ಚುನಾವಣೆಗೆ ಕೌಂಟ್ ಡೌನ್; ಸ್ಲಂಗಳಲ್ಲಿ ಸಿಕ್ತು ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್! 19 ಡ್ರಗ್ಸ್ ಪೆಡ್ಲರ್‌ಗಳ ವಶ
ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಮೇ 8 ರಿಂದಲೇ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಈ ಸಂದರ್ಭದಲ್ಲಿ ನಶೆಯಲ್ಲಿ ತೇಲಾಡಬೇಕು ಎಂದು ಸಂಗ್ರಹಣೆ ಮಾಡಿ ಸರಬರಾಜು ಮಾಡಲು ಮುಂದಾಗಿದ್ದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು, ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಚುನಾವಣಾ ಸಂದರ್ಭದಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿರುತ್ತದೆ. ಈ ವೇಳೆ ಡ್ರಗ್ಸ್ ನಶೆಯಲ್ಲಿ ತೇಲುವಂತೆ ಮಾಡುವ ಡ್ರಗ್ಸ್‌ಗೆ ಭಾರಿ ಬೇಡಿಕೆ ಬರಲಿದೆ ಎಂದು ಆಲೋಚನೆ ಮಾಡಿದ್ದ ಡ್ರಗ್ಸ್ ಪೆಡ್ಲರ್‌ಗಳು ಮೂಟೆಗಟ್ಟಲೆ ಗಾಂಜಾ, ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಸಂಗ್ರಹಣೆ ಮಾಡಿಕೊಂಡಿದ್ದರು.

ಇನ್ನೂ ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್ ಸಂಗ್ರಹಿಸಿಟ್ಟು ಚುನಾವಣೆ ಸಂದರ್ಭದಲ್ಲಿ ಹಂಚಲು ಮುಂದಾಗಿದ್ದ 19 ಡ್ರಗ್ಸ್ ಪೆಡ್ಲರ್‌ಗಳನ್ನು ಪೊಲೀಸರು ಈಗಾಗಲೇ ಹೆಡೆಮುರಿಕಟ್ಟಿದ್ದು, ಅವರಿಂದ ಇಪ್ಪತ್ತು ಕೋಟಿ ರೂ. ಮೌಲ್ಯದ ನಶೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚುನಾವಣಾ ಆಯೋಗ ನೀತಿ ಸಂಹಿತೆಯನ್ನ ಘೋಷಿಸಿದ ದಿನದಿಂದಲ್ಲೂ ಸಾಕಷ್ಟು ಚೆಕ್‌ಪೋಸ್ಟ್ ನಿರ್ಮಿಸಿಕೊಂಡು ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿಯೊಂದು ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿಕೊಂಡು ಹಣ ಪತ್ತೆ, ಮದ್ಯ ಸಾಗಣೆ ಮತ್ತು ಇತರೆ ವಸ್ತುಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿರುತ್ತಾರೆ. ಆದರೆ, ಚುನಾವಣಾ ಸಂದರ್ಭದಲ್ಲಿ ಪೊಲೀಸ್ ರು ಡ್ರಗ್ಸ್ ಮಾರಾಟದ ಮೇಲೆ ಹೆಚ್ಚಿನ ಗಮನ ಹರಿಸುವುದಿಲ್ಲ ಎಂದು ಎಗ್ಗಿಲ್ಲದೇ ಡ್ರಗ್ಸ್ ಸಾಗಣೆ ಮತ್ತು ಸರಬರಾಜು ಮಾಡಲು ಮುಂದಾಗಿದ್ದಾರೆ.

