ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ
ನವದೆಹಲಿ, ನವೆಂಬರ್ 06 : ಕರ್ನಾಟಕದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ತಡೆ ನೀಡಬೇಕೆಂದು ಪ್ರಾಣಿದಯಾಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
People for the Ethical Treatment of Animals (ಪೆಟಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಮಹತ್ವದ ತೀರ್ಪು ನೀಡಿದೆ. ಕರ್ನಾಟಕದ ಅವಿಭಜಿತ ಕನ್ನಡ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಿನಿಂದ ಮಾರ್ಚ್ ಅವಧಿಯಲ್ಲಿ ಸಾಂಪ್ರದಾಯಿಕ ಕ್ರೀಡೆ ಕಂಬಳ ಆಯೋಜಿಸಲಾಗುತ್ತದೆ.

ಕಂಬಳದ ವೇಳೆ ಓಡುವ ಕೋಣಗಳು 140 ರಿಂದ 160 ಮೀಟರ್ ದೂರವನ್ನು 12 ರಿಂದ 13 ಸೆಕೆಂಡುಗಳಲ್ಲಿ ಕ್ರಮಿಸಲಿವೆ. 2014ರಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳಕ್ಕೆ ಮತ್ತೆ ರಾಜ್ಯ ಸರ್ಕಾರದ ಮಸೂದೆಯ ಬೆಂಬಲ ಸಿಕ್ಕಿದ್ದರಿಂದ ಈ ವರ್ಷ ಕಂಬಳ ಮತ್ತೆ ಆರಂಭವಾಗಿದೆ.












Click it and Unblock the Notifications