ಕರ್ನಾಟಕ: ಎಲ್ಲ ಸಾರಿಗೆ ವಾಹನಗಳಿಗೆ ಈ ನಿಯಮ ಕಡ್ಡಾಯ ಮಾಡಿ ಸರ್ಕಾರ ಆದೇಶ

ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಕರ್ನಾಟಕ ರಾಜ್ಯ ಎಲ್ಲ ಸಾರಿಗೆ ವಾಹನಗಳಿಗೆ 'ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌' ಅಳವಡಿಕೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು, ಮಾರ್ಚ್ 01: ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಕರ್ನಾಟಕ ರಾಜ್ಯ ಎಲ್ಲ ಸಾರಿಗೆ ವಾಹನಗಳಿಗೆ 'ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌' ಅಳವಡಿಕೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 104ರ ಅಡಿ ರಾಜ್ಯದ ಎಲ್ಲ ವಿಧದ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ನಿಯಮ ಪಾಲಿಸಬೇಕು. ಈ ವೇಳೆ 'ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌' ಅಳವಡಿಸುವುದು ಕಡ್ಡಾಯಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಸೂಚಿಸಲಾಗಿದೆ.

Retro Reflective Tape And Rear Marking Plate Installation Mandatory For All Transport Vehicles

ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ವೆಬ್‌ ಆಧಾರಿತ ಸಾಫ್ಟವೇರ್‌ ಮೂಲಕ ಪರೀಕ್ಷಿಸುವುದು ಮತ್ತು ಹಿಂದಿನ ಆದೇಶದಲ್ಲಿನ ಮಾರ್ಗಸೂಚಿ ಪಾಲಿಸಬೇಕಿದೆ. ಜೊತೆಗೆ ಈ ಬಗ್ಗೆ ಯಾವುದೇ ದೂರುಗಳು ಬಂದರೂ ಸಹ ಅವುಗಳಿಗೆ ಆಸ್ಪದ ಕೊಡದೆ ನಿಯಮ ಪಾಲಿಸುವಂತೆ ಆದೇಶದಲ್ಲಿ ಉಲ್ಳೇಖಿಸಲಾಗಿದೆ.

ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ?

ಇತ್ತೀಚಿನ ಮಾರುಕಟ್ಟೆಗಳಲ್ಲಿ ಕಳಪೆ ತಯಾರಕರು/ ಮಾರಾಟಗಾರರು ಸಾರಿಗೆ ವಾಹನಗಳಿಗೆ ನಿಗದಿತ ಪರೀಕ್ಷಾ ಸಂಸ್ಥೆಗಳಲ್ಲಿ ತಪಾಸಣೆಗೆ ಒಳಪಡಿಸದೇ 'ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌' ಅಳವಡಿಸುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಘಟನೆಗಳನ್ನು ತಡೆಯು ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಿದೆ.

Retro Reflective Tape And Rear Marking Plate Installation Mandatory For All Transport Vehicles

ಸೂಚನೆಯಂತೆ 'ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌' ಅಳವಡಿಸುವಾಗ ಅವುಗಳ ನೈಜತೆ ಖಚಿತಪಡಿಸಿಕೊಳ್ಳಲು ಕ್ಯೂ ಆರ್‌ ಕೋಡ್‌ ಅಗತ್ಯವಿರುತ್ತದೆ. ಈ ಸಂಬಂಧ ಮಾರ್ಕಿಂಗ್ ಪ್ಲೇಟ್‌ ತಯಾರಕರು ಕ್ಯೂ ಆರ್‌ ಕೋಡ್‌ ಅನ್ನು ವಾಹನಗಳಿಗೆ ಅಳವಡಿಕೆಯನ್ನೂ ಕಡ್ಡಾಯಗೊಳಿಸಲಾಗಿದೆ. ಇದು ಫೆಬ್ರವರಿ 27ರಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ. ಮುಖ್ಯವಾಗಿ ಈ ಪ್ಲೇಟ್, ಕ್ಯೂಆರ್‌ ಅಳವಡಿಕೆಯನ್ನು ಖಚಿತಪಡಿಸಿಕೊಂಡು ತಪಾಸಣೆ ನಡೆಸಿ ವಾಹನಗಳಿಗೆ ದೃಢೀಕರಣ ನೀಡುವಂತೆ ಸರ್ಕಾರವು (ಸಾರಿಗೆ ಮತ್ತು ರಸ್ತೆ ಸುರಕ್ಷತೆ) ಎಲ್ಲ ಜಂಟಿ ಸಾರಿಗೆ ಆಯುಕ್ತರು, ಅವರ ಅಧೀನ ಹಿರಿಯ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+