• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕಾಶವಾಣಿ 'ಈರಣ್ಣ' ಎಂದೇ ಹೆಸರಾದ ಎ ಎಸ್ ಮೂರ್ತಿ ನೆನಪು

By ದೊಡ್ದವೀರಪ್ಪ
|

ಇಂದು ಶುಕ್ರವಾರ (ಡಿ 18) ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಬೆಂಗಳೂರು ಆಕಾಶವಾಣಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದ 'ಆಕಾಶವಾಣಿ ಈರಣ್ಣ' ಎಂದೇ ಪ್ರಸಿದ್ಧರಾಗಿರುವ ಎ ಎಸ್ ಮೂರ್ತಿಯವರ ಮೂರನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಾ ಅವರ ಕಲಾಜೀವನ ನಡೆದುಕೊಂಡು ಬಂದ ಬಗ್ಗೆ ಒಂದು ಸಣ್ಣ ವರದಿ.

ಬೆಂಗಳೂರಿನಲ್ಲಿ ದಿನಾಂಕ 16.08.1929 ರಂದು ಹುಟ್ಟಿದ ಈರಣ್ಣ ಅವರ ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು, ತಾಯಿ ಗೌರಮ್ಮ. ಈರಣ್ಣನವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು.[ರಂಗಕರ್ಮಿ ಎ ಎಸ್ ಮೂರ್ತಿ ಸ್ಮರಣೆಗೆ ಕಲೋತ್ಸವ]

ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಕ್ಯಾಲಿಕೊ ಮಿಲ್ಸ್‌ ನಲ್ಲಿ ಕೆಲಕಾಲ ಉದ್ಯೋಗ ಸಹ ಮಾಡಿದ್ದ ಈರಣ್ಣ ಅವರ ಒಲವು ತಂದೆಯಿಂದ ಬಂದ ಬಳುವಳಿಯಾಗಿ ಆಯ್ದುಕೊಂಡ ಕ್ಷೇತ್ರ ನಾಟಕರಂಗದ ಮೇಲಿತ್ತು. ಕಲೆ, ಸಾಹಿತ್ಯ, ನಾಟಕ ನಂತರ ಇವರು ಸೇರಿದ್ದು ಆಕಾಶವಾಣಿ.

ಆಕಾಶವಾಣಿಯಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ಇವರು ನಡೆಸಿದ್ದ 'ವೆಂಕಣ್ಣನ ಸಾಹಸಗಳು', 'ಮನೆಮಾತು' ಮುಂತಾದವು ಇವರಿಗೆ ಹೆಸರು ತಂದುಕೊಟ್ಟ ಕಾರ್ಯಕ್ರಮಗಳು. ನಂತರ ಚಿತ್ರ ನಾಟಕ ತಂಡ ಕಟ್ಟಿ ಹಲವಾರು ನಾಟಕಗಳ ಪ್ರಯೋಗ ನಡೆಸಿದ ಕೀರ್ತಿ ಈರಣ್ಣನವರದ್ದು.

ಈರಣ್ಣನವರು 1964ರಲ್ಲಿ ಪ್ರಾರಂಭಿಸಿದ ಅಭಿನಯ ತರಂಗ ಸಂಸ್ಥೆಯ ಮೂಲಕ ಸಾಹಿತ್ಯ, ಸಂಸ್ಕೃತಿ ಅಧ್ಯಯನ, ರಂಗಶಾಲೆಯ ಉತ್ತೇಜನಕ್ಕೆ ದುಡಿದರು. ಈ ಸಂಸ್ಥೆಯಿಂದ ನಾಟಕರಂಗ, ಟಿವಿ ಕಲಾವಿದರಿಗೂ ಸಾಕಷ್ಟು ಸಹಾಯವಾಯಿತು. ನಂತರ ಪ್ರಾರಂಭಿಸಿದ್ದು ಹನುಮಂತನಗರ ಮತ್ತು ವಿಜಯನಗರದಲ್ಲಿ ಮಕ್ಕಳಿಗಾಗಿ ರೂಪಿಸಿದ 'ಬಿಂಬ' ಸಂಸ್ಥೆ. [ತೆರೆ ಮರೆಗೆ ಸರಿದ ರಂಗಕರ್ಮಿ ಎಎಸ್ ಮೂರ್ತಿ]

