ಸಮುದ್ರದಲ್ಲಿ ಮುಳುಗಿ ವರದಿಗಾರ ಮಂಜು ಹೊನ್ನಾವರ ನಿಧನ
ಹೊನ್ನಾವರ, ಸೆಪ್ಟೆಂಬರ್ 18: ಖಾಸಗಿ ವಾಹಿನಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉತ್ತರ ಕನ್ನಡದ ಹೊನ್ನಾವರದವರಾದ ಮಂಜು ಹೊನ್ನಾವರ ಸಮುದ್ರದಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖಾಸರಕೋಡು ಬಂದರಿನಲ್ಲಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಮಂಜು ಹೊನ್ನಾವರ ಅವರು ಈ ಹಿಂದೆ ಕರ್ನಾಟಕದ 'ಟಿವಿ 9' ಹಾಗೂ 'ಸಮಯ ಟಿ.ವಿ'ಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ಮಂಜು ಹೊನ್ನಾವರ ಸಾವಿಗೀಡಾದ ಸಂದರ್ಭ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications