ರೋಗಿಗಳನ್ನು ಕೊವಿಡ್ ಕೇಂದ್ರದಲ್ಲಿ ದಾಖಲಿಸಲು ಪರಿಷ್ಕೃತ ನಿಯಮಾವಳಿ

ಬೆಂಗಳೂರು, ಜುಲೈ 20: ಕೊವಿಡ್ 19 ಸೋಂಕಿತರನ್ನು ಕೊವಿಡ್ ಕೇರ್ ಕೇಂದ್ರದಲ್ಲಿ ದಾಖಲಿಸಲು ಇದ್ದ ನಿಯಮಾವಳಿಗಳನ್ನು ಸರ್ಕಾರ ಪರಿಷ್ಕರಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಖಾಸಗಿ ಕೊವಿಡ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಾಸ್ಟೆಲ್, ಹೋಟೆಲ್, ಸ್ಟೇಡಿಯಂ, ಲಾಡ್ಜ್ ಸೇರಿದಂತೆ ಹಲವು ಕಡೆ ಕೊವಿಡ್ ಕೇಂದ್ರಗಳನ್ನು ತೆರೆಯಲಾಗಿದೆ.

ದಿನಕ್ಕೆ ಮೂರು ಬಾರಿ ಆಹಾರ ನೀಡಬೇಕು. ತಿಂಡಿಯನ್ನು ಬೆಳಗ್ಗೆ 7 ಗಂಟೆಗೆ ನೀಡಬೇಕು. ಊಟವನ್ನು ಮಧ್ಯಾಹ್ನ 1 ಗಂಟೆಗೆ ನೀಡಬೇಕು. ಮತ್ತ ಸಂಜೆ 7 ಗಂಟೆಗೆ ಊಟ ನೀಡಬೇಕು. ಕೊವಿಡ್ ಕೇಂದ್ರದ ಒಳಗೆ ಮತ್ತು ಹೊರಗೆ ಶುಚಿತ್ವವನ್ನು ಕಾಪಾಡಿಕೊಂಡಿರಬೇಕು.

ಯಾರು ಕೊವಿಡ್ ಕೇಂದ್ರಕ್ಕೆ ನೇರವಾಗಿ ದಾಖಲಾಗಬಹುದು?

ಯಾರು ಕೊವಿಡ್ ಕೇಂದ್ರಕ್ಕೆ ನೇರವಾಗಿ ದಾಖಲಾಗಬಹುದು?

-ಎಲ್ಲಾ ಲಕ್ಷಣವಿಲ್ಲದ ಕೊರೊನಾ ಸೋಂಕಿತರು ಹಾಗೂ ಲಕ್ಷಣವಿರುವ ಸೋಂಕಿತರು ಇದನ್ನು ಪಾಲಿಸಬೇಕಾಗುತ್ತದೆ
-ಯಾರಿಗೆ ಗೃಹಬಂಧನದಲ್ಲಿರಲು ಅರ್ಹರಿಲ್ಲವೋ ಅವರು ಕೊವಿಡ್ ಕೇಂದ್ರದಲ್ಲಿರಬೇಕು
-ಗೃಹ ಬಂಧನ ಆಯ್ಕೆಯನ್ನು ಬಿಟ್ಟು ಕೊವಿಡ್ ಕೇಂದ್ರವನ್ನು ಆಯ್ಕೆ ಮಾಡಿಕೊಂಡವರು ಇರಬಹುದು.
-ದೇಹದ ಉಷ್ಣಾಂಶ 24 ಗಂಟೆಗಳಿಗಿಂತ ಹೆಚ್ಚು 100.4 ಡಿಗ್ರಿ ಸೆಲ್ಸಿಯಸ್ ಇರಬಾರದು
-ಹೈಪರ್ ಟೆನ್ಷನ್, ಒಬೆಸಿಟಿ, ಥೈರಾಯ್ಡ್ ಇದ್ದವರು ವೈದ್ಯರನ್ನು ಭೇಟಿಯಾಗಲೇಬೇಕು.
-ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಎಚ್‌ಐವಿ ಇದ್ಯಾವುದೂ ಇಲ್ಲದವರು ಕೊವಿಡ್ ಕೇಂದ್ರದಲ್ಲಿ ದಾಖಲಾಗಬಹುದು.

ಕೊವಿಡ್ ಕೇಂದ್ರದಲ್ಲಿರುವವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕು

ಕೊವಿಡ್ ಕೇಂದ್ರದಲ್ಲಿರುವವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕು

ಕೊವಿಡ್ ಕೇಂದ್ರದಲ್ಲಿರುವ ಕೊರೊನಾ ಶಂಕಿತರು, ಅಥವಾ ಕೊರೊನಾ ಸೋಂಕಿತರು ಹಲವು ಪರೀಕ್ಷೆಗಳನ್ನು ಮಾಡಿಸಲೇಬೇಕಿದೆ.
-ಎಸ್‌ಆರ್‌ಎಫ್ ಐಡಿ ಹಾಗೂ ಸ್ವ ದಾಖಲೆ ನೀಡಬೇಕು
-ಸಾಮಾನ್ಯ ಥರ್ಮಲ್ ಸ್ಕ್ಯಾನರ್‌ ಅಲ್ಲಿ ಸ್ಕ್ರೀನಿಂಗ್ ಮಾಡಿಸಬೇಕು
-ಫಿಂಗರ್ ಟ್ರಿಪ್ ಪಲ್ಸ್ ಆಕ್ಸಿ ಮೀಟರ್‌ನಿಂದ ಪುಲ್ಸ್ ರೇಟ್ ತಿಳಿಯಬೇಕು
-ಗ್ಲೂಕೋಮೀಟರ್ ಬಳಸಿ ರಕ್ತದಲ್ಲಿರುವ ಸಕ್ಕರೆ ಅಂಶ ತಿಳಿಯಬೇಕು
-ರೋಗಿಯ ಮೆಡಿಕಲ್ ಹಿಸ್ಟರಿಯನ್ನು ತಿಳಿಯಬೇಕು
ಪ್ರತಿಯೊಂದು ಕೊವಿಡ್ ಕೇರ್ ಕೇಂದ್ರಗಳು ಒಂದಲ್ಲಾ ಒಂದು ಕೊವಿಡ್ ಹೆಲ್ತ್ ಸೆಂಟರ್ ಜೊತೆಗೆ ಸಂಪರ್ಕ ಹೊಂದಿರುತ್ತದೆ.

ಕೊವಿಡ್ ಕೇಂದ್ರಗಳು ಹೇಗಿರಬೇಕು

ಕೊವಿಡ್ ಕೇಂದ್ರಗಳು ಹೇಗಿರಬೇಕು

-ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿರುತ್ತದೆ
-ಹೆಲ್ಪ್ ಡೆಸ್ಕ್ ಹೊಂದಿರಬೇಕು
-ಲಾಕರ್, ಚಾರ್ಜಿಂಗ್ ಪಾಯಿಂಟ್‌ನಿಂದ ಒಂದು ಮೀಟರ್ ಅಂತರದಲ್ಲಿ ಹಾಸಿಗೆಗಳಿರಬೇಕು
-ಒಂದು ಫ್ಯಾನ್, ಒಂದು ಖುರ್ಚಿ, ಒಂದು ಸ್ಟೂಲ್ ಇರಬೇಕು
-ಲಕ್ಷಣಗಳಿಲ್ಲ ಹಾಗೂ ಸ್ವಲ್ಪ ಪ್ರಮಾಣದ ಸೋಂಕಿನ ಲಕ್ಷಣವಿರುವವರನ್ನು ಬೇರೆ ಇರಿಸಬೇಕು
-24 ಗಂಟೆಯೂ ನೀರು, ವಿದ್ಯುತ್ ಸಂಪರ್ಕವಿರಬೇಕು
-ಪಿಪಿಇ ಕಿಟ್, ಎನ್ 95 ಮಾಸ್ಕ್, ಗ್ಲೌಸ್, ಹ್ಯಾಂಡ್ ಸ್ಯಾನಿಟೈಜರ್ ಇರಿಸಿರಬೇಕು
-20 ಮಂದಿಗೆ ಒಂದು ಟಾಯ್ಲೆಟ್ ಇರಬೇಕು
-ಸಿಸಿಟಿವಿ ಕ್ಯಾಮರಾಗಳಿರಬೇಕು
-24/7 ಆಂಬ್ಯುಲೆನ್ಸ್ ಸೇವೆ ಇರಬೇಕು

ಪೌಷ್ಠಿಕ ಆಹಾರ ನೀಡಬೇಕು

ಪೌಷ್ಠಿಕ ಆಹಾರ ನೀಡಬೇಕು

ದಿನಕ್ಕೆ ಮೂರು ಬಾರಿ ಆಹಾರ ನೀಡಬೇಕು. ತಿಂಡಿಯನ್ನು ಬೆಳಗ್ಗೆ 7 ಗಂಟೆಗೆ ನೀಡಬೇಕು. ಊಟವನ್ನು ಮಧ್ಯಾಹ್ನ 1 ಗಂಟೆಗೆ ನೀಡಬೇಕು. ಮತ್ತ ಸಂಜೆ 7 ಗಂಟೆಗೆ ಊಟ ನೀಡಬೇಕು. ಕೊವಿಡ್ ಕೇಂದ್ರದ ಒಳಗೆ ಮತ್ತು ಹೊರಗೆ ಶುಚಿತ್ವವನ್ನು ಕಾಪಾಡಿಕೊಂಡಿರಬೇಕು.

ಕೊರೊನಾ ಸೋಂಕಿತರನ್ನು ಬಿಡುಗಡೆ ಮಾಡುವಾಗ ಪಾಲಿಸಬೇಕಾದ ನಿಯಮಗಳು

ಕೊರೊನಾ ಸೋಂಕಿತರನ್ನು ಬಿಡುಗಡೆ ಮಾಡುವಾಗ ಪಾಲಿಸಬೇಕಾದ ನಿಯಮಗಳು

-ಕಳೆದ 3 ದಿನಗಳಿಂದ ಜ್ವರ ಅಥವಾ ಯಾವುದೇ ಸೋಂಕಿನ ಲಕ್ಷಣಗಳಿರಬಾರದು
-ಕೊವಿಡ್ 19 ಪರೀಕ್ಷೆ ಮಾಡಿಸಿರಬೇಕು
-ಒಂದೊಮ್ಮೆ ರೋಗಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಹತ್ಉ ದಿನಗಳವರಗೆ ಯಾವುದೇ ಲಕ್ಷಣ ಗೋಚರಿಸದಿದ್ದರೆ ಅವರನ್ನು ಬಿಡುಗಡೆ ಮಾಡಬಹುದು
-ಅವರನ್ನು ಬಿಡುಗಡೆ ಮಾಡಿದ ದಿನದಿಂದ 14 ದಿನಗಳ ಕಾಲ ವ್ಯಕ್ತಿ ಗೃಹ ಬಂಧನದಲ್ಲಿರಬೇಕು.

ವೈದ್ಯರ ಕರ್ತವ್ಯವೇನು?

ವೈದ್ಯರ ಕರ್ತವ್ಯವೇನು?

-ನಿತ್ಯವೂ ರೋಗಿಯ ಪರೀಕ್ಷೆ ಮಾಡಿಸಬೇಕು
-ದೇಹದ ಉಷ್ಣಾಂಶ, ಪಲ್ಸ್ ರೇಟ್, ಉಸಿರಾಟ, ರಕ್ತದೊತ್ತಡ ವನ್ನು ಪರೀಕ್ಷಿಸಬೇಕು
-100 ರೋಗಿಗಳಿಗೆ ಓರ್ವ ವೈದ್ಯರಿರಬೇಕು. ದಿನದಲ್ಲಿ ಎಂಟು ಗಂಟೆ ಕರ್ತವ್ಯ ನಿರ್ವಹಿಸಬೇಕು.
-50 ರೋಗಿಗಳಿಗೆ ಒಬ್ಬ ನರ್ಸ್ ಇರಬೇಕು, ಅವರೂ ಕೂಡ 8 ಗಂಟೆಗಳ ಕಾಲ ಸೇವೆ ಮಾಡಬೇಕು.
-ಡಾಟಾ ಎಂಟ್ರಿ ಆಪರೇಟರ್‌ಗಳಿರಬೇಕು
-ಸೆಕ್ಯುರಿಟಿ ಇರಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+