ಅಭಿನಯ ತರಂಗ ಸಂಸ್ಥೆಯಿಂದ ಆಯೋಜಿಸುತ್ತಿದ್ದ ನಾಟಕ ಕಾರ್ಯಕ್ರಮಗಳಲ್ಲಿ ಪ್ರಾಂಶುಪಾಲರ ಪಾತ್ರದಲ್ಲಿ ಅಶೋಕ ಬಾದರದಿನ್ನಿ, ಬಿ. ಚಂದ್ರಶೇಖರ್, ಎಚ್.ಜಿ. ಸೋಮಶೇಖರ್‌ರಾವ್, ಗೌರಿದತ್ತು ಮುಂತಾದವರು ನಟಿಸುತ್ತಿದ್ದರು.

ನಾಟಕಗಳನ್ನು ಜನರೆಡೆಗೆ ಕೊಂಡೊಯ್ಯಲು ಕಟ್ಟಿದ ಬೀದಿನಾಟಕ ‘ಗೆಳೆಯರ ಗುಂಪು' ರಾಜಾಜಿನಗರದ ರಾಮಮಂದಿರದ ಬಳಿ ಪ್ರದರ್ಶಿಸಿದ ಮೊದಲ ನಾಟಕ 'ಕಟ್ಟು'. ಇದಲ್ಲದೇ, ಲೆಕ್ಕವಿಲ್ಲದಷ್ಟು ನಾಟಕಗಳ ಪ್ರದರ್ಶನವನ್ನು ಈರಣ್ಣ ತಮ್ಮ ಸಂಸ್ಥೆಯ ಮೂಲಕ ನೀಡಿದ್ದಾರೆ.

ನಾಟಕಗಳಲ್ಲದೆ ಕವಿತೆಗಳಿಗೆ ರಂಗರೂಪ, ರೆಡಿಯೋ ನಾಟಕಗಳು, ಚಲನಚಿತ್ರಗಳಿಗೆ ಬರೆದ ಸಂಭಾಷಣೆ, ನಟನೆ. ಟಿವಿ ಧಾರಾವಾಹಿಗಳಲ್ಲೂ ಈರಣ್ಣ ನಟಿಸಿದ್ದಾರೆ. ಡಿಸೆಂಬರ್ 18, 2012ರಂದು ನಿಧನರಾದಾಗ ಈರಣ್ಣ ಅವರಿಗೆ 82 ವರ್ಷ ವಯಸ್ಸಾಗಿತ್ತು

ಇವರು ರಚಿಸಿದ ನಾಟಕಗಳು

ಅಧ್ಯಕ್ಷತೆ, ಕುಡ್ಕ, ಹುಚ್ಚ, ನಿರೀಕ್ಷೆ, ಶುದ್ಧಶುಂಠಿ, ಲೇಡೀಸ್ ಓನ್ಲಿ, ಡನ್ ಲಪ್ ಗರ್ಲ್, ಚೈನಾದೋಸ್ತಿ, ಜನ್ಮಾಂತ್ರಿಯ, ಅಂಟಿ ಮಿಂಟಿ ಚಾವಲ್ ಚಿಂಟಿ ಮುಂತಾದ 80 ನಾಟಕಗಳು.

ಮಕ್ಕಳ ನಾಟಕಗಳು

ಮಲೆಯ ಮಕ್ಕಳು, ಸೋಲದ ಸೋಲಿಗರು, ಜಂಬೂಸವಾರ ಮುಂತಾದ 17 ನಾಟಕಗಳು

ಬೊಂಬೆ ನಾಟಕ

ಸಂಗೀತ ಸಂಸ್ಕಾರ, ಟ್ವಿಂಕಲ್ ಟ್ವಿಂಕಲ್

ಬೀದಿ ನಾಟಕಗಳು

ಕಟ್ಟು, ನಿಜವ ಹೇಳಬಲ್ಲಿರಾ, ಬಸ್‌ ಸ್ಟಾಪ್, ಕುರ್ಚ, ಮೊದಲಾದ 27ನಾಟಕಗಳು

ಪ್ರಶಸ್ತಿಗಳು

ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ.

English summary
Remembering veteran theater personality and Cine journalist A S Murthy popularl known as 'Akashavani Eranna' on his 3rd death anniversary. Born to A N Subbarao, who was also a great writer in Kannada, he continued the tradition of drama, music and literature in his family. Murthy passed away on Dec 12, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X