ಗದಗ ಬಳಿ ಭೀಕರ ಅಪಘಾತ, 10 ಸಾವು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಈ ಅಪಘಾತ ಸಂಭವಿಸಿದೆ. ಲಾರಿ ಟ್ರ್ಯಾಕ್ಟರ್ ಗೆ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ನಲ್ಲಿದ್ದ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಟ್ರ್ಯಾಕ್ಟರ್ ನಲ್ಲಿದ್ದವರು ಡಂಬಳ ಗ್ರಾಮದವರಾಗಿದ್ದು, ಮದುವೆಯಲ್ಲಿ ಪಾಲ್ಗೊಳ್ಳಲು ಮುಂಡರಗಿಗೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಮುಂಡರಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಗೊಂಡವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟವರಲ್ಲಿ ಮೂವರು ಮಕ್ಕಳು ಮತ್ತು 7 ಜನರ ಮಹಿಳೆಯರು ಸೇರಿದ್ದಾರೆ. ಮೃತಪಟ್ಟವರನ್ನು ರೋಣ ತಾಲೂಕು ಅಬ್ಬಿಗೇರಿಯ ಪ್ರಶಾಂತ ತಾಯಪ್ಪ ಕೆಂಗಾರ (6), ಪ್ರಜ್ವಲ ತಾಯಪ್ಪ ಕೆಂಗಾರ, ಗದಗ ತಾಲೂಕು ನಾಗಸಮುದ್ರದ ಸಂಜನಾ ಗುಡದಪ್ಪ ಹಾದಿಮನಿ (5), ಸುದೀಪ ಗುಡದಪ್ಪ ಹಾದಿಮನಿ (6), ರೇಣುಕಾ ಹೂಳಪ್ಪ ಹಾದಿಮನಿ (22), ರೇಣುಕಾ ನಿಂಗಪ್ಪ ಹಾದಿಮನಿ (26), ಮುತ್ತಪ್ಪ ಮಲ್ಲಪ್ಪ ಹಾದಿಮನಿ (26), ಗದಗಿನ ರೇವಣಪ್ಪ ರಾಮಪ್ಪ ಯಲ್ಲಕ್ಕನವರ (25), ಡಂಬಳದ ಹನುಮಪ್ಪ ಕೆಂಚಪ್ಪ ಪೂಜಾರ (30), ಕೊಪ್ಪಳ ಜಿಲ್ಲೆ ಮಂಗಳೂರಿನ ಅನ್ನಪೂರ್ಣ ಶಂಕರಪ್ಪ ಪೂಜಾರ (25) ಎಂದು ಗುರುತಿಸಲಾಗಿದೆ.












Click it and Unblock the Notifications