Sankranti Holidays: ಸಂಕ್ರಾಂತಿ ಹಬ್ಬಕ್ಕೆ ಸಾಲು ಸಾಲು ರಜೆ: ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ KSRTC- ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 13: ವರ್ಷದ ಮೊದಲ ಹಬ್ಬ ಅಂದ್ರೆ ಅದು ಸಂಕ್ರಾಂತಿ. ಮಕರ ಸಂಕ್ರಾಂತಿ ಹಿನ್ನೆಲೆ ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್ ಗಳಿಗೆ ದೊಡ್ಡ ಹಬ್ಬವೂ ಹಬ್ಬ. ಬೆಂಗಳೂರಿನಿಂದ ದೂರದ ಊರಿಗಳಿಗೆ ಹೋಗುವ ಪ್ರಮಾಣಿಕರ ಬಳಿ ಸುಲಿಗೆ ಮಾಡಲು ಖಾಸಗಿ ಬಸ್ ಮಾಲೀಕರಿಂದ ಎರಡ್ಮೂರು ಪಟ್ಟು ದರ ಏರಿಕೆ ಮಾಡಿ ಸುಲಿಗೆ ಮಾಡುತ್ತಾರೆ.
ಈ ಖಾಸಗಿ ಬಸ್ ಮಾಲೀಕರ ಸುಲಿಗೆಯಿಂದ ಕಳೆದ ವರ್ಷ ಹಬ್ಬದ ವೇಳೆ ಬ್ಯಾಕ್ ಟೂ ಬ್ಯಾಕ್ ರಜೆ ವೇಳೆ ಜನರಿಂದ ದರೋಡೆ ಮಾಡಿದ ಖಾಸಗಿ ಬಸ್ ಮಾಲೀಕರು ಈ ವರ್ಷದ ಮೊದಲ ಹಬ್ಬಕ್ಕೆ ಮತ್ತದೆ ಚಾಳಿ ಮುಂದುವರೆಸಿದ್ದಾರೆ. ಹೀಗಾಗಿ ಖಾಸಗಿ ಬಸ್ ದುಪ್ಪಟ್ಟು ದರಕ್ಕೆ ಬ್ರೇಕ್ ಹಾಕಲು ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚುವರಿಯಾಗಿ 400 ಬಸ್ಗಳ ವ್ಯವಸ್ಥೆ ಮಾಡಲಾಗಿದೆ.

ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರಿನಿಂದ ಊರುಗಳಿಗೆ ತೆರಳುತ್ತಿರುವ ಜನ ಹೆಚ್ಚಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ಗಾಗಿ ನೂರಾರು ಜನ ಕಾಯುತ್ತಿದ್ದಾರೆ. ಸದ್ಯ ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚುವರಿಯಾಗಿ 400 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಶಿವಮೊಗ್ಗ, ಬೆಂಗಳೂರು, ಉಡುಪಿ, ಬಳ್ಳಾರಿ, ಬೆಳಗಾವಿ ಕಡೆಗೆ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ.
ಹೊಸ ವರ್ಷದ ಮೊದಲ ಹಬ್ಬಕ್ಕೆ ರಜೆಯಿದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ಕಡೆ ದರ ಏರಿಕೆ ಶಾಕ್ ಎದುರಾಗಿದೆ. ಈ ವರ್ಷದ ಮೊದಲ ಹಬ್ಬ ಸಂಕ್ರಾತಿ 15 ರಂದು ಇದೆ. ಜ.13ನೇ ತಾರೀಕು ಎರಡನೇ ಶನಿವಾರದ ಹಿನ್ನೆಲೆ ರಜೆಯಿದೆ. 14 ಭಾನುವಾರ ಹೀಗಾಗಿ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದೆ. ಜನರು ರಜೆ ಅಂತ ತಮ್ಮ ತಮ್ಮ ಊರುಗಳತ್ತ ತೆರಳಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಮಾಡ್ತಿದ್ದಾರೆ. ಆದರೆ ತಮ್ಮ ಊರುಗಳತ್ತ ಹೊರಟಿರುವ ಜನರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ದರ ಮೂರು ಕಟ್ಟು ಹೆಚ್ಚಾಗಿದ್ದು, ಜನರಿಗೆ ಶಾಕ್ ಕೊಟ್ಟಂತಾಗಿದೆ.
ಖಾಸಗಿ ಬಸ್ ದರ ಹೀಗಿದೆ
ಬೆಂಗಳೂರು-ಶಿವಮೊಗ್ಗ: ಸಾಮಾನ್ಯ ದಿನಗಳಲ್ಲಿ ದರ ₹450-₹600, ಇವತ್ತಿನ ದರ ₹1200-₹1600
ಬೆಂಗಳೂರು- ಹುಬ್ಬಳಿ: ಸಾಮಾನ್ಯ ದಿನಗಳಲ್ಲಿ ದರ ₹600- ₹1000, ಇವತ್ತಿನ ದರ ₹1700-₹2500
ಬೆಂಗಳೂರು-ಮಂಗಳೂರು: ಸಾಮಾನ್ಯ ದಿನಗಳಲ್ಲಿ ದರ ₹500- ₹1000, ಇವತ್ತಿನ ದರ ₹1300-₹1700
ಬೆಂಗಳೂರು-ಕಲಬುರುಗಿ: ಸಾಮಾನ್ಯ ದಿನಗಳಲ್ಲಿ ದರ ₹900- ₹1500, ಇವತ್ತಿನ ದರ ₹1600-₹2200
ಬೆಂಗಳೂರು-ಮಡಿಕೇರಿ: ಸಾಮಾನ್ಯ ದಿನಗಳಲ್ಲಿ ದರ ₹500- ₹600, ಇವತ್ತಿನ ದರ ₹1150-₹1600
ಬೆಂಗಳೂರು-ಧಾರವಾಡ: ಸಾಮಾನ್ಯ ದಿನಗಳಲ್ಲಿ ದರ ₹650 ₹800, ಇವತ್ತಿನ ದರ ₹1200-₹1550
ಬೆಂಗಳೂರು-ಬೆಳಗಾವಿ: ಸಾಮಾನ್ಯ ದಿನಗಳಲ್ಲಿ ದರ ₹500 ₹800, ಇವತ್ತಿನ ದರ ₹1300-₹1800
ಬೆಂಗಳೂರು - ಚಿಕ್ಕಮಗಳೂರು: ಸಾಮಾನ್ಯ ದಿನಗಳಲ್ಲಿ ದರ ₹550 ₹600, ಇವತ್ತಿನ ದರ ₹1100-₹1300












Click it and Unblock the Notifications