ಚುನಾವಣೆಗೆ ಬಿಗಿ ಪೋಲಿಸ್ ಭದ್ರತೆ ಯ ನಡುವೆ ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಅವಧಿಯಲ್ಲಿಯೇ ಅತ್ಯಂತ ಹೆಚ್ಚು ಡ್ರಗ್ಸ್ ಪೆಡ್ಲರ್ ಕಾರ್ಯಾಚರಣೆ ಮಾಡಿದ್ದು, 20 ಕೋಟಿ ಮೌಲ್ಯದ ಡ್ರೆಸ್ಸ್ ವಶಕ್ಕೆ ಪಡೆದಿದ್ದಾರೆ.
ಇನ್ನು ಬೆಂಗಳೂರಿನ ಕೊಳೆಗೇರಿಗಳಲ್ಲಿ ಹೆಚ್ಚಾಗಿ ಡ್ರಗ್ಸ್ ಬಳಕೆ ಆಗುತ್ತಿರುವುದು ಕಂಡುಬಂದಿದೆ. ಸ್ಲಂಗಳಲ್ಲಿ ಡ್ರಗ್ಸ್ ಬಳಕೆ ಅಗುವ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ವಿಶೇಷ ತಂಡವು, ನಗರದ ವಿವಿಧ ಕೊಳೆಗೇರಿಗಳನ್ನು ಗುರಿಯಾಗಿಸಿಕೊಂಡು 10 ಕಡೆ ಕಾರ್ಯಾಚರಣೆ ಮಾಡಲಾಗಿತ್ತು. ಒಟ್ಟು 19 ಫೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಪೆಡ್ಲರ್ಸ್ ಮೊಬೈಲ್ ಗಳ ಮೂಲಕ ಹೆಚ್ಚಿನ ಡೀಟೆಲ್ಸ್ ಕಲೆ ಹಾಕುತ್ತಿದ್ದಾರೆ.
ಬೆಂಗಳೂರಿನ ಸ್ಲಂ ಪ್ರದೇಶಗಳಾದ ಆಶೋಕನಗರ, ಕೆ.ಆರ್. ಪುರ. ಆರ್.ಟಿ.ನಗರ, ವಿಲ್ಸನ್ ಗಾರ್ಡನ್, ಬಾಣಸವಾಡಿ, ಹೆಣ್ಣೂರು, ಯಲಹಂಕ, ಪುಲಕೇಶಿಯ ನಗರದ ಸಿದ್ದಾಪುರ ಕೊಳೆಗೇರಿ ಪ್ರದೇಶಗಳಲ್ಲಿ ಕಾರ್ಯಾರಣೆ ಮಾಡಿ ಪೊಲೀಸ್ ರು ಡ್ರಗ್ಸ್ ಸೀಜ್ ಮಾಡಲಾಗಿದ್ದು, ಕೇಂದ್ರ ಅಪರಾಧ ವಿಭಾಗದ ಪೊಲೀಸರು ಜಪ್ತಿ ಮಾಡಿರುವ ಡ್ರಗ್ಸ್ ವಸ್ತುಗಳು ಮತ್ತು ಪ್ರಕರಣದ ವಿವರಗಳನ್ನು ಕೇಂದ್ರ ಚುನಾವಣೆ ಆಯೋಗಕ್ಕೆ ನೀಡಲಾಗಿದೆ.
ಇನ್ನೂ ಚುನಾವಣೆ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದಿಂದ ಖಡಕ್ ಸೂಚನೆ ನೀಡಿದ್ದು, ಚುನಾವಣೆ ಟೈಮಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದ ಡ್ರಗ್ ಪೆಡ್ಲರ್ಸ್‌ಗಳ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಡ್ರಗ್ಸ್ ಮಾಫಿಯಾ ಮೇಲೆ ಕಣ್ಣಿಟ್ಟಿದ್ದರು. ನೀತಿ ಸಂಹಿತೆ ಜಾರಿಯಾದ್ಮೇಲೆ ಬರೋಬ್ಬರು 20 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಅಲ್ಲದೇ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ವಿಶೇಷ ತಂಡ ರಚನೆ ಮಾಡಿದ್ದ ಸಿಸಿಬಿ, ಹಲವು ವಿಧದ ಡ್ರಗ್ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಜೊತೆಗೆ ಗಾಂಜಾ ಕೂಡ ಜಪ್ತಿ ಮಾಡಿದ್ದಾರೆ.












Click it and Unblock the Notifications