Rice Price Hike: ಅಕ್ಕಿ ಬೆಲೆ ಇಂದು ಮತ್ತೆ ಗಗನಕ್ಕೆ! ಕೋಲಂ, ಸೋನಾಮಸೂರಿ, ಜೀರಾ ಸಾಂಬ ದರ ಏರಿಕೆ; ಕೆಜಿಗೆ ಎಷ್ಟಿದೆ?

ಬೆಂಗಳೂರು: ರಾಜ್ಯದಲ್ಲಿ ಸಕ್ಕರೆ ದರ ಏರಿಕೆ ಆದ ನಾಲ್ಕು ದಿನಗಳಲ್ಲೇ ಇಳಿಕೆ ಆಗಿತ್ತು. ಇದೀಗ ಒಂದೇ ತಿಂಗಳಲ್ಲಿ ಅಕ್ಕಿ ಬೆಲೆ ಗಗನಕ್ಕೇರಿದೆ. ಕಳೆದ ವಾರ ಹೆಚ್ಚಾಗಿದ್ದ ವಿವಿಧ ಬಗೆಯ ಪ್ರತಿ ಕೆಜಿ ಅಕ್ಕಿಯ ಬೆಲೆ ಇದೀಗ ಮತ್ತೊಮ್ಮೆ ಹೆಚ್ಚಾಗುವ ಮೂಲಕ ಗ್ರಾಹಕರ ಜೀಬಿಗೆ ಕತ್ತರಿ ಬಿದ್ದಿದೆ. ವಿವಿಧ ಬೆಲೆಗಳ ಹೆಚ್ಚಳ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಜನರಿಗೆ ಮತ್ತೊಂದು ಆರ್ಥಿಕ ಬರೆ ಬಿದ್ದಂತಾಗಿದೆ.

ಅಕ್ಕಿ ಉತ್ಪಾದನೆ ಕುಸಿತ ಹಿನ್ನೆಲೆಯಲ್ಲಿ ಎರಡೇ ವಾರಗಳಲ್ಲಿ ಎರಡು ಬಾರಿ ಎಲ್ಲಾ ವಿಧದ ಅಕ್ಕಿಯ ದರ ಏರಿಕೆ ಆಗಿದೆ. ಬರ ಪರಿಸ್ಥಿತಿ, ಪೂರೈಕೆಯಲ್ಲಿ ವ್ಯತ್ಯಾಯವಾದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರ್ತಕರು ಆತಂಕ ಹೊರ ಹಾಕಿದ್ದಾರೆ. ಕೋಲಂ ಅಕ್ಕಿ 75 ರೂಪಾಯಿಯಿಂದ 100 ರೂ.ಗೆ ಏರಿಕೆ ಕಂಡಿದೆ. ಮಳೆ ಕೊರತೆ, ನೀರಾವರಿ ರೈತರಿಗೂ ನೀರಿಲ್ಲದ ಕಾರಣ ಈ ವರ್ಷ ಅಕ್ಕಿ ಇಳುವರಿ ಕುಸಿತ ಕಂಡಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

Rice Price Hike

ಸರಿಯಾಗಿ ಏಳು ದಿನಗಳ ಹಿಂದೆ (ಸೆಪ್ಟಂಬರ್ 15) ರಾಜ್ಯದಲ್ಲಿ ಅಕ್ಕಿ ಬೆಲೆ ಗರಿಷ್ಠ 10 ರೂಪಾಯಿಯಷ್ಟ ಹೆಚ್ಚಾಗಿತ್ತು. ಕ್ವಾಲಿಟಿ ಅಕ್ಕಿಯ ದರದಲ್ಲಿ ಗರಿಷ್ಠ 20 ರೂ.ನಷ್ಟು ಏರಿಕೆ ದಾಖಲಾಗಿತ್ತು. ಇನ್ನೂ ಚೀಲಗಟ್ಟಲೇ ಕೊಳ್ಳುವವರಿಗೂ ಒಂದು ಚೀಲಕ್ಕೆ 200-300 ರೂಪಾಯಿ ವರೆಗೆ ಹೆಚ್ಚು ಹಣ ಪಾವತಿಸಿದ್ದರು. ಇದು ಹೆಚ್ಚಳ ಸಾಮಾನ್ಯ ತಾತ್ಕಾಲಿಕ ಅಂತಲೇ ಭಾವಿಸಲಾಗಿತ್ತು. ಮತ್ತೆ ಇಳಿಕೆ ಆಗಲಿದೆ ಎಂದುಕೊಂಡವರಿಗೆ ಇಂದು ಸೆಪ್ಟೆಂಬರ್ 22ರಂದು ಮತ್ತೆ ದಿಢೀರ್ ದರ ಏರಿಕೆ ಆಗುವ ಮೂಲಕ ಗ್ರಾಹಕರಿಗೆ ಶಾಕ್ ಎದುರಾಗಿದೆ.

ಎರಡನೇ ಬಾರಿ ಹೆಚ್ಚಾದ 1 ಕೆಜಿ ಅಕ್ಕಿ ಬೆಲೆ ವಿವರ

ಜೀರಾ ಸಾಂಬ ರೈಸ್ (ಅಕ್ಕಿ) ದರವು ಈ ಹಿಂದೆ 180 ರೂ. ಇದ್ದದ್ದು ಇದೀಗ 200 ರೂಪಾಯಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಕೋಲಂ ಅಕ್ಕಿಯು 75 ರೂಪಾಯಿಯಿಂದ 100 ರೂಪಾಯಿಗೆ ಹೆಚ್ಚಾಗಿದೆ. ಸ್ಟೀಮ್ ಅಕ್ಕಿ 68 ರಿಂದ 75 ರೂಪಾಯಿಗೆ ಹಾಗೂ ಸೋನಾಮಸೂರಿ ಅಕ್ಕಿಯು 68 ರೂಪಾಯಿಯಿಂದ 85 ರೂಪಾಯಿಗೆ ಹೆಚ್ಚಾಗಿದೆ. ಇನ್ನೂ ಕೆಲವು ಹೈ ಕ್ವಾಲಿಟಿಯ ಬೇರೆ ಬೇರೆ ಬ್ರ್ಯಾಂಡ್‌ಗಳ ದರದಲ್ಲೂ ಭಾರೀ ಬದಲಾವಣೆ ಆಗಿದೆ.

ಗುಣಮಟ್ಟದ ಆಧಾರದಲ್ಲಿ ಬೆಲೆ ನಿಗದಿ

ಸಾಮಾನ್ಯವಾಗಿ ಬಡವರು, ಸರ್ಕಾರದ 'ಅನ್ನಭಾಗ್ಯ' ಯೋಜನೆಯಡಿ ಅಕ್ಕಿಯನ್ನು ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲಿ ಕೊಳ್ಳುತ್ತಾರೆ. ಉಳಿದಂತೆ ಹೋಟೆಲ್, ರಸ್ತೆ ಬದಿ ಅಂಗಡಿ ಮುಂಗಟ್ಟುಗಳ ಮಾಲೀಕರು ಪ್ರತಿ ಕೆಜಿಗೆ ಗುಣಮಟ್ಟದ ಆಧಾರದಲ್ಲಿ 40-50 ರೂಪಾಯಿ ಕೆಲವರು ದುಬಾರಿ ಬೆಲೆ ಅಕ್ಕಿ ಖರೀದಿಸುತ್ತಾರೆ. ಇದೀಗ ಅವರಿಗೆಲ್ಲ ಆರ್ಥಿಕ ಹೊರೆ ಉಂಟಾಗಲಿದೆ.

ಇನ್ನೂ ಎಪಿಎಂಸಿಯಲ್ಲಿ ಸಗಟು ಪ್ರತಿ ಕ್ವಿಂಟಾಲ್ ಅಕ್ಕಿಯ ದರ 3850 ಆಸು ಪಾಸು ಇದೆ. ಸೋನಾಮಸುರಿ, ಬಾಸುಮತಿ, ಒರಟು ಹೀಗೆ ವಿವಿಧ ವರ್ಗದ, ಗುಣಮಟ್ಟದ ಅಕ್ಕಿಯ ದರ ಇನ್ನೂ ಹೆಚ್ಚಿದೆ. ಇದೆಲ್ಲದರ ಮಧ್ಯ ದಿಢೀರನೇ ಎರಡು ಬಾರಿ ಅಕ್ಕಿ ದರ ಏರಿಕೆ ಆಗಿದ್ದರಿಂದ ಬೆಲೆಯಲ್ಲಿ ಭಾರೀ ಬದಲಾವಣೆ ಆಗಿದೆ.

ತಾತ್ಕಾಲಿಕ ಅಭಾವ, ದರ ಕುಸಿತ ಖುಷಿ

ಇತ್ತೀಚೆಗೆ ಗಣೇಶ ಹಬ್ಬಕ್ಕೂ ಮುನ್ನ ಸಕ್ಕರೆ ಬೆಲೆ ಏರಿಕೆ ಆದಾಗ ಪೂರೈಕೆದಾರರು, ವರ್ತಕರು ತಾತ್ಕಾಲಿಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಅನುಮಾನ ಕಾಡಿತ್ತು. ಆಗ ಪ್ರತಿ ಕೆಜಿ ಸಕ್ಕರೆಗೆ 70 ರೂ.ವರೆಗೆ ತಲುಪಿದ್ದ ದರ ನಾಲ್ಕೇ ದಿನಗಳಲ್ಲಿ ಮತ್ತೆ 53-59ರ ಆಸುಪಾಸಿಗೆ ಇಳಿಕೆ ಆಯಿತು. ಚೌತಿ ಹಬ್ಬಕ್ಕೆ ಗ್ರಾಹಕರಿಗೆ ದರ ಇಳಿಕೆ ಸಿಹಿ ನೀಡಿತ್ತು.

ಇದೀಗ ಅಕ್ಕಿ ವಿಷಯದಲ್ಲೂ ತಾತ್ಕಾಲಿಕ ಅಭಾವ ಸೃಷ್ಟಿಸಿದ್ದಾರೆಯೇ ಅಂತಲೂ ಅನುಮಾನ ವ್ಯಕ್ತವಾಗಿದೆ. ಮಳೆ ಕೊರತೆ, ಇಳುವರಿ ಕುಂಠಿತ ಕಾರಣ ನಿಜವೇ ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಸದ್ಯಕ್ಕೆ ಸಾರ್ವಜನಿಕರು ಅಕ್ಕಿ ದರ ಕುಸಿತದ ಹಾದಿ ಕಾಯುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+