12 ಮತಗಟ್ಟೆಯಲ್ಲಿ ಶಾಂತಿಯುತ ಮತದಾನ

ಬೆಂಗಳೂರು, ಏ. 29 : ಮಂಗಳವಾರ ರಾಜ್ಯದ 12 ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮರು ಮತದಾನ ಶಾಂತಿಯುತವಾಗಿ ಸಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆಯಿಂದಲೇ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 8ರಲ್ಲಿ ಮತಗಟ್ಟೆ ಸಿಬ್ಬಂದಿಯೇ ಮತದಾರರ ಅನುಮತಿ ಪಡೆಯದೆ ಮತಯಂತ್ರ ನಿರ್ವಹಣೆ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಮಂಗಳವಾರ ಮರು ಮತದಾನ ನಡೆಸುತ್ತಿದ್ದರೆ, ಉಳಿದ 11 ಕಡೆ ಮತಯಂತ್ರದಲ್ಲಿನ ದೋಷದ ಕಾರಣದಿಂದಾಗಿ ಮತದಾನ ನಡೆಯುತ್ತಿದೆ.

Re polling

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 57, ಬಾಗಲಕೋಟೆಯ ಮತಗಟ್ಟೆ ಸಂಖ್ಯೆ 7, ಜಮಖಂಡಿಯ ಮತಗಟ್ಟೆ ಸಂಖ್ಯೆ 27, ವಿಜಾಪುರದ ಸಿಂಧಗಿಯ 216, ಗುಲ್ಬರ್ಗದ ಸೇಡಂನ 165, ರಾಯಚೂರಿನ ಶಹಾಪುರದ 35, ಯಾದಗಿರಿಯ 112, ಬೀದರ್‌ ನ 20 ಮತ್ತು 201, ಶಿವಮೊಗ್ಗದ ಬೈಂದೂರು 174, ಹಾಸನದ ಅರಸೀಕೆರೆಯ 72 ಹಾಗೂ ತುಮಕೂರಿನ ತುರುವೇಕೆರೆಯ ಮತಗಟ್ಟೆ ಸಂಖ್ಯೆ 8ರಲ್ಲಿ ಮರುಮತದಾನ ನಡೆಯುತ್ತಿದೆ. [ಕರ್ನಾಟಕದ ಮತದಾನದ ಚಿತ್ರಗಳನ್ನು ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+