಗೆ ಅಂದ್ರೆ ವಿದ್ಯಾರ್ಥಿಗಳಿಗೆ ಖುಷಿ ನೀಡುತ್ತಿದೆ. ಆದರೆ, ಹೀಗೆಲ್ಲಾ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವುದು ವಿದ್ಯಾರ್ಥಿಗಳ ಶಿಕ್ಷಕರು ಹಾಗೂ ಪೋಷಕರಿಗೆ ಭಾರಿ ಟೆನ್ಷನ್ ಕೊಡುತ್ತಿದೆ. ಅದರಲ್ಲೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ, ಭರ್ಜರಿ ರಜೆಯೇ ಸಿಗುತ್ತಿದೆ. ಹೀಗಿದ್ದಾಗಲೇ, ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಮಳೆ.. ಮಳೆ.. ಮಳೆ.. ಕರ್ನಾಟಕದ ಮೂಲೆ ಮೂಲೆಯಲ್ಲೂ ಈಗ ಮಳೆಯ ಅಬ್ಬರ ಜೋರಾಗುತ್ತಿದೆ. ಮಳೆ ಅಬ್ಬರದಿಂದ ಸುರಿಯುತ್ತಿದ್ದರೆ ಇನ್ನೊಂದು ಕಡೆ ಕರ್ನಾಟಕದ ರೈತರು ಚಿಂತೆ ಮಾಡುವಂತೆ ಆಗಿದೆ, ಯಾಕೆ ಅಂದ್ರೆ ಈಗಾಗಲೇ ಬಿದ್ದಿರುವ ಮಳೆ ಸಾಕು ಸಾಕಪ್ಪಾ ಅಂತಾ ಕನ್ನಡಿಗರು ಹೇಳುತ್ತಿದ್ದಾರೆ. ಆದರೆ ಈ ಬಾರಿ ವರುಣ ದೇವನಿಗೆ ಕನ್ನಡಿಗರ ಮೇಲೆ ಜಾಸ್ತಿ ಪ್ರೀತಿ ಬಂದ ರೀತಿ ಕಾಣುತ್ತಿದೆ. ಇದೇ ಕಾರಣಕ್ಕಾಗಿ ಭರ್ಜರಿ ಮಳೆ ಸುರಿಯುತ್ತಿದ್ದು, ಎಲ್ಲೆಲ್ಲೂ ಮಳೆಯ ಹವಾ ಜೋರಾಗಿದೆ. ಇದೇ ಕಾರಣಕ್ಕೆ ಕಟ್ಟೆಚ್ಚರವನ್ನ ಕೂಡ ವಹಿಸಲಾಗಿದ್ದು, ಮತ್ತೆ ಕೆಲವು ದಿನಗಳ ಕಾಲ ಮುನ್ನೆಚ್ಚರಿಕೆ ನೀಡಲಾಗಿದೆ.

ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ?

ಭಾರಿ ಮಳೆ ಕಾರಣಕ್ಕೆ ಇದೀಗ ಉಡುಪಿ & ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಹಲವು ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಿದೆ. ಅದೇ ರೀತಿ ಜುಲೈ 25 ಶುಕ್ರವಾರ ಕೂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ... ಆದರೆ, ಇನ್ನೂ ರಜೆ ಘೋಷಣೆ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿಲ್ಲ, ಹೀಗಾಗಿ ಯಾವ ಯಾವ ಜಿಲ್ಲೆಗಳಲ್ಲಿ ಜುಲೈ 25 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತೆ? ಅನ್ನೋದನ್ನ ಜುಲೈ 24 ಗುರುವಾರ ಸಂಜೆ ತನಕ ಕಾದು ನೋಡಬೇಕಿದೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+