ಸಾಯಿ ಪ್ರೇಮ ಫೌಂಡೇಶನ್ ಟ್ರಸ್ಟಿಗಳಿಗೆ ಫಿಜಿ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ

ಸುವಾ (ಫಿಜಿ): ಫಿಜಿ ದೇಶದಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಸಾಯಿ ಪ್ರೇಮ ಫೌಂಡೇಶನ್ ಟ್ರಸ್ಟಿಗಳಿಗೆ ಅಲ್ಲಿನ ಸರ್ಕಾರ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ಫಿಜಿ ಅಧ್ಯಕ್ಷ ರಟು ನಖಿಮಾ ಲಾಲಬಲವು ಅವರು ಸಾಯಿ ಪ್ರೇಮ ಫೌಂಡೇಶನ್ ಟ್ರಸ್ಟಿಗಳಾದ ಮಹೇಂದ್ರ ಟಪ್ಪೂ, ಮಾಯಾ ಟಪ್ಪೂ, ರಾಜೇಂದ್ರ ಕುಮಾರ್ ಮತ್ತು ಕಮ್ಲೇಶ್ ಟಪ್ಪೂ ಹಾಗೂ ಬೆಂಗಳೂರಿನ ಫಿಜಿಯೋಥೆರಪಿಸ್ಟ್ ಸಾಯಿಶ್ರೀ ರಂಜನಿ ಭಟ್ಲಪೇನುಮರ್ಥಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸ್ಟೇಟ್ ಹೌಸ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಜಾಗತಿಕ ಮಾನವೀಯ ಸೇವಾ ಕಾರ್ಯಗಳನ್ನೂ ಅವರು ಶ್ಲಾಘಿಸಿದರು.

Sai Prema Foundation

(ಫಿಜಿ ಅಧ್ಯಕ್ಷ ರಟು ನಖಿಮಾ ಲಾಲಬಲವು ಅವರ ಅಧ್ಯಕ್ಷತೆಯಲ್ಲಿ ನಡೆದ ಗೌರವ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ, ಸಾಯಿ ಪ್ರೇಮ ಫೌಂಡೇಶನ್ ಫಿಜಿ ಟ್ರಸ್ಟಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.)

'ಆರ್ಡರ್ ಆಫ್ ಫಿಜಿ' ಅಡಿಯಲ್ಲಿ ನಡೆದ ಈ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಗ್ಲೋಬಲ್ ಹ್ಯೂಮ್ಯಾನಿಟೇರಿಯನ್ ಮಿಷನ್' ಸದಸ್ಯರು ಉಪಸ್ಥಿತರಿದ್ದರು. ಇದೇ ಮಿಷನ್ ಫಿಜಿಯಲ್ಲಿ 'ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಆಸ್ಪತ್ರೆ'ಯನ್ನು ಸ್ಥಾಪಿಸಿದೆ.

ಶ್ರೀ ಮಧುಸೂದನ ಸಾಯಿ ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಿಂದಲೇ ಈ ಆಸ್ಪತ್ರೆ ಸ್ಥಾಪನೆಯಾಗಿದೆ ಎಂದು ಫಿಜಿ ಅಧ್ಯಕ್ಷ ಹೇಳಿದರು. ಹೃದಯ ಚಿಕಿತ್ಸೆಗೆ ಅಗತ್ಯವಿರುವ ಮಕ್ಕಳಿಗೆ ಸಂಪೂರ್ಣ ಉಚಿತ ಸೇವೆ ನೀಡುತ್ತಿರುವ ಈ ಆಸ್ಪತ್ರೆ, ಫಿಜಿಯ ಜನತೆಗೆ ತುಂಬಾ ಅತ್ಯಾವಶ್ಯಕವಾಗಿದ್ದು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪೌಷ್ಠಿಕತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುತ್ತಿರುವ ಈ ಮಿಷನ್ ಕಾರ್ಯ ಶ್ಲಾಘನೀಯವೆಂದು ಅವರು ಹೇಳಿದರು. 2025ರ ಗ್ಲೋಬಲ್ ಕಲ್ಚರಲ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದುದನ್ನೂ, ಕರ್ನಾಟಕದ ಮುದ್ದೇನಹಳ್ಳಿಯಲ್ಲಿರುವ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನುಭವವನ್ನೂ ಅವರು ಸ್ಮರಿಸಿದರು. ಫಿಜಿ ಹಾಗೂ ಪೆಸಿಫಿಕ್ ಪ್ರದೇಶದಲ್ಲಿ ಇಂತಹ ಸೇವೆಗಳನ್ನು ವಿಸ್ತರಿಸಲು ತಮ್ಮ ಬೆಂಬಲ ಮುಂದುವರಿಯಲಿದೆ ಎಂದರು.

ಪ್ರಶಸ್ತಿ ಪುರಸ್ಕೃತರು:

ಸಾಯಿ ಪ್ರೇಮ ಫೌಂಡೇಶನ್ ಅಧ್ಯಕ್ಷ ಹಾಗೂ ಸ್ಥಾಪಕ ಟ್ರಸ್ಟಿ ಮಹೇಂದ್ರ ಟಪ್ಪೂ ಮತ್ತು ಮಾಯಾ ಟಪ್ಪೂ ಅವರಿಗೆ ಫಿಜಿಯ ಅತ್ಯುನ್ನತ ನಾಗರಿಕ ಗೌರವವಾದ 'ಕಂಪ್ಯಾನಿಯನ್ ಆಫ್ ದ ಆರ್ಡರ್ ಆಫ್ ಫಿಜಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹೇಂದ್ರ ಟಪ್ಪೂ ಅವರ ನೇತೃತ್ವದಲ್ಲಿ 2022ರಲ್ಲಿ 'ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಆಸ್ಪತ್ರೆ' ಸ್ಥಾಪನೆಯಾಗಿದ್ದು, ಇದರಿಂದ ಹಿಂದುಳಿದ ವರ್ಗಗಳಿಗೆ ವಿವಿಧ ಸೇವಾ ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಮಾಯಾ ಟಪ್ಪೂ ಅವರು ಆರೋಗ್ಯ, ಪೌಷ್ಠಿಕತೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ದೀರ್ಘಕಾಲದ ಕೊಡುಗೆಗಾಗಿ ಈ ಗೌರವಕ್ಕೆ ಪಾತ್ರರಾರದು.

ರಾಜೇಂದ್ರ ಕುಮಾರ್ ಮತ್ತು ಕಮ್ಲೇಶ್ ಟಪ್ಪೂ ಅವರಿಗೆ 'ಆಫೀಸರ್ ಆಫ್ ದ ಆರ್ಡರ್ ಆಫ್ ಫಿಜಿ' ಪ್ರಶಸ್ತಿ ನೀಡಲಾಯಿತು. ಅಲ್ಲದೇ, ಬೆಂಗಳೂರಿನ ಫಿಜಿಯೋಥೆರಪಿಸ್ಟ್ ಸಾಯಿಶ್ರೀ ರಂಜನಿ ಭಟ್ಲಪೇನುಮರ್ಥಿ ಅವರಿಗೆ 'ಹಾನರರಿ ಮೆಡಲ್ ಆಫ್ ದ ಆರ್ಡರ್ ಆಫ್ ಫಿಜಿ' ನೀಡಿ ಸನ್ಮಾನಿಸಲಾಯಿತು.

ದೇಶದ ಎಲ್ಲಾ ನಾಗರಿಕರ, ವಿಶೇಷವಾಗಿ ದುರ್ಬಲ ವರ್ಗಗಳ ಕಲ್ಯಾಣವೇ ನಮ್ಮೆಲ್ಲರ ಆದ್ಯತೆ ಎಂದು ಫಿಜಿ ಅಧ್ಯಕ್ಷರು ತಿಳಿಸಿದರು. ಅಗತ್ಯ ಸೇವೆಗಳ ವಿಸ್ತರಣೆಗೆ ಸರ್ಕಾರ ಮತ್ತು ಸೇವಾ ಸಂಸ್ಥೆಗಳ ನಡುವೆ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

ಈ ಸಮಾರಂಭವು ವೈಯಕ್ತಿಕ ಸಾಧನೆಗಳನ್ನು ಗುರುತಿಸುವುದರ ಜೊತೆಗೆ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಜಾಗತಿಕ ಸೇವಾ ಮಿಷನ್‌ನ ಕಾರ್ಯಗಳ ಪ್ರಭಾವವನ್ನು ಶ್ಲಾಘಿಸಲಾಯಿತು. ಜಗತ್ತಿನ ಹಿಂದುಳಿದವರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಈ ಮಿಷನ್ